ಕೋವಿಡ್-19 : ಗರ್ಭಿಣಿಯರಿಗೆ ಆತಂಕ ಬೇಡ

ಪ್ರಸ್ತುತ ಇರುವ ಸಾಂಕ್ರಾಮಿಕದ ಅವಧಿಯಲ್ಲಿ ಗರ್ಭಧಾರಣೆಯನ್ನು ನಿಭಾಯಿಸುವುದು ಅತ್ಯಂತ ಸವಾಲು ಮತ್ತು ಒತ್ತಡದ ಸಂಗತಿಯಾಗಿದೆ. ಕೊರೋನಾವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಗರ್ಭವತಿಯರಲ್ಲಿ ಹೆಚ್ಚಿನ ಆತಂಕ ಮನೆ ಮಾಡಿದೆ. ಈ ಮಾರಕ ವೈರಸ್ ಹರಡುತ್ತಿರುವುದರಿಂದ ತಮ್ಮ ಗರ್ಭಧಾರಣೆ ಸುರಕ್ಷಿತವಾಗಿ ಮುಂದುವರಿಯಲಿದೆಯೇ ಅಥವಾ ತಾವು ಸುರಕ್ಷಿತವಾಗಿರಬಲ್ಲೆವೇ ಅಥವಾ ಹುಟ್ಟುವ ಮಗು ವೈರಸ್ ಸೋಂಕಿನಿಂದ ಅಪಾಯ ಎದುರಿಸುವುದೇ ಎಂಬ ಆತಂಕವನ್ನು ಉಂಟು ಮಾಡಿದೆ. ಗರ್ಭಧಾರಣೆಯ ಯೋಜನೆಗಳನ್ನು ಮುಂದುವರಿಸುವುದು ವಿವೇಕಯುತವಾಗಿದೆಯೇ ಎಂದು ಗರ್ಭಿಣಿಯಾಗಲು ಬಯಸುವ ಮಹಿಳೆಯರಲ್ಲಿ ಗೊಂದಲ ಮೂಡಿಸಿದೆ.
ಶುಭ ಸುದ್ದಿಯೆಂದರೆ, ಲಭ್ಯವಿರುವ ಸಂಶೋಧನೆ ಮತ್ತು ಅಂಕಿಅಂಶಗಳ ಪ್ರಕಾರ ತಾಯಿಯಿಂದ ಮಗುವಿಗೆ ಕೊರೋನಾ ಸೋಂಕು ಹರಡುವುದಿಲ್ಲ ಎಂಬುದು ಪತ್ತೆಯಾಗಿದೆ. ಕೊರೋನಾವೈರಸ್ ಸೋಂಕು ಗರ್ಭವತಿಯರಿಗೆ ಅಂಟಿಲ್ಲದಿರುವುದು ಸಹ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಸೋಂಕಿನ ಅಪಾಯವಿರುವುದಿಲ್ಲ. ಈ ವೈರಸ್ ಸೋಂಕು ಇಲ್ಲದಿರುವ ಆರೋಗ್ಯವಂತ ಮಗುವನ್ನು ಅವರು ಎದುರು ನೋಡಬಹುದಾಗಿದೆ. ಆದರೆ, ಇದಕ್ಕಾಗಿ ಅವರು ಎಲ್ಲಾ ಸಮರ್ಪಕ ಮತ್ತು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅಗತ್ಯವಿದೆ.

ಅವಧಿಪೂರ್ವ ಪ್ರಸವ, ಭ್ರೂಣದ ತೊಂದರೆ ಅಥವಾ ಪೊರೆಯ ಅಕಾಲಿಕ ಛಿದ್ರತೆಯ ಕೆಲವು ಪ್ರಕರಣಗಳನ್ನು ಹೊರತುಪಡಿಸಿದರೆ ಇದುವರೆಗೆ ಸಾಂಕ್ರಾಮಿಕದಿಂದ ಗರ್ಭವತಿಯರಿಗೆ ವ್ಯತಿರಿಕ್ತ ಪರಿಣಾಮ ಉಂಟಾಗಿರುವ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ. ಇವುಗಳಲ್ಲಿ ಯಾವುದೂ ಆತಂಕಕ್ಕೆ ಒಳಗಾಗುವ ಸಮಸ್ಯೆಗಳಲ್ಲ. ಏಕೆಂದರೆ, ಇವುಗಳನ್ನು ವೈದ್ಯಕೀಯವಾಗಿ ಪರಿಹರಿಸಬಹುದಾಗಿದೆ.

ತಾಯಿಯಿಂದ ಮಗುವಿಗೆ ಸೋಂಕು ಹರಡದಿರುವ ಹಿನ್ನೆಲೆಯಲ್ಲಿ ಪರಿಣತರು ಆರಾಮವಾಗಿದ್ದಾರೆ. ಒಂದು ವೇಳೆ ಗರ್ಭವತಿಯಾದ ಸಂದರ್ಭದಲ್ಲಿ ಮಹಿಳೆಗೆ ಕೊರೋನಾ ವೈರಸ್ ಸೋಂಕು ಇದ್ದರೂ ಅದು ಮಗುವಿಗೆ ಹರಡುವುದಿಲ್ಲ ಮತ್ತು ಆಕೆ ಗರ್ಭವತಿಯಾಗಿ ಸುರಕ್ಷಿತವಾಗಿ ಮುಂದುವರಿಯಬಹುದಾಗಿದೆ.
ನವಜಾತ ಶಿಶುಗಳಲ್ಲಿನ ಅಮ್ನಿಯೋಟಿಕ್ ಫ್ಲ್ಯುಯಿಡ್, ಅಂಬಿಲಿಕಲ್ ಕೋರ್ಡ್ ಬ್ಲಡ್, ಅಥವಾ ನಾಸೊಫರೆಂಜಿಯಲ್ ಸ್ವ್ಯಾಬ್ ಈ ವೈರಸ್ ಕಂಡುಬಂದಿಲ್ಲ. ಈ ವೈರಸ್ ಭ್ರೂಣ-ಪ್ಲೇಸೆಂಟಲ್ ತಡೆಗೋಡೆಯನ್ನು ದಾಟಬಲ್ಲದು ಎಂಬುದಕ್ಕೆ ಯಾವುದೇ ಪುರಾವೆಗಳು ಸಿಕ್ಕಿಲ್ಲ. ಆದಾಗ್ಯೂ, ಮುನ್ನೆಚ್ಚರಿಕಾ ಕ್ರಮವಾಗಿ ಗರ್ಭವತಿಯರು ವೈದ್ಯರ ಸಲಹೆ ಹೊರತಾಗಿ ಪದೇಪದೆ ತಪಾಸಣೆಗೆಂದು ಹೋಗುವುದನ್ನು ನಿಯಂತ್ರಿಸಬೇಕು. ಸಣ್ಣಪುಟ್ಟ ಅನುಮಾನಗಳು ಅಥವಾ ಸಲಹೆಗಳು ಬೇಕಿದ್ದಲ್ಲಿ ತಮ್ಮ ವೈದ್ಯರಿಗೆ ಆನ್‌ಲೈನ್ ಮೂಲಕ ಸಂಪರ್ಕಿಸಬೇಕು ಅಥವಾ ಟೆಲಿಮೆಡಿಸಿನ್ ಸೌಲಭ್ಯವನ್ನು ಬಳಸಿಕೊಳ್ಳಬೇಕು. ತಾಯಿ ಆಗುತ್ತಿರುವವರು ಕಡ್ಡಾಯವಾಗಿ ಕೋವಿಡ್ ವಿರುದ್ಧ ಏನನ್ನು ಮಾಡಬೇಕು/ಮಾಡಬಾರದು ಎಂಬ ಅಂಶಗಳನ್ನು ಪಾಲಿಸಬೇಕು. ಉದಾಹರಣೆಗೆ ನಿಗದಿತವಾಗಿ ಕೈಗಳನ್ನು ಸೋಪಿನಿಂದ ಮತ್ತು ನೀರಿನಿಂದ ತೊಳೆದುಕೊಳ್ಳುತ್ತಿರಬೇಕು, ಕಣ್ಣುಗಳು, ಮೂಗು ಅಥವಾ ಬಾಯಿಯನ್ನು ಮುಟ್ಟಿದ ನಂತರ ತೊಳೆಯದೇ ಇರುವ ಕೈಗಳನ್ನು ಸ್ಪರ್ಶಿಸಬಾರದು, ಮಾಸ್ಕ್ ಅನ್ನು ಧರಿಸಬೇಕು.

ತಾಯಿಗೆ ಕೋವಿಡ್ ಪಾಸಿಟಿವ್ ಇದ್ದರೂ ಎದೆಹಾಲು ಅತ್ಯಂತ ಸುರಕ್ಷಿತವಾಗಿರುತ್ತದೆ. ಆದರೆ, ಸ್ತನ್ಯಪಾನ ಅತ್ಯುತ್ತಮ ಆಯ್ಕೆಯಾಗಿರಬಾರದು. ಏಕೆಂದರೆ, ವೈರಸ್ ತಾಯಿಯ ಉಸಿರಾಟದ ದ್ರವಗಳಿಂದ ಮಗುವಿಗೆ ಹರಡಬಹುದಾಗಿದೆ. ಹಾಲುಣಿಸುವ ತಾಯಿಯು ಕೊವಿಡ್ ನೆಗೆಟಿವ್ ಇರುವ ವ್ಯಕ್ತಿಯ ನೆರವಿನಿಂದ ಮಕ್ಕಳಿಗೆ ಹಾಲುಣಿಸಬಹುದಾಗಿದೆ. ಆದರೆ, ಇದಕ್ಕೂ ಮುನ್ನ ಪರಿಣತರ ಸಲಹೆಗಳನ್ನು ಪಡೆಯಬೇಕಾಗುತ್ತದೆ.ಒಂದು ವೇಳೆ, ಇಂತಹ ಪರಿಸ್ಥಿತಿ ನಿರ್ಮಾಣವಾದಾಗ ಕೊವಿಡ್-ಪಾಸಿಟಿವ್ ಇರುವ ತಾಯಿಯು ತನ್ನ ಮಗುವಿಗೆ ತಾನೇ ಹಾಲುಣಿಸಬಹುದು. ಆದರೆ, ಸ್ತನ್ಯಪಾನ ಮಾಡುವ ಸಂದರ್ಭದಲ್ಲಿ ಮಾಸ್ಕ್ ಧರಿಸಿರಬೇಕು ಮತ್ತು ಕೆಮ್ಮುವುದು ಅಥವಾ ಸೀನುವುದನ್ನು ನಿಯಂತ್ರಿಸಬೇಕು. ಆಕೆ ಮಗುವನ್ನು ಮುಟ್ಟುವ ಮೊದಲು, ಸ್ತನದ ತೊಟ್ಟು, ಹಾಲಿನ ಬಾಟಲಿಗಳನ್ನು ತೊಳೆಯಬೇಕು ಎಂದು ರಾಧಾಕೃಷ್ಣ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ ಅಂಡ್ ಐವಿಎಫ್ ಸೆಂಟರ್ ಡಾ.ವಿದ್ಯಾ ವಿ ಭಟ್  ತಿಳಿಸಿದ್ದಾರೆ.

ಕೋವಿಡ್-ಸೋಂಕಿತ ಗರ್ಭಿಣಿಯರು ತಮಗೆ ಹೆಚ್ಚು ಒತ್ತಡ ತಂದುಕೊಳ್ಳಬಾರದು. ಪ್ರಸೂತಿ ಘಟಕವನ್ನು ಕರೆಸುವುದು ಮತ್ತು ಘಟಕದ ಸಿಬ್ಬಂದಿ ಬಂದ ನಂತರ ವೈದ್ಯರಿಗೆ ರೋಗದ ಬಗ್ಗೆ ಮಾಹಿತಿ ನೀಡುವುದು ಸೇರಿದಂತೆ ಸರ್ಕಾರ ನೀಡಿರುವ ಸಲಹೆಗಳನ್ನು ಮತ್ತು ನಿಯಮಗಳನ್ನು ಪಾಲಿಸಬೇಕು.
ಆರಂಭಿಕ ಹಂತದಲ್ಲಿಯೇ ಸೋಂಕು ಪೀಡಿತ ಗರ್ಭಿಣಿಯರು ಸ್ವಯಂಪ್ರೇರಿತರಾಗಿ ಪ್ರತ್ಯೇಕವಾಗಿರುವುದನ್ನು ರೂಢಿಸಿಕೊಳ್ಳಬೇಕು ಮತ್ತು ಸೋಂಕು ನಿಯಂತ್ರಣದ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇದರಲ್ಲಿ ಪ್ರಮುಖವಾಗಿ ಮಾಸ್ಕ್ ಧರಿಸುವುದು ಅತ್ಯಂತ ಪ್ರಮುಖ ಅಂಶವಾಗಿದೆ. ಗರ್ಭದಲ್ಲಿರುವ ಭ್ರೂಣದ ಚಲನೆಗಳನ್ನು ಕಾಲಕಾಲಕ್ಕೆ ಪರಿಶೀಲಿಸುತ್ತಿರಬೇಕು ಮತ್ತು ಮಗು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಗರ್ಭಾಶಯದ ಸಂಕೋಚನವನ್ನು ಆಗಾಗ್ಗೆ ಮಾಡುತ್ತಿರಬೇಕು. ಗರ್ಭಿಣಿಯರಲ್ಲಿ ಶೇ.೯೦ ಕ್ಕಿಂತ ಹೆಚ್ಚು ಚೇತರಿಕೆ ಪ್ರಮಾಣ ಕಂಡುಬಂದಿರುವ ಹಿನ್ನೆಲೆಯಲ್ಲಿ ಕೋವಿಡ್ ಪಾಸಿಟಿವ್ ಇರುವ ಗರ್ಭಿಣಿಯರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ.

Share

Leave a Comment