ಕೌಟಂಬಿಕ ಚಿತ್ರದತ್ತ ನಿಖಿಲ್

-ಚಿಕ್ಕನೆಟಕುಂಟೆ ಜಿ. ರಮೇಶ್
’ಜಾಗ್ವಾರ್ ಚಿತ್ರದ ಬಳಿಕ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ಮುಂದಿನ ಚಿತ್ರಕ್ಕೆ ಯಾರು ನಿರ್ದೇಶಕರು ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ. ಜೊತೆಗೆ ಚೆನ್ನಾಂಬಿಕಾ ಸಂಸ್ಥೆಯಿಂದ ಏಳನೇ ಸಿನಿಮಾ ನಿರ್ಮಾಣಕ್ಕೂ ವೇದಿಕೆ ಸಿದ್ದವಾಗಿದೆ. ನಿಖಿಲ್ ಎರಡನೇ ಸಿನಿಮಾದ ನಿರ್ದೇಶಕರು ಯಾರು ಎನ್ನುವ ಬಗ್ಗೆ ಹಲವು ದಿನಗಳಿಂದ ಕುತೂಹಲ ಹೆಚ್ಚಾಗಿತ್ತು. ಅದಕ್ಕೆ ಕಾರಣ ಎನ್ನುವಂತೆಯೂ ಹಲವು ನಿರ್ದೇಶಕರ ಜೊತೆ ಮಾತುಕತೆಯೂ ನಡೆದಿತ್ತು. ಅದು ಅಂತಿಮವಾಗಿ ಬಹದ್ದೂರು ಚಿತ್ರ ನಿರ್ದೇಶನ ಮಾಡಿದ್ದ ಚೇತನ್ ಕುಮಾರ್ ಅವರಿಗೆ ಸಿಕ್ಕಿದೆ.
ಈ ಬಾರಿಯೂ ಕೂಡ ಕನ್ನಡದ ಜೊತೆ ತೆಲುಗಿನಲ್ಲಿ ಚಿತ್ರವನ್ನು ಏಕಕಾಲಕ್ಕೆ ನಿರ್ಮಾಣ ಮಾಡುತ್ತಿದ್ದು, ಈ ಬಾರಿ ಬಹುತೇಕ ಕನ್ನಡದ ಕಲಾವಿದರು ಮತ್ತು ತಂತ್ರಜ್ಞರಿಗೆ ಆದ್ಯತೆ ನೀಡುವ ಜೊತೆಗೆ ಕರ್ನಾಟಕದಲ್ಲಿ ಹೆಚ್ಚಿನ ಭಾಗದ ಚಿತ್ರೀಕರಣ ಮಾಡಲು ನಿರ್ಮಾಪಕ ಕುಮಾರಸ್ವಾಮಿ ಒಲವು ವ್ಯಕ್ತ ಪಡಿಸಿದ್ದಾರೆ. ರಾಜ್ಯ ವಿಧಾನಸಭೆಯ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಚಿತ್ರದ ಸಂಪೂರ್ಣ ನಿರ್ಮಾಣದ ಹೊಣೆಯನ್ನು ಪುತ್ರನ ಹೆಗಲ ಮೇಲೆ ಹಾಕಿದ್ದಾರೆ.
ಕಳೆದವಾರ “ಪ್ರೊಡಕ್ಷನ್ ನಂಬರ್-೭” ಚಿತ್ರದ ಕಥೆಯ ಪೂಜೆ ಇತ್ತು ,ಪತ್ನಿ,ಪುತ್ರ ಹಾಗು ಚಿತ್ರತಂಡದೊಂದಿಗೆ ಪೂಜೆಯಲ್ಲಿ ಪಾಲ್ಗೊಂಡ ಬಳಿಕ ಕುಮಾರಸ್ವಾಮಿ ಚಿತ್ರದ ಬಗ್ಗೆ ವಿವರ ನೀಡಿದರು. ಜಾಗ್ವಾರ್ ಚಿತ್ರ ಬಿಡುಗಡೆಯಾದ ಆರು ತಿಂಗಳ ಬಳಿಕ ಹೊಸ ಸಿನಿಮಾ ಕೈಗೆತ್ತಿಕೊಳ್ಳಲಾಗುತ್ತಿದೆ. ಮೊದಲ ಸಿನಿಮಾ ತೆಲುಗು ಮಯವಾಗಿತ್ತು ಎನ್ನುವ ಆರೋಪದಿಂದ ಹೊರ ಬರುವ ಉದ್ದೇಶದಿಂದ ಈ ಬಾರಿ ಕನ್ನಡದ ಮಂದಿಗೆ ಆದ್ಯತೆ ನೀಡಲು ನಿರ್ಧರಿಸಲಾಗಿದೆ.
ಚೇತನ್ ಕ್ರೀಯಾಶೀಲ ನಿರ್ದೇಶಕ, ಕನ್ನಡದ ಹಲವು ನಿರ್ದೇಶಕರಿಗೆ ಸಾಹಿತ್ಯದ ಗಂಧ ಗಾಳಿ ಗೊತ್ತಿಲ್ಲ, ಆದರೆ ಚೇತನ್‌ಗೆ ಸಾಹಿತ್ಯ ಹೆಚ್ಚುವರಿಯಾಗಿ ಬಳುವಳಿಯಂತೆ ಸಿಕ್ಕಿದೆ. ಈ ಬಾರಿ ಸಿನಿಮಾವನ್ನು ಕರ್ನಾಟಕದಲ್ಲಿ ಚಿತ್ರೀಕರಣ ಮಾಡಲಿದ್ದು ಕೆಲ ಭಾಗದ ಚಿತ್ರೀಕರಣಕ್ಕೆ ರಾಜಸ್ತಾನಕ್ಕೆ ಹೋಗುವ ಸಾಧ್ಯತೆಗಳಿವೆ, ಕನ್ನಡದ ಸೊಗಡಿಗೆ ತಕ್ಕಂತೆ ಸಿನಿಮಾ ಮಾಡಲಾಗುವುದು. ಚಿತ್ರದ ಕಥೆ ಸಂಪೂರ್ಣ ತೃಪ್ತಿ ತಂದಿದೆ. ನಮ್ಮ ಬ್ಯಾನರ್‌ನಲ್ಲಿ ಮೂಡಿ ಬಂದ ಚಂದ್ರ ಚಕೋರಿ ಮತ್ತು ಸೂರ್ಯವಂಶ ಚಿತ್ರಗಳಿಗಿಂತ ಹೆಚ್ಚಿನ ಯಶಸ್ಸು ಸಿನಿಮಾ ವಿಶ್ವಾಸಹೊಂದಲಾಗಿದೆ.
ಒಳ್ಳೆಯ ಕಥೆ ಜೊತೆಗೆ ಸಾಮಾಜಿಕ ಸಂದೇಶವೂ ಚಿತ್ರದಲ್ಲಿದೆ. ಜೂನ್ ಮೊದಲವಾರ ಚಿತ್ರೀಕರಣ ಆರಂಭಿಸಿ ಸತತ ೧೦೦ ದಿನಗಳ ಕಾಲ ಚಿತ್ರೀಕರಣ   ನಡೆಸಿ ನವಂಬರ್ ಇಲ್ಲವೆ ಡಿಸೆಂಬರ್‌ನಲ್ಲಿ ಚಿತ್ರವನ್ನು ತೆರೆಗೆ ತರುವ ಉದ್ದೇಶವೊಂದಲಾಗಿದೆ. ಚಿತ್ರದಲ್ಲಿ ನಾಯಕನ ಕುಟುಂಬಕ್ಕೆ ಇತಿಹಾಸವಿದೆ,    ಕೆಲ ಕಾರಣಾಂತರಗಳಿಂದ ಆ ಕುಟುಂಬ ಒಡೆದು ಹೋಗುತ್ತದೆ. ಅಂತಹ ಕುಟುಂಬವನ್ನು  ನಾಯಕ ಹೇಗೆ ಒಂದು ಮಾಡುತ್ತಾನೆ ಎನ್ನುವುದು ಚಿತ್ರದ ತಿರುಳು ಎಂದು ಕಥೆಯ ಸ್ವಲ್ಪ ಗುಟ್ಟು ಮಾತ್ರ ಬಿಟ್ಟುಕೊಟ್ಟ ಕುಮಾರಸ್ವಾಮಿ ಚಿತ್ರಕ್ಕೆ ಒಳ್ಳೆಯ ಹೆಸರು  ಇಡುವ ಉದ್ದೇಶವಿದೆ. ಆದರೆ ಅದು ಬೇರೊಬ್ಬರ ಬಳಿ ಇದೆ ಅವರ ಮನವೊಲಿಸಲಾಗುವುದು ಸದ್ಯದಲ್ಲಿಯೇ ಶೀರ್ಷಿಕೆ ಬಹಿರಂಗ ಪಡಿಸುವುದಾಗಿ ಹೇಳಿಕೊಂಡರು.
ನಾಯಕ ನಿಖಿಲ್,ಜಾಗ್ವಾರ್ ಚಿತ್ರದ ಸಂಪೂರ್ಣ ಕ್ರೆಡಿಟ್ ತಂದೆ ಕುಮಾರಸ್ವಾಮಿ ಅವರಿಗೆ ಸಲ್ಲಲಿದೆ.ಈಗಷ್ಟೇ ಕಣ್ಣು ಬಿಡುತ್ತಿದ್ದೇನೆ.  ಕಲಿಯವುದು ಇನ್ನೂ      ಸಾಕಷ್ಟಿದೆ.ಅಳೆದು ತೂಗಿ ಕತೆ ಆಯ್ಕೆ ಮಾಡಿಕೊಂಡಿದ್ದೇವೆ. ಅದು ಚೆನ್ನಾಗಿ ಮೂಡಿ ಬಂದಿದೆ.ನಿರ್ಮಾಣದ ಜವಬ್ದಾರಿಯನ್ನು ಅಪ್ಪ ನಮಗೆ ವಹಿಸಿದ್ದಾರೆ.ಆದರೆ ಅಂತಿಮವಾಗಿ ನಿರ್ದಾರ ಕೈಗೊಳ್ಳುವರು ಅವರೇ. ರಾಜಕಾರಣದಲ್ಲಿ ಬ್ಯುಸಿ ಇರುವುದರಿಂದ ಅವರಿಗೆ ಹೆಚ್ಚು  ತೊಂದರೆ ಕೊಡುವುದಿಲ್ಲ.

ಒಳ್ಳೆಯ ಚಿತ್ರ ಮಾಡುವ ಉದ್ದೇಶವಿದೆ.
ಚಿತ್ರಕ್ಕೆ ನಾಯಕಿಗಾಗಿ ಹುಡುಕಾಟ ನಡೆದಿದೆ. ಕನ್ನಡದಲ್ಲಿ ಒಳ್ಳೆಯ ತಂತ್ರಜ್ಞರಿದ್ದಾರೆ ಅವರಿಗೆ ಮುಂದಿನ ದಿನಗಳಲ್ಲಿ ಅವಕಾಶ ಮಾಡಿಕೊಡಲಾಗುವುದು ಎಂದರು.
ನಿರ್ದೇಶಕ ಚೇತನ್, ನಿಖಿಲ್ ಎಲ್ಲರ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಇದೆ. ಕಥೆ ಮಾಡುವಾಗ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರು.ಒಳ್ಳೆಯ ಚಿತ್ರ ಮಾಡುವ ಉದ್ದೇಶವಿದೆ. ಎಮೋಷನ್, ಆಕ್ಷನ್,ಅಭಿನಯ ಸೇರಿದಂತೆ ಮನೆಮಂದಿಯೆಲ್ಲಾ ಕುಳಿತು ಒಟ್ಟಿಗೆ ನೋಡಬಹುದಾದ ಫ್ಯಾಮಿಲಿ ಎಂಟಟೈನ್‌ಮೆಂಟ್ ಸಿನಿಮಾ ಆಗಲಿದೆ ಎಂದು ಭರವಸೆ ನೀಡಿದರು.

ವಿ.ಹರಿಕೃಷ್ಣ ಸಂಗೀತದಲ್ಲಿ ಐದು ಹಾಡುಗಳು    ಮೂಡಿ ಬರಲಿವೆ.
ಚಿತ್ರವನ್ನು ಹರಸಲು ಲಹರಿ ವೇಲು, ಯುವ ನಿರ್ದೇಶಕರಾದ ಎ.ಪಿ ಅರ್ಜುನ್, ಪವನ್ ಒಡೆಯಾರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Leave a Comment