ಕ್ಯಾಮೆರಾಮೆನ್ ಮೇಲೆ ಹಲ್ಲೆ: ಕ್ರಮಕ್ಕೆ ಒತ್ತಾಯ

ರಾಯಚೂರು.ಸೆ.06- ವಿಜಯಪುರ ಜಿಲ್ಲೆಯಲ್ಲಿ ಟಿ.ವಿ 5 ಕ್ಯಾಮೆರಾಮೆನ್‌ ಮೇಲೆ ಪೊಲೀಸರು ಹಲ್ಲೆ ಮಾಡಿರುವುದನ್ನು ಖಂಡಿಸಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ನಡೆಸಿತು.
ಈ ಸಂಬಂಧ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಟಿ.ವಿ 5 ಕ್ಯಾಮೆರ್‌ ಮೆನ್‌ ಸುರೇಶ್ ಚಿನಗುಂಡಿ ಅವರು ದ್ವಿಚಕ್ರ ವಾಹನ ಮೇಲೆ ಕಚೇರಿಗೆ ತೆರಳುವ ಸಂದರ್ಭದಲ್ಲಿ ನಾಲ್ವರು ಐ‌ಆರ್‌ಬಿ ಪೊಲೀಸ್ ಪೇದೆಗಳು ಹಿಗ್ಗಾ-ಮುಗ್ಗಾ ಮನಬಂದಂತೆ ಥಳಿಸಿರುವುದು ಖಂಡನೀಯ. ವಿಜಯಪೂರು ನಗರದ ಹೊರ ವಲಯದ ಭೂತ್‌ನಾಳ ಇಕ್ಕಟ್ಟಾದ ರಸ್ತೆಯಲ್ಲಿ ಐ‌ಆರ್‌ಬಿ ವ್ಯಾನ್‌ ಬೈಕ್‌ಮೇಲೆ ಹತ್ತಿಸಲು ಪ್ರಯತ್ನಿಸಿದ್ದಾರೆ.
ಈ ಕುರಿತು ಕ್ಯಾಮೆರಾಮೆನ್ ಪ್ರಶ್ನಿಸಿದ್ದರಿಂದ ವ್ಯಾನ್‌ನಲ್ಲಿ ಕರೆದೊಯ್ದು, ಹಲ್ಲೆ ಮಾಡಿದ್ದಾರೆ. ಕ್ಯಾಮೆರಾಮೆನ್ ಮೇಲೆ ತೀವ್ರವಾಗಿ ಹಲ್ಲೆ ನಡೆಸಿರುವ ಐ‌ಆರ್‌ಬಿ ಪೊಲೀಸರ ಮೇಲೆ ಕೂಡಲೇ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಬಸವರಾಜ ನಾಗಡದಿನ್ನಿ, ಪ್ರಧಾನ ಕಾರ್ಯದರ್ಶಿ ಆರ್.ಗುರುನಾಥ, ಉಪೇಂದ್ರ, ನೀಲಕಂಠಸ್ವಾಮಿ, ಭೀಮಣ್ಣ ಹೀರಾ, ಯಮುನಪ್ಪ, ಸುರೇಶ್, ಸಂತೋಷ್ ಸಾಗರ್, ದುರ್ಗೇಶ್, ರಾಜಶೇಖರ, ಸಿದ್ದಯ್ಯ ಸ್ವಾಮಿ, ಭರತ್, ಮುತ್ತಣ್ಣ, ತಾಯಪ್ಪ, ಅನಿಲ್ ಕುಮಾರ್, ಶಿವಮೂರ್ತಿ ಹಿರೇಮಠ್, ಶಿವಪ್ಪ ಮಡಿವಾಳ್, ವೀರೇಶ್, ರಮೇಶ್, ಖಾದರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Comment