ಕ್ಯಾಲೆಂಡರ್ ಬಿಡುಗಡೆ ಸಮಾರಂಭ

ಮಂಗಳೂರು, ಜ. ೮- ಶ್ರೀ ಮಂಜುನಾಥ ದೇವಸ್ಥಾನ, ಮಂಗಳೂರು ಇಲ್ಲಿನ ೨೦೧೯ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಸಮಾರಂಭವು ಇತ್ತೀಚೆಗೆ ಶ್ರೀ ದೇವಳದ ಮಂಜುನಾಥ ದೇವರ ಗರ್ಭಗುಡಿಯ ಎದುರುಗಡೆ ನೆರವೇರಿಸಲಾಯಿತು.
ಈ ಬಗ್ಗೆ ಶ್ರೀ ದೇವಳದ ಪ್ರಧಾನ ಅರ್ಚಕರಾದ ಶ್ರೀ ವಾಸುದೇವ ಭಟ್ ಪ್ರಾರ್ಥನೆಯನ್ನು ಸಲ್ಲಿಸಿ, ದೇವಳದ ಕ್ಯಾಲೆಂಡರನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ. ಎ. ಜನಾರ್ಧನ ಶೆಟ್ಟಿಗೆ ಹಸ್ತಾಂತರಿಸಿದರು. ಎಲ್ಲರ ಸಮಕ್ಷಮ ದೇವಳದ ೨೦೧೯ನೇ ಸಾಲಿನ ಕ್ಯಾಲೆಂಡರನ್ನು ಬಿಡುಗಡೆಗೊಳಿಸಿದರು.
ಈ ಕಾರ್ಯಕ್ರಮದಲ್ಲಿ ದೇವಳದ ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ರಂಜನ್ ಕುಮಾರ್, ಸುರೇಶ್ ಕುಮಾರ್, ದಿನೇಶ್ ದೇವಾಡಿಗ, ಚಂದ್ರಕಲಾ ದೀಪಕ್ ರಾವ್ ಉಪಸ್ಥಿತರಿದ್ದರು.

Leave a Comment