ಕ್ಯಾಂಡಲ್ ಮಾರ್ಚ್ ನಾಳೆ

ಕಲಬುರಗಿ ಫೆ 13: ಪುಲ್ವಾಮಾ ದಾಳಿ ನಡೆದು ನಾಳೆಗೆ ಒಂದು ವರ್ಷ. ಈ ಹಿನ್ನೆಲೆಯಲ್ಲಿ ದಾಳಿಯಲ್ಲಿ ಹುತಾತ್ಮರಾದ ನಮ್ಮ ವೀರಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲು ನಾಳೆ ( ಫೆ 14) ಕ್ಯಾಂಡಲ್ ಮಾರ್ಚ್ ಹಮ್ಮಿಕೊಳ್ಳಲಾಗಿದೆ ಎಂದು ರಾವಣಸಾಮ್ರಾಜ್ಯ ಸಂಘಟನೆ ಅಧ್ಯಕ್ಷ ಆನಂದ ದೊಡ್ಮನಿ ತಿಳಿಸಿದರು.      ಸಂಜೆ 6.35 ಕ್ಕೆ ಡಾ.ಎಸ್.ಎಂ ಪಂಡಿತರಂಗಮಂದಿರದಿಂದ ಜಗತ್ ವೃತ್ತದವರೆಗೆ ಕ್ಯಾಂಡಲ್ ಮಾರ್ಚ್ ನಡೆಯಲಿದೆ.100ರಿಂದ 150 ಜನ ಭಾಗವಹಿಸುವರು ಎಂದರು.

ಸುದ್ದಿಗೋಷ್ಠಿಯಲ್ಲಿ ಗೌತಮ ಸಿಂಧೆ,ವಿನೋದ ಹಣಮಂತಗೋಳ, ಶಿವಶರಣ, ಪ್ರಜ್ವಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Comment