ಕ್ಯಾಲ್ಸಿಯಂ ಕೊರತೆ ಲಕ್ಷಣ

ನಮ್ಮ ದೇಹಕ್ಕೆ ಅಗತ್ಯವಿರುವ ಪೌಷ್ಠಿಕಾಂಶಗಳಲ್ಲಿ ಕ್ಯಾಲ್ಸಿಯಂ ಕೂಡ ಒಂದು. ಕ್ಯಾಲ್ಸಿಯಂ ನಮ್ಮ ಆರೋಗ್ಯ ಹಾಗೂ ಬೆಳವಣಿಗೆಯಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ಕ್ಯಾಲ್ಸಿಯಂ ಕಡಿಮೆಯಾದ್ರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ನಿಮ್ಮ ಮೂಳೆಗಳು ದುರ್ಬಲವಾಗಿವೆ ಅಂದ್ರೆ ನಿಮ್ಮ ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯಾಗಿದೆ ಎಂಬುದು ಸ್ಪಷ್ಟ. ಕ್ಯಾಲ್ಸಿಯಂ ಕೊರತೆಯಿಂದ ಮೂಳೆಗಳು ದುರ್ಬಲವಾಗುತ್ತವೆ. ಮಕ್ಕಳಲ್ಲಿ ಬಹುಬೇಗ ಮೂಳೆ ಮುರಿತ ಕಂಡು ಬರುತ್ತದೆ. ಸ್ನಾಯುಗಳು ಬಿಗಿಯುವುದು, ನೋವು ಕಾಣಿಸಿಕೊಳ್ಳುತ್ತದೆ. ಕ್ಯಾಲ್ಸಿಯಂ ಕೊರತೆಯ ಇನ್ನೊಂದು ಲಕ್ಷಣ ಹಲ್ಲು ದುರ್ಬಲವಾಗುವುದು.

ದಂತಕ್ಷಯ ಕ್ಯಾಲ್ಸಿಯಂ ಕೊರತೆಯ ಮೊದಲ ಲಕ್ಷಣ. ಮಕ್ಕಳಲ್ಲಿ ಕ್ಯಾಲ್ಸಿಯಂ ಕೊರತೆಯಾದ್ರೆ ತಡವಾಗಿ ಹಲ್ಲುಗಳು ಬರುತ್ತವೆ. ಉಗುರುಗಳು ದುರ್ಬಲವಾಗುವುದು ಇನ್ನೊಂದು ಲಕ್ಷಣ. ಆರೋಗ್ಯಕರ ಉಗುರಿಗೆ ಕ್ಯಾಲ್ಸಿಯಂ ಬಹಳ ಮುಖ್ಯ. ಕ್ಯಾಲ್ಸಿಯಂ ಕಡಿಮೆಯಾದ್ರೆ ಉಗುರುಗಳು ಬಹಳ ಬೇಗ ಮುರಿದು ಬೀಳುತ್ತವೆ. ಹುಡುಗಿಯರಲ್ಲಿ ತಡವಾಗಿ ಮುಟ್ಟು ಶುರುವಾದರೇ ಅವರಲ್ಲಿ ಕ್ಯಾಲ್ಸಿಯಂ ಕೊರತೆಯಿದೆ ಎಂದೇ ಅರ್ಥ.

ಕೂದಲು ಉದುರುತ್ತಿದ್ದರೆ, ಕೂದಲಿನ ಬೆಳವಣಿಗೆ ಕುಂಟಿತಗೊಂಡಿದ್ದರೆ ಕ್ಯಾಲ್ಸಿಯಂ ಕೊರತೆಯಾಗಿದೆ ಎಂಬುದು ಸ್ಪಷ್ಟ. ಸದಾ ದಣಿವು ಎನ್ನುತ್ತಿರುವ ವ್ಯಕ್ತಿಯಲ್ಲೂ ಕ್ಯಾಲ್ಸಿಯಂ ಕೊರತೆ ಎದ್ದು ಕಾಣುತ್ತದೆ. ಕ್ಯಾಲ್ಸಿಯಂ ಕೊರತೆಯಿಂದ ಮೂಳೆ, ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಹಾಗೆ ನಿದ್ದೆ ಬರುವುದಿಲ್ಲ. ಇದು ಮಾನಸಿಕ ಒತ್ತಡ, ಭಯಕ್ಕೂ ಕಾರಣವಾಗುತ್ತದೆ. ಜೊತೆಗೆ ದಣಿವಾಗುತ್ತದೆ.

ಗುಲ್ಕಂದ್‌ನಿಂದಾಗುವ ಅನುಕೂಲ

ದೇಹಕ್ಕೆ ತಂಪು: ಗುಲ್ಕಂದ್ ದೇಹದ ತಾಪವನ್ನು ಕಡಿಮೆ ಮಾಡಿ, ಸನ್ ಸ್ಟ್ರೋಕ್‌ಗಳಿಂದ ದೇಹವನ್ನು ಕಾಪಾಡುತ್ತದೆ. ನಿಯಮಿತವಾಗಿ ಇದನ್ನು ಸೇವಿಸುವುದರಿಂದ ಹೊಟ್ಟೆಯಲ್ಲಿ ಹುಣ್ಣಾಗುವ ಸಮಸ್ಯೆ ಶಮನವಾಗುತ್ತದೆ. ಜೊತೆಗೆ ಹೊಟ್ಟೆಯಲ್ಲಿನ ಆಸಿಡ್ ಅಂಶವನ್ನು ಸರಿದೂಗಿಸಿ ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ.

ರಕ್ತ ಶುದ್ದಿ: ಗುಲ್ಕಂದ್ ದೇಹದಿಂದ ವಿಷಕಾರಿ ಅಂಶಗಳನ್ನು ತೆಗೆದು ರಕ್ತವನ್ನು ಶುದ್ದಿಗೊಳಿಸುತ್ತದೆ. ಈ ಮೂಲಕ ತ್ವಚೆಯ ಸಮಸ್ಯೆಗಳಾದ ಮೊಡವೆ, ಕೆಂಪು ಕಲೆಗಳು, ಬ್ಲ್ಯಾಕ್‌ಹೆಡ್ಸ್‌ನ್ನು ತೊಲಗಿಸುತ್ತದೆ ಮತ್ತು ಬಾರದಂತೆ ತಡೆಯುತ್ತದೆ.

ಒತ್ತಡ ಶಮನ: ಗುಲ್ಕಂದ್ ದೇಹಕ್ಕೆ ತಂಪು ನೀಡುವುದಲ್ಲದೇ ದೇಹದಲ್ಲಿನ ನರಗಳ ಮೇಲೆ ಬೀಳುವ ಒತ್ತಡವನ್ನು ನಿವಾರಿಸಿ ಪೋಷಿಸುತ್ತದೆ.

ಋತುಚಕ್ರ ಆರಂಭದ ದಿನಗಳ ನೋವು ನಿವಾರಣೆ: ಋತುಚಕ್ರ ಆರಂಭದ ದಿನಗಳಲ್ಲಿ ಕಾಡುವ ಅತಿಯಾದ ಹೊಟ್ಟೆ ಮತ್ತು ಬೆನ್ನು ನೋವನ್ನು ಕಡಿಮೆ ಮಾಡುತ್ತದೆ, ಜೊತೆಗೆ ಅತಿ ರಕ್ತಸ್ರಾವವನ್ನು ತಡೆದು ಅನೀಮಿಯಾ ಸಮಸ್ಯೆಯಿಂದ ದೂರವಿರಿಸುತ್ತದೆ.

ಮೂಗಿನಲ್ಲಿ ರಕ್ತ ಬರುವುದನ್ನು ತಡೆಯುತ್ತದೆ: ಸಾಮಾನ್ಯವಾಗಿ ಬೇಸಿಗೆಯ ಸಮಯದಲ್ಲಿ ಮಕ್ಕಳಲ್ಲಿ ಈ ತರಹ ಮೂಗಿನಲ್ಲಿ ರಕ್ತ ಬರುವ ಸಮಸ್ಯೆ ಕಾಣಿಸುತ್ತದೆ. ನಿಯಮಿತವಾಗಿ ಗುಲ್ಕಂದ್ ಸೇವನೆಯಿಂದ ಈ ಸಮಸ್ಯೆಯನ್ನು ತಡೆಯಬಹುದು.

Leave a Comment