ಕ್ಯಾಂಟರ್ ಚಾಲಕನ ಬೆದರಿಸಿ ಸುಲಿಗೆ

ತುಮಕೂರು, ಡಿ. ೬- ಕ್ಯಾಂಟರ್ ಲಾರಿ ಚಾಲಕನ ಕುತ್ತಿಗೆಗೆ ಟವೆಲ್ ಬಿಗಿದು ಬೆದರಿಸಿದ ದುಷ್ಕರ್ಮಿಗಳು 63 ಸಾವಿರ ರೂ. ನಗದನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ನಗರದ ಸಿರಾ ಗೇಟ್‌ನ ಸಾಯಿಹಿರೋ ಶೋ ರೂಂ ಬಳಿ ನಡೆದಿದೆ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಬೀರನಹಳ್ಳಿ ಗ್ರಾಮದ ನಿವಾಸಿ ಪ್ರಜ್ವಲ್ ಎಂಬುವರೇ ಹಣ ಕಳೆದುಕೊಂಡಿರುವ ವ್ಯಕ್ತಿ. ಈತ ಬೆಂಗಳೂರಿನ ಮೋಹಿತ್ ಟ್ರಾನ್ಸ್‌ಪೋರ್ಟ್‌ನ ಕ್ಯಾಂಟರ್ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದು, ಬೆಂಗಳೂರಿನಿಂದ ಕ್ಯಾಂಟರ್‌ನಲ್ಲಿ ಬೈಕ್‌ಗಳನ್ನು ಲೋಡ್ ಮಾಡಿಕೊಂಡು ಸಿರಾದ ಶೋರೂಂ ನಲ್ಲಿ ಅನ್‌ಲೋಡ್ ಮಾಡಿ ಅವರು ಕೊಟ್ಟಿದ್ದ ಬಾಡಿಗೆ ಹಣವಾದ 63 ಸಾವಿರ ರೂ. ಮೊತ್ತವನ್ನು ತೆಗೆದುಕೊಂಡು ಬರುತ್ತಿದ್ದ ವೇಳೆ ಊಟ ಮಾಡಲು ವಾಹನ ನಿಲ್ಲಿಸಿ ಹೋದಾಗ ದುಷ್ಕರ್ಮಿಗಳು ಪ್ರಜ್ವಲ್ ಅವರ ಕುತ್ತಿಗೆಗೆ ಟವೆಲ್‌ನಿಂದ ಬಿಗಿದು ಅವರ ಬಳಿ ಇದ್ದ 63 ಸಾವಿರ ರೂ.ನಗದನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.

ಈ ಸಂಬಂಧ ತುಮಕೂರು ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave a Comment