ಕ್ರಿಕೆಟಿಗ ಇರ್ಫಾನ್ ಹೊಸ ಇನ್ನಿಂಗ್ಸ್

 

ಮುಂಬೈ, ಅ ೧೬- ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಕ್ರಿಕೆಟ್ ಕ್ರೀಸ್‌ನಿಂದ ಇದೀಗ ಬಣ್ಣದ ಲೋಕದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ.

ಅಜಯ್ ಜ್ಞಾನಮುತ್ತು ನಿರ್ದೇಶನದ ತಮಿಳು ಚಿತ್ರದಲ್ಲಿ ಪಠಾಣ್ ಸಿನಿಮಾದಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಒಂದು ಕಾಲದಲ್ಲಿ ಟೀಂ ಇಂಡಿಯಾದಲ್ಲಿ ತಮ್ಮ ಮಾರಕ ಬೌಲಿಂಗ್‌ನಿಂದ ಎದುರಾಳಿಗಳ ನಿದ್ದೆಗೆಡಿಸುತ್ತಿದ್ದ ಆಲ್‌ರೌಂಡರ್ ಇರ್ಫಾನ್ ಇದೀಗ ಬಣ್ಣದ ಲೋಕದಲ್ಲಿ ಅದೃಷ್ಟ ಪರೀಕ್ಷೆ ಮಾಡಲು ಹೊರಟಿದ್ದಾರೆ.

ವಿಕ್ರಮ್ ನಟನೆಯ ತಮಿಳು ಸಿನಿಮಾವೊಂದ್ರಲ್ಲಿ ಕ್ರಿಕೆಟ್ ಆಟಗಾರ ಇರ್ಫಾನ್ ನಟಿಸಲಿದ್ದಾರೆ. ಅಜಯ್ ಜ್ಞಾನಮುತ್ತು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದು, ಸದ್ಯ ವಿಕ್ರಮ್ ೫೮ ಅನ್ನುವ ಟೈಟಲ್ ಇಡಲಾಗಿದೆ. ಈ ಮೂಲಕ ಇರ್ಫಾನ್ ಕಾಲಿವುಡ್ ಅಂಗಳಕ್ಕೆ ಎಂಟ್ರಿ ಕೊಡಲಿದ್ದಾರೆ.

ಸಿನಿಮಾದ ಪಾತ್ರವೊಂದಕ್ಕೆ ಟರ್ಕಿಷ್‌ರಂತೆ ಕಾಣಿಸುವ ಕ್ರೀಡಾಪಟು ಮತ್ತು ಹೆಸರಾಂತ ವ್ಯಕ್ತಿ ಬೇಕಿತ್ತು. ಹೀಗಾಗಿ ಇರ್ಫಾನ್ ಈ ಪಾತ್ರಕ್ಕೆ ಸೂಕ್ತ ಅಂತಾ ಅವರನ್ನ ಸಂಪರ್ಕಿಸಿದಾಗ ಅವರು ಕೂಡ ಓಕೆ ಎಂದಿದ್ದಾರೆ ಅಂತಾ ನಿರ್ದೇಶಕ ಅಜಯ್ ಹೇಳಿದ್ದಾರೆ. ಸದ್ಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಇರ್ಫಾನ್ ಈಗ ಸಿನಿಮಾ ಜಗತ್ತಿನಲ್ಲಿ ಹೊಸ ಇನಿಂಗ್ಸ್ ಆರಂಭಿಸಲಿದ್ದಾರೆ.

Leave a Comment