ಕ್ರಿಕೆಟ್ ಕೋಚ್ ಹುದ್ದೆ : ರವಿಶಾಸ್ತ್ರಿ, ಸೆಹ್ವಾಗ್ ಪೈಪೋಟಿ

ಮುಂಬೈ, ಜು. ೧೦- ಭಾರತೀಯ ಕ್ರಿಕೆಟ್ ತಂಡದ ನೂತನ ಮುಖ್ಯ ತರಬೇತುದಾರರಾಗಿ ಹಿರಿಯ ಕ್ರಿಕೆಟಿಗರಾದ ರವಿಶಾಸ್ತ್ರೀ, ಇಲ್ಲವೇ ವೀರೇಂದ್ರ ಸೆಹ್ವಾಗ್ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ನಾಯಕ ವಿರಾಟ್ ಕೊಹ್ಲಿ ಅವರೊಂದಿಗಿನ ವೈಮನಸ್ಸಿನಿಂದಾಗಿ ಮುಖ್ಯ ತರಬೇತುದಾರರ ಸ್ಥಾನಕ್ಕೆ ಅನಿಲ್ ಕುಂಬ್ಳೆ ರಾಜೀನಾಮೆ ನೀಡಿದ್ದರು. ಅವರಿಂದ ತೆರೆವಾದ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಸಂಜೆ ವೇಳೆಗೆ ಮುಖ್ಯ ತರಬೇತುದಾರ ಯಾರಾಗಲಿದ್ದಾರೆ ಎನ್ನುವುದು ಸ್ಪಷ್ಟವಾಗಲಿದೆ.

ಈ ತಿಂಗಳ 25 ರಿಂದ ಶ್ರೀಲಂಕಾ ವಿರುದ್ಧ ಭಾರತ ತಂಡ ಶ್ರೀಲಂಕಾದಲ್ಲಿ ಮೂರು ಟೆಸ್ಟ್ ಐದು ಏಕದಿನ ಹಾಗೂ ಒಂದು ಟಿ-20 ಪಂದ್ಯದ ಸರಣಿಗಳನ್ನು ಆಡಲಿದ್ದು, ಶ್ರೀಲಂಕಾದಲ್ಲಿ ತಂಡವನ್ನು ಸೇರಿಕೊಳ್ಳಲು ರವಿಶಾಸ್ತ್ರಿ ಅಥವಾ ವೀರೇಂದ್ರ ಸೆಹ್ವಾಗ್ ಅವರಿಗೆ ಟಿಕೆಟ್ ಖಾತರಿಯಾಗಿದೆ.

ರವಿಶಾಸ್ತ್ರಿ ಈ ಹಿಂದೆ ಟಿಂ ಇಂಡಿಯಾದ ನಿರ್ದೇಶಕರಾದ ಕೆಲಸ ನಿರ್ವಹಿಸಿದ್ದು ಬಹುತೇಕ ಅವರೇ ಮುಖ್ಯ ತರಬೇತುದಾರರಾದ ಸಾಧ್ಯತೆಗಳಿವೆ. ಈ ಬಗ್ಗೆ ಹಿರಿಯ ಕ್ರಿಕೆಟಿ‌ಗ ವೀರೇಂದ್ರ ಸೆಹ್ವಾಗ್ ಈ ಸ್ಥಾನಕ್ಕಾಗಿ ಪ್ರಬಲ ಪೈಪೋಟಿ ನಡೆಸಿದ್ದಾರೆ.

ಇವರಿಬ್ಬರೂ ಹಿರಿಯ ಕ್ರಿಕೆಟಿಗರು ಅಲ್ಲದೆ ಕರ್ನಾಟಕ ದೊಡ್ಡ ಗಣೇಶ್ ಸೇರಿದಂತೆ ಹಲವು ಮಂದಿ ತರಬೇತುದಾರರ ಸ್ಥಾನಕ್ಕಾಗಿ ಪೈಪೋಟಿ ನಡೆಸಿದ್ದಾರೆ.

Leave a Comment