ಕ್ರಷರ್ ಮಾಲೀಕನ ವಿರುದ್ದ ಸೂಕ್ತ ಕ್ರಮಕ್ಕೆ ಒತ್ತಾಯ

ಪಾಂಡವಪುರ: ಜು:12- ಧೂಳಿನಿಂದ ಬೆಳೆಗೆ ಹಾನಿಯುಂಟಾಗುತ್ತಿದೆ ಎಂಬುದಾಗಿ ಪ್ರಶ್ನಿಸಿದ ರೈತನಿಗೆ ಹಲ್ಲೆ ನಡೆಸಿದ ಕ್ರಷರ್ ಮಾಲೀಕನ ಬಳಿ ಪೊಲೀಸರು ರೈಫಲ್(ಗನ್) ವಶಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಕ್ರಷರ್ ಮಾಲೀಕನ ವಿರುದ್ದ ಪೊಲೀಸರು ಸೂಕ್ತ ಕ್ರಮತೆಗೆದುಕೊಳ್ಳಬೇಕು ಎಂದು ರೈತಸಂಘದ ಕಾರ್ಯಕರ್ತರ ಸರ್ಕಲ್ ಇನ್ಸ್‍ಪೆಕ್ಟರ್ ದೀಪಕ್ ಅವರಿಗೆ ಬುಧವಾರ ಒತ್ತಾಯಿಸಿದರು.
ಪಟ್ಟಣದ ಪೊಲೀಸ್ ಠಾಣೆಯ ಎದುರು ಜಮಾಹಿಸಿದ ರೈತಸಂಘದ ಕಾರ್ಯಕರ್ತರು ಸರ್ಕಲ್ ಇನ್ಸೆಪಕ್ಟರ್ ಅವರಿಗೆ ತಮ್ಮ ಮನವಿ ಮಾಡಿದರು.
ಹಸನ್‍ಪುರದ ಬಳಿ ಇರುವ ರಾಘವೇಂದ್ರ ಕ್ರಷರ್ ಮಾಲೀಕರ ಬಳಿ ಕ್ರಷರ್ ಧೂಳಿನಿಂದ ನಮ್ಮ ಜಮೀನಿನಲ್ಲಿ ಬೆಳೆಯುತ್ತಿರುವ ಬೆಳೆ ನಷ್ಟವ ಉಂಟಾಗುತ್ತಿದೆ ಎಂಬುದಾಗಿ ಪ್ರೆಶ್ನಿಸಿದ ಚಿನಕುರಳಿ ಗ್ರಾಮದ ರೈತ ವಸಂತ್ ಅವರಿಗೆ ಕ್ರಷರ್ ಮಾಲೀಕರಾದ ಸೋಫಿಕ್ ಹಾಗೂ ಅನ್ವರ್ ಅವರ ಮೇಲೆ ಮಾಡಿ ಅಲ್ಲಿದೆ ಕಾರಿನಲ್ಲಿದ್ದ ರೈಫಲ್(ಗನ್)ನನ್ನು ತೆಗೆದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಹಾಗಾಗಿ ಕ್ರಷರ್ ಮಾಲೀಕರನನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ನಂತರ ಮಾತನಾಡಿದ ಸರ್ಕಲ್ ಇನ್ಸ್‍ಪೆಕ್ಟರ್ ಎಂ.ಕೆ.ದೀಪಕ್, ನೆನ್ನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೈತ ವಸಂತ್ ಹಾಗೂ ಕ್ರಷರ್ ಮಾಲೀಕರು ಇಬ್ಬರು ದೂರು ನೀಡಿದ್ದಾರೆ. ರಾಘವೇಂದ್ರ ಕ್ರಷರ್ ಮಾಲೀಕರ ಬಳಿ ರೈಫಲ್ ವಶಪಡಿಸಿಕೊಂಡಿರುವುದ ಬಗ್ಗೆ ಮಾಲೀಕರಿಗೆ ದಾಖಲಾತಿ ಕೇಳಿದ್ದೇನೆ. ಪ್ರಕರಣದ ಬಗ್ಗೆ ತನಿಖೆ ನಡೆಸಿ ಕ್ರಮತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.
ಸಂದರ್ಭದಲ್ಲಿ ರೈತಸಂದ ತಾಲೂಕು ಅಧ್ಯಕ್ಷ ಎ.ಎಲ್.ಕೆಂಪೂಗೌಡ, ಮುಖಂಡ ಕೆ.ಟಿ.ಗೋವಿಂದೇಗೌಡ, ಅಮೃತಿ ರಾಜಶೇಖರ್, ಪುಟ್ಟೇಗೌಡ, ಕೆ.ಕುಬೇರ, ವಿಜಿಕುಮಾರ್, ಗಂಗಣ್ಣ, ಹಿರೇಮರಳಿ ಶಿವಕುಮಾರ್, ಬೆಟ್ಟಹಳ್ಳಿ ಆನಂದ್ ಸೇರಿದಂತೆ ಹಲವರು ಹಾಜರಿದ್ದರು.

Leave a Comment