ಕೋವಿಡ್ -19; ಮಂಗಳೂರು ಪೊಲೀಸರಿಗೆ ವಿಶೇಷ ರಕ್ಷಣಾ ಉಪಕರಣಗಳ ವಿತರಣೆ

ಮಂಗಳೂರು, ಏ 6 -ಕೋವಿಡ್ -19 ವಿರುದ್ಧದ ಸಮರದಲ್ಲಿ ಪಾಲ್ಗೊಂಡಿರುವ ಮಂಗಳೂರು ನಗರ ಪೊಲೀಸರು ಕಣ್ಣಿನ ರಕ್ಷಣೆ ಸೇರಿದಂತೆ ವೈಯಕ್ತಿಕ ರಕ್ಷಣಾ ಉಪಕರಣಗಳನ್ನು ಬಳಸುತ್ತಿರುವುದು ಕಂಡುಬಂದಿತು.
ಈ ಕುರಿತು ಟ್ವೀಟ್ ಮಾಡಿರುವ ನಗರ ಪೊಲೀಸ್ ಆಯುಕ್ತ ಹರ್ಷ, ಕೊರೋನಾ ವೈರಸ್ ಸೋಂಕಿಗೆ ಹೆಚ್ಚು ಹತ್ತಿರದಲ್ಲಿರುವ ಪೊಲೀಸರಿಗೆ ವಿಶೇಷ ರಕ್ಷಣಾ ಉಪಕರಣ, ಮುಖಗವಸುಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದ್ದಾರೆ.
ನಾವು ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಿದ್ದೇವೆ. ನಿಮಗಾಗಿ..ಅವರೊಂದಿಗೆ ದಯೆಯಿಂದ ವರ್ತಿಸಿ. ಎಲ್ಲಾ ಕಾನೂನಾತ್ಮಕ ನಿರ್ದೇಶನಗಳನ್ನು ಪಾಲಿಸಿ ಎಂದು ಕರೆ ನೀಡಿದ್ದಾರೆ.

Leave a Comment