ಕ್ರಿಕೆಟಿಗರನ್ನು ಕೈಹಿಡಿದ ಐಪಿಎಲ್

ನವದೆಹಲಿ, ಅ ೪- ಕ್ರಿಕೆಟ್ ಪ್ರಿಯರನ್ನು ಐಪಿಎಲ್ ಮಾಡಿದ ಮೋಡಿ ಅದ್ಬುತ ಅಮೋಘವೇ ಸರಿ, ೨೦೦೮ರಲ್ಲಿ ಭಾರತದಲ್ಲಿ ಈ ಟಿ-೨೦ ಸರಣಿ ಶುರುವಾದಾಗಿನಿಂದ ಎಷ್ಟೋ ಕ್ರಿಕೆಟಿಗರ ಬದುಕು ಹಸನಾಗಿದೆ. ಅದರಲ್ಲೂ ಐಪಿಎಲ್ ಜ್ವರ ಹೆಚ್ಚಾಗುತ್ತಿದ್ದಂತೆ ಕ್ರಿಕೆಟಿಗರ ಜೇಬು ಕೂಡ ಭರ್ತಿಯಾಗಿರುವುದಂತೂ ನಿಜ.

ಇದಕ್ಕೆ ತಾಜಾ ಉದಾಹರಣೆ ಎಂದರೆ ಹೈದ್ರಾಬಾದ್ ತಂಡಕ್ಕೆ  ೨.೬ ಕೋಟಿ ರೂ.ಗೆ ಬಿಕರಿಯಾಗಿದ್ದ ೨೨ರ ಹರೆಯದ ಆಟಗಾರ ಮೊಹಮ್ಮದ್ ಸಿರಾಜ್.

ಇವರ ಮೂಲ ಬೆಲೆ ಕೇವಲ ೨೦ ಲಕ್ಷ ರೂಪಾಯಿ ಇತ್ತು. ಆದರೆ ಅವರು ಮಾಡಿದ ಕಮಲ್ ಯಾರು ಮರೆಯಲ್ಲ ಸಾಧ್ಯವಿಲ್ಲ ಮೊಹಮ್ಮದ್ ಸಿರಾಜ್ ಆಟೋ ರಿಕ್ಷಾ ಚಾಲಕನ ಮಗ. ಬಡತನವೇ ಹಾಸು ಹೊಕ್ಕಾಗಿರುವ ಕುಟುಂಬ ಅವರದ್ದು. ಐಪಿಎಲ್ ನಲ್ಲಿ ಹೈದ್ರಾಬಾದ್ ತಂಡಕ್ಕೆ ೨.೬ ಕೋಟಿಗೆ ಸಿರಾಜ್ ಮಾರಾಟವಾದ ನಂತರ ಕುಟುಂಬ ನೆಮ್ಮದಿಯ ನಿಟ್ಟುಸಿರು ಬಿಟ್ಟಿತ್ತು.

ಕೇವಲ ಸಿರಾಜ್ ಮಾತ್ರವಲ್ಲ ರವೀಂದ್ರ ಜಡೇಜಾ, ಉಮೇಶ್ ಯಾದವ್ ಸೇರಿದಂತೆ ಹಲವು ಕ್ರಿಕೆಟರ್‌ಗಳ ಬದುಕೇ ಬದಲಾಗಿದೆ. ರೋಹಿತ್ ಶರ್ಮಾ ಬಳಿ ಕೂಡ ಶಾಲೆಯ ಶುಲ್ಕ ಕಟ್ಟಲು ಹಣವಿರುತ್ತಿರಲಿಲ್ವಂತೆ. ಉಮೇಶ್ ಯಾದವ್ ಅತ್ಯಂತ ಬಡ ಕುಟುಂಬದಿಂದ ಬಂದವರು. ಅವರ ತಂದೆ ಗಣಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ಹಣಕಾಸಿನ ಅಡಚಣೆಯಿಂದಾಗಿ ೧೨ನೇ ತರಗತಿ ನಂತರ ಶಿಕ್ಷಣ ಮುಂದುವರಿಸಲು ಕೂಡ ಉಮೇಶ್ ಯಾದವ್ ಗೆ ಸಾಧ್ಯವಾಗಲಿಲ್ಲ. ಆದರೆ ಕ್ರಿಕೆಟ್ ಬಗ್ಗೆ ಒಲವು ಬೆಳೆಸಿಕೊಂಡಿದ್ದ ಉಮೇಶ್ ಯಾದವ್, ಟೆನಿಸ್ ಟೂರ್ನಿಗಳಲ್ಲೂ ಆಡಿ ಅಲ್ಪ ಹಣ ಗಳಿಸುತ್ತಿದ್ದರು.  ಅವರಲ್ಲಿದ್ದ ಅದ್ಭುತ ಪ್ರತಿಭೆ ಟೀಂ ಇಂಡಿಯಾದಲ್ಲಿ ಸ್ಥಾನ ಕಲ್ಪಿಸಿತ್ತು.

ಇರ್ಫಾನ್ ಪಠಾಣ್ ಹಾಗೂ ಯುಸುಫ್ ಪಠಾಣ್ ಕೂಡ ಬಡತನದಲ್ಲೇ ಹುಟ್ಟಿ ಬೆಳೆದವರು. ಜೀವನ ನಿರ್ವಹಣೆಗಾಗಿ ತಂದೆಯ ಜೊತೆಗೆ ಮಸೀದಿ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದರು. ಮಸೀದಿ ಆವರಣದಲ್ಲೇ ಕ್ರಿಕೆಟ್ ಆಡುವ ಮೂಲಕ ಗಮನ ಸೆಳೆದ ಸಹೋದರರು  ಹೀಗೆ ಮುಂದುವರೆದು, ಅವರಲ್ಲಿದ್ದ ಕ್ರಿಕೆಟ್ ಪ್ರೇಮ ಅವರನ್ನು ಅಂತರಾಷ್ಟ್ರೀಯ ಮಟ್ಟಕ್ಕೂ ಕರೆತಂದಿದೆ.

ಮನೋಜ್ ತಿವಾರಿ ರೈಲು ನಿಲ್ದಾಣದಲ್ಲಿ ತಂದೆಯೊಂದಿಗೆ ಕೆಲಸ ಮಾಡುತ್ತಾ  ಇದ್ದವರು. ಕ್ರಿಕೆಟ್ ತರಬೇತಿ ಪಡೆಯುವ ಆಸೆಯಿದ್ದರೂ ಹಣವಿರಲಿಲ್ಲ. ಸಂಬಂಧಿಕರೆಲ್ಲ ಸಹಾಯ ಮಾಡಿ ಕ್ರಿಕೆಟ್ ಕ್ಲಬ್ ಗೆ ಅವರನ್ನು ಸೇರಿಸಿದ್ರು. ನಂತರ ಮನೋಜ್ ರಣಜಿ ತಂಡದಲ್ಲಿ ಸ್ಥಾನ ಪಡೆದಿದ್ದು ಇತಿಹಾಸ.

ಕಮ್ರಾನ್ ಖಾನ್ ಕುಟುಂಬದವರು ಕಟ್ಟಿಗೆ ಒಡೆದು ಬದುಕು ಸಾಗಿಸುತ್ತಿದ್ದರು. ಎಷ್ಟೋ ಬಾರಿ ರೈಲು ನಿಲ್ದಾಣಗಳಲ್ಲಿ, ರಸ್ತೆ ಬದಿಯಲ್ಲೇ ಅವರು ರಾತ್ರಿ ಕಳೆದಿದ್ದಾರೆ. ೨೦೦೯ರಲ್ಲಿ ಕಮ್ರಾನ್ ರಾಜಸ್ತಾನ ರಾಯಲ್ಸ್ ತಂಡಕ್ಕೆ ಆಯ್ಕೆಯಾದಾಗ ಈ ಕುಟುಂಬದ ದಿಕ್ಕೇ ಬದಲಾಗಿದೆ.

ಮುನಾಫ್ ಪಟೇಲ್ ಒಬ್ಬ ಕಾರ್ಮಿಕನಾಗಿದ್ದರು. ಅವರ ತಂದೆಯದ್ದು ಕೂಡ ಕೂಲಿ ಕೆಲಸ. ಆದ್ರೆ ಟೀಂ ಇಂಡಿಯಾದ ವೇಗಿಯಾಗಿ ಗುರುತಿಸಿಕೊಂಡ ಮೇಲೆ ಮುನಾಫ್ ಕುಟುಂಬದ ಮೇಲಿದ್ದ ಬಡತನದ ಕರಿಛಾಯೆ ಸರಿದಿದೆ.

ಮೊಹಮ್ಮದ್ ಸಿರಾಜ್

ಉಮೇಶ್ ಯಾದವ್

ಇರ್ಫಾನ್ ಪಠಾಣ್ ಹಾಗೂ ಯುಸುಫ್ ಪಠಾಣ್

ಮನೋಜ್ ತಿವಾರಿ

ಕಮ್ರಾನ್ ಖಾನ್

ಮುನಾಫ್ ಪಟೇಲ್

Leave a Comment