ಕೌಶಲ್ಯ ಯೋಜನೆ ಸದ್ಬಳಕೆ ಮಾಡಿಕೊಳ್ಳಲು ಕರೆ

ಕೊಳ್ಳೇಗಾಲ.ಮೇ.19- ನಿರುದ್ಯೋಗಿ ಯುವಕಪೀಳಿಗೆ ಕುಶಲತೆ ತರಬೇತಿ ಮೂಲಕ ಸರ್ಕಾರದ ಕೌಶಲ್ಯ ಯೋಜನೆ ಸದ್ಬಳಕೆಗೆ ಮುಂದಾಗಬೇಕು ಎಂದು ವಕೀಲರಾದ ಡಿ. ವೆಂಕಟಾಚಲ ತಿಳಿಸಿದರು.
ಕೊಳ್ಳೇಗಾಲ ಪಟ್ಟಣದ ರೋಟರಿ ಭವನದಲ್ಲಿ ದಂತೋಪಂತ್ ಥೇಂಗಡಿ ರಾಷ್ಟ್ರೀಯ ಕಾರ್ಮಿಕ ಶಿಕ್ಷಣ ಮತ್ತು ಅಭಿವೃದ್ಧಿ ಮಂಡಳಿ, ಮೈಸೂರು ಕಾರ್ಮಿಕ ಮತ್ತು ಉದ್ಯೋಗ ಇಲಾಖೆ, ಉಪ ಪ್ರಾದೇಶಿಕ ನಿರ್ಧೇಶನಾಲಯ, ರೋಟರಿ ಸಂಸ್ಥೆ ಹಾಗೂ ಒಡಿಪಿ ಸಂಯುಕ್ತಾಶ್ರಯದಲ್ಲಿ ಗುರುವಾರ ಮಧುವನಹಳ್ಳಿ ಪರಿಶಿಷ್ಟ ಜಾತಿ ಮಹಿಳಾ ಕೂಲಿ ಕಾರ್ಮಿಕರಿಗೆ ಆಯೋಜಿಸಿದ್ದ 2 ದಿಗಳ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಅಭ್ಯುದಯಕ್ಕಾಗಿ ಅನೇಕ ಯೋಜನೆಗಳನ್ನು ಪ್ರತಿವರ್ಷ ಜಾರಿಗೊಳಿಸಲಾಗುತ್ತಿದೆ. ಆದರೆ ಈ ಯೋಜನೆಗಳ ಬಗ್ಗೆ ಅರಿವಿನ ಕೊರತೆ ಪರಿಣಾಮ ಮಧ್ಯವರ್ತಿಗಳು ಈ ಯೋಜನೆ ಸೌಲಭ್ಯ ಪಡೆಯುವುದು ಒಂದೆಡೆಯಾದರೆ, ಯೋಜನೆ ಹಣ ಸಮರ್ಪಕ ಬಳಕೆಯಾಗದೆ ಹಿಂದಕ್ಕೆ ಹೋಗುವ ಸ್ಥಿತಿ ಇದೆ ಎಂದು ಹೇಳಿದರು.
ಮಹಿಳೆಯರು ಕೇವಲ ಕೂಲಿಕೆಲಸಕ್ಕೆ ಸೀಮಿತಗೊಳ್ಳದೆ ಅಸಂಘಟಿತ ಕೂಲಿಕಾರ್ಮಿಕರ ಅಭ್ಯುದಯಕ್ಕೆ ಇರುವ ಯೋಜನೆಗಳ ಬಗ್ಗೆ ಅರಿವನ್ನು ಪಡೆದುಕೊಂಡು ಸದ್ಬಳಕೆಗೆ ಮುಂದಾಗಬೇಕು ಎಂದು ತಿಳಿಸಿದರು.
ಸಂಘಟಿತ ಮತ್ತು ಅಸಂಘಟಿತ ಕೂಲಿಕಾರ್ಮಿಕರಿಗೆ ಇರುವ ವಿಶೇಷ ಸೌಲಭ್ಯಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಕಾರ್ಮಿಕ ಶಿಕ್ಷಣಾಧಿಕಾರಿ ಶಂಕರಲಿಂಗೇಗೌಡ ಉಪನ್ಯಾಸ ನೀಡಿದರು.
ಒಡಿಪಿ ಸೇವಾ ಪ್ರತಿನಿದಿ ಮಾದೇಶಮ್ಮ, ನಂದಿತಾ ಮಹಿಳಾ ಸ್ವಸಹಾಯ ಸಂಘದ ಸುಮ, ಧನಲಕ್ಷ್ಮೀ ಸಂಘದ ಮಹದೇವಮ್ಮ, ಪದ್ಮ, ಇಂದ್ರಾ ಸಂಘದ ಮನೆಯಮ್ಮ, ಶಿವಮ್ಮ, ಮಹದೇಶ್ವರ ಸಂಘದ ಜ್ಯೋತಿ, ಸುಂದ್ರಮ್ಮ, ಮಹದೇವಮ್ಮ, ಜಯಮ್ಮ, ಪುಟ್ಟಸಿದ್ದಮ್ಮ ಹಾಜರಿದ್ದರು.

Leave a Comment