ಕ್ರಿಕೆಟ್ ಆಟಕ್ಕೆ ಕ್ಷೀಣಿಸುತ್ತಿರುವ ಪ್ರೋತ್ಸಾಹ

ತುಮಕೂರು, ಜ. ೧೧- ಕ್ರಿಕೆಟ್ ಆಟಕ್ಕೆ ಸುಮಾರು ವರ್ಷಗಳ ಇತಿಹಾಸ ಇದೆ. ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ಇದಕ್ಕೆ ಹೆಚ್ಚು ಒತ್ತು ನೀಡುತ್ತಿದ್ದರು. ಇತ್ತೀಚೆಗೆ ಕ್ರಿಕೆಟ್ ಆಟ ಕಡಿಮೆಯಾಗುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್‍ಗೆ ಹೆಚ್ಚು ಒಲವು ತೋರಿಸುವುದರಿಂದ ಗ್ರಾಮೀಣ ಮಟ್ಟದಲ್ಲಿ ಪ್ರೋತ್ಸಾಹ ಕಡಿಮೆಯಾಗುತ್ತಿದೆ ಎಂದು ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ಜಿಲ್ಲಾಧ್ಯಕ್ಷ ಎ. ಮಹಾಲಿಂಗಯ್ಯ ತಿಳಿಸಿದರು.

ನಗರದ 11ನೇ ವಾರ್ಡಿನ ಮೆಳೇಕೋಟೆಯ ಗಂಗಸಂದ್ರ ರಸ್ತೆಯಲ್ಲಿ ಕನಕ ಕ್ರಿಕೆಟಱ್ಸ್ ಟೀಂ ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡೆಗೆ ಹೆಚ್ಚಿನ ಪ್ರೋತ್ಸಹ ನೀಡಬೇಕು. ವಿದ್ಯಾರ್ಥಿಗಳು ಪ್ರತಿ ದಿನ ಒಂದು ಗಂಟೆಯಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಮೀಸಲಿಡಬೇಕು ಹಾಗೂ ಕ್ರೀಡೆಯಲ್ಲಿ ತೊಡಗಿಸಿಕೊಂಡಲ್ಲಿ ಆ ದಿನ ಅತೀ ಉತ್ಸಾಹ-ಉಲ್ಲಾಸದಿಂದ ಕೆಲಸ ಕಾರ್ಯಗಳನ್ನು ಮಾಡಲು ಪ್ರೇರಣೆ ಸಿಗುತ್ತದೆ. ಕ್ರೀಡೆ ಮತ್ತು ಪಠ್ಯ ಎರಡರಲ್ಲೂ ಸಮವಾಗಿ ಅಭ್ಯಾಸ ಮಾಡಿದ್ದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಇಂತಹ ಒಂದು ಕ್ರೀಡಾಕೂಟವನ್ನು ಕನಕರ ಹೆಸರಿನಲ್ಲಿ ಪಂದ್ಯಾವಳಿ ನಡೆಸುತ್ತಿರುವುದಕ್ಕೆ ಅತಿ ಹೆಚ್ಚು ಸಂತೋಷವಾಗುತ್ತಿರುವುದರಿಂದ ಈ ಟೀಂಗೆ ಬೇಕಾದ ಕ್ರೀಡಾ ಸಾಮಗ್ರಿಗಳನ್ನು ನಮ್ಮ ಸಂಘದ ವತಿಯಿಂದ ಕೊಡಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಬಸವರಾಜು. ವೈ., ಚಂದ್ರಶೇಖರ್ ಎಂ.ಆರ್., ಸತೀಶ್, ಗೋವಿಂದರಾಜ್, ಸುನೀಲ್, ಮಂಜುನಾಥ್, ಮಿಥುನ್, ಚಂದನ್, ಕಿಶೋರ್, ಸ್ವರೂಪ್, ಭಾರ್ಗವ್, ತೇಜಸ್, ರಾಮು, ಗಿರೀಶ್, ಯಶ್ವಂತ್, ದರ್ಶನ್, ಶ್ರೀವತ್ಸ ಮತ್ತಿತರರು ಭಾಗವಹಿಸಿದ್ದರು.

Leave a Comment