ಕ್ರಿಕೆಟಿಗ ಪೃಥ್ವಿ ಶಾ ನಿಷೇಧ ಅಂತ್ಯ

ಮುಂಬೈ, ನ ೯-ಮಾದಕ ದ್ರವ್ಯ ಸೇವನೆ ಆರೋಪದ ಮೇರೆಗೆ ಬಿಸಿಸಿಐನಿಂದ ನಿಷೇಧಕ್ಕೆ ಒಳಗಾಗಿದ್ದ ಟೀಂ ಇಂಡಿಯಾ ಯುವ ಆರಂಭಿಕ ಆಟಗಾರ ಪೃಥ್ವಿ ಶಾ ಮತ್ತೆ ಕ್ರಿಕೆಟ್‌ಗೆ ತಂಡ ಸೇರಿಕೊಳ್ಳುವ ನಿರೀಕ್ಷೆ ಇದೆ.

ಕಳೆದ ೮ ತಿಂಗಳ ಹಿಂದೆ ಬಿಸಿಸಿಐನಿಂದ ನಿಷೇಧಕ್ಕೆ ಒಳಗಾಗಿದ್ದ ಪೃಥ್ವಿ ಶಾ ಮತ್ತೆ ಮುಂಬೈ ತಂಡದ ಪರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.

ಡೋಪಿಂಗ್ ಪರೀಕ್ಷೆಯಲ್ಲಿ ಪೃಥ್ವಿ ಶಾ ಮಾದಕ ದ್ರವ್ಯ ಸೇವನೆ ಮಾಡಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಬಿಸಿಸಿಐ ನಿಷೇಧ ಹೇರಿ ಆದೇಶ ನೀಡಿತ್ತು. ನ.೧೫ಕ್ಕೆ ಪೃಥ್ವಿ ಶಾ ನಿಷೇಧ ಅಂತ್ಯವಾಗಲಿದ್ದು, ಈ ಹಿನ್ನೆಲೆಯಲ್ಲಿ ಮುಂಬರುವ ಪಂದ್ಯಗಳಲ್ಲಿ ಮುಂಬೈ ತಂಡವನ್ನು ಪೃಥ್ವಿ ಶಾ ಪ್ರತಿನಿಧಿಸುವ ಸಾಧ್ಯತೆ ಇದೆ. ಮುಂಬೈ ಆಯ್ಕೆ ಸಮಿತಿಯ ತಾತ್ಕಾಲಿಕ ಅಧ್ಯಕ್ಷ ಮಿಲಿಂದ್ ಈ ಕುರಿತು ಮಾಹಿತಿ ನೀಡಿದ್ದು, ಪೃಥ್ವಿ ಶಾ ಆಯ್ಕೆಯನ್ನು ಪರಿಗಣಿಸಿ ಚರ್ಚೆ ನಡೆಸುವುದಾಗಿ ಹೇಳಿದ್ದಾರೆ.

ಸದ್ಯ ಮುಂಬೈ ತಂಡ ಸೈಯದ್ ಅಲಿ ಟ್ರೋಫಿಯ ಮೊದಲ ೩ ಪಂದ್ಯಗಳಿಗೆ ತಂಡವನ್ನು ಈಗಾಗಲೇ ಘೋಷಣೆ ಮಾಡಲಾಗಿದ್ದು, ಮುಂಬೈ ತಂಡದ ಪ್ರಮುಖ ಯುವ ಆಟಗಾರರಾದ ಶ್ರೇಯರ್ ಅಯ್ಯರ್, ಶಾರ್ದೂಲ್ ಠಾಕೂರ್, ಶಿವಂ ದುಬೆ ಅವರು ಬಾಂಗ್ಲಾ ವಿರುದ್ಧದ ಟಿ೨೦ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದಾರೆ. ಶಾ ಮೇಲಿನ ನಿಷೇಧ ತೆರವಾಗುವ ವೇಳೆಗೆ ಮುಂಬೈ ಟೂರ್ನಿಯಲ್ಲಿ ತನ್ನ ೭ ಪಂದ್ಯಗಳನ್ನು ಆಡಲಿದೆ.

Leave a Comment