ಕ್ರಿಕೆಟರ್ ಆಗಿ ಆರುಣ್ ಜೇಟ್ಲಿ

ನವದೆಹಲಿ, ಆ 24- ಹಿರಿಯ ಬಿಜೆಪಿ ನಾಯಕ, ಮಾಜಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ನಿಧನದ ಬಗ್ಗೆ ಕಾಂಗ್ರೆಸ್ ಹಿರಿಯ ಮುಖಂಡ ಕಪಿಲ್ ಸಿಬಾಲ್ ತೀವ್ರ ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ. ಜೇಟ್ಲಿ ಅವರಿಗೆ ಸಂತಾಪ ಸೂಚಿಸಿ ಅವರೊಂದಿಗೆ ಕ್ರಿಕೆಟ್ ಆಡುತ್ತಿರುವ ಅಪರೂಪದ ಫೋಟೋವನ್ನು ಸಿಬಾಲ್ ಟ್ವೀಟ್ ಮಾಡಿದ್ದಾರೆ.
“ಕ್ರಿಕೆಟ್ ನಲ್ಲಿ ನಾವಿಬ್ಬರೂ” ಎಂಬ ಶೀರ್ಷಿಕೆ ನೀಡಿ ಪೋಸ್ಟ್ ಮಾಡಿರುವ ಈ ಎರಡು ಚಿತ್ರಗಳು ವೈರಲ್ ಆಗುತ್ತಿವೆ ಪೋಟೋದೊಂದಿಗೆ ಸಿಬಾಲ್, ಜೇಟ್ಲಿ ನಿಧನ “ತಮ್ಮನ್ನು ತೀವ್ರ ಬಾಧಿಸುತ್ತಿದೆ. ನನ್ನ ಆತ್ಮೀಯ ಹಳೆಯ ಸ್ನೇಹಿತ .. ಆತ್ಮೀಯ ಸಹೋದ್ಯೋಗಿ. ರಾಜಕೀಯ ಮತ್ತು ದೇಶದ ಆರ್ಥಿಕತೆಗೆ ಅವರ ಸೇವೆಗಳು ಸದಾ ಕಾಲ ಉಳಿಯಲಿವೆ. ಅರುಣ್ ಜೇಟ್ಲಿ ಪಕ್ಷದ ನೆಲೆಗಳನ್ನು ಮೀರಿ ಅಭಿಮಾನಿಗಳನ್ನು ಹೊಂದಿದ್ದರು. ತನ್ನ ಸ್ನೇಹಿತರಿಗಾಗಿ, ಪಕ್ಷಕೋಸ್ಕರ ಸದಾ ಸ್ಥಿರವಾಗಿ ನಿಲ್ಲುತ್ತಿದ್ದರು ಎಂದು ಟ್ವೀಟ್ ಮಾಡಿದ್ದಾರೆ.

Leave a Comment