ಕ್ರಿಕೆಟ್‌ ನಾಶ ಮಾಡುವಲ್ಲಿ ಐಸಿಸಿ ಯಶಸ್ವಿ ಎಂದ ಅಖ್ತರ್

ನವದೆಹಲಿ, ಮೇ 26 -ಕಳೆದ 10 ವರ್ಷಗಳಲ್ಲಿ ಕ್ರಿಕೆಟ್‌ ಆಟವನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್ (ಐಸಿಸಿ) ಸಂಪೂರ್ಣ ನಾಶ ಮಾಡಿದ್ದು, ಮಂಡಿಯೂರಿ ನಿಲ್ಲುವಂತಹ ಪರಿಸ್ಥಿತಿ ತಂದೊಡ್ಡಿದೆ ಎಂದು ಪಾಕಿಸ್ತಾನದ ಮಾಜಿ ವೇಗಿ‌ ಶೊಯೇಬ್‌ ಅಖ್ತರ್‌ ಗುಡುಗಿದ್ದಾರೆ.
ಇಎಸ್‌ಪಿಎನ್‌ ಕ್ರಿಕ್‌ಇನ್ಫೋ ಸಲುವಾಗಿ ವೀಕ್ಷಕ ವಿವರಣೆಗಾರ ಸಂಜಯ್‌ ಮಾಂಜ್ರೇಕರ್‌ ನಡೆಸಿಕೊಟ್ಟ ಆನ್‌ಲೈನ್‌ ಕಾರ್ಯಕ್ರಮದಲ್ಲಿ
ಮಾತನಾಡಿರುವ ಅವರು, ಸೀಮಿತ ಓವರ್ ಗಳ‌ ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್‌ ಸ್ನೇಹಿ ನಿಯಮಗಳನ್ನು ಪರಿಚಯಿಸಿರುವುದಕ್ಕೆ ಕಿಡಿ ಕಾರಿದ್ದಾರೆ
ಇತ್ತೀಚೆಗೆ ಅದರಲ್ಲೂ ಟಿ20 ಕ್ರಿಕೆಟ್‌ನಲ್ಲಿ ವೇಗದ ಬೌಲರ್‌ಗಳು ಮಂದಗತಿಯ ಎಸೆತಗಳ ಮೊರೆಹೋಗುತ್ತಿದ್ದು, ಸ್ಪಿನ್ನರ್‌ಗಳು ವೇಗವಾಗಿ ಎಸೆಯುವ ಪ್ರಯತ್ನ ಮಾಡುತ್ತಿದ್ದು ಈ ಪ್ರವೃತ್ತಿ ಕುರಿತಾಗಿ ಅಭಿಪ್ರಾಯ ಹಂಚಿಕೊಳ್ಳುವಂತೆ ಸಂಜಯ್‌ ಕೇಳಿದ್ದಕ್ಕೆ ಅಖ್ತರ್‌ ಈ ರೀತಿಯ ಆರೋಪ ಮಾಡಿದ್ದಾರೆ.
“ಒಂದು ಸತ್ಯಾಂಶ ಹೇಳುತ್ತೇನೆ. ಐಸಿಸಿ ಕ್ರಿಕೆಟ್‌ ಆಟವನ್ನು ನಾಶಮಾಡುತ್ತಿದೆ. ಕಳೆದ 10 ವರ್ಷಗಳಿಂದ ನಾನು ಇದನ್ನು ಮುಕ್ತವಾಗಿ ಹೇಳುತ್ತಲೇ ಇದ್ದೇನೆ. ಐಸಿಸಿ, ಕ್ರಿಕೆಟ್‌ ಹಾಳು ಮಾಡುವುದರಲ್ಲಿ ಯಶಸ್ವಿಯಾಗಿದೆ. ಈ ನಿಟ್ಟಿನಲ್ಲಿ ಒಳ್ಳೆ ಕೆಲಸ ಮಾಡಿದ್ದೀರಿ ಎಂದು ಪ್ರಶಂಸಿಸ ಬಲ್ಲೆ ಅಷ್ಟೆ. ಅಂದುಕೊಂಡದ್ದನ್ನು ಮಾಡಿದ್ದೀರಿ,” ಎಂದು ಅಖ್ತರ್‌ ಜರಿದಿದ್ದಾರೆ.

Share

Leave a Comment