ಕೋವಿಡ್ -19: ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ: ಬಂಧನ

ಬಳ್ಳಾರಿ, ಮಾ.29: ಕೋವಿಡ್-19 ಸೊಂಕು‌ ವ್ಯಾಪಿಸಬಾರದು ಮತ್ತು ಸಾಮಾಜಿಕ ಅಂತರ ಪರಿಪಾಲಿಸಿ ಸೊಂಕಿನ ಸರಪಳಿಗೆ ಇತಿಶ್ರೀ ಹಾಡಬೇಕು ಎಂಬ ಸದುದ್ದೇಶದಿಂದ ಸರಕಾರ ಜಾರಿಗೆ ತಂದ 144 ಸೆಕ್ಷನ್ ನ ಸಂಪೂರ್ಣ ಉಲ್ಲಂಘನೆಯಾಗಿದ್ದು, ಸ್ಥಳಕ್ಕೆ ಸಾಮಾಜಿಕ ಅಂತರ ಪಾಲಿಸುವ ಲಾಕ್ ಡೌನ್ ಉದ್ದೇಶ ವಿವರಿಸಲು ಬಂದ ಪೊಲೀಸರಿಬ್ಬರ ಮೇಲೆಯೇ ಹಲ್ಲೆ ಮಾಡಿ ಸರಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಘಟನೆ ಸಂಡೂರು ತಾಲೂಕಿನ ತಾರಾನಗರದಲ್ಲಿ ಭಾನುವಾರ ನಡೆದಿದೆ.

144 ಸೆಕ್ಷನ್ ಉಲ್ಲಂಘನೆ ಹಾಗೂ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆಧಾರದ ಮೇರೆಗೆ ನಾಲ್ವರ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಇದರಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಗ್ರಾಪಂ ಸದಸ್ಯ ಮಂಜುನಾಥ ಹಾಗೂ ಅಲ್ತಾಫ್ ಎನ್ನುವವರನ್ನು ಬಂಧಿಸಲಾಗಿದೆ.
ನಿಂಗಪ್ಪ,ಗಣೇಶ ಅವರನ್ನು ಕೂಡ ಶೀಘ್ರವಾಗಿ ಬಂಧಿಸಲಾಗುವುದು. ಇವರ ವಿರುದ್ಧ ಸೆಕ್ಷನ್ 353,188,270,341,504 ಖ/ W ಹಾಗೂ ಇನ್ನೀತರ ಸೆಕ್ಷನ್ ಗಳಡಿ ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಎಸ್ಪಿ ಸಿ.ಕೆ.ಬಾಬಾ ಅವರು ಪತ್ರಿಕಾಗೋಷ್ಠಿಯಲ್ಲಿ ಭಾನುವಾರ ಸಂಜೆ ವಿವರಿಸಿದ್ದಾರೆ.
ಅತ್ಯಂತ ಬೇಸರವಾಗಿರುವ ವಿಷಯವೆಂದರೇ ಅದರಲ್ಲಿ ಒಬ್ಬರು ಗ್ರಾಪಂ ಸದಸ್ಯರಾಗಿರುವುದು ಎಂದರು.

ಘಟನೆಯ ವಿವರ: ಪೊಲೀಸ್ ಮುಖ್ಯಪೇದೆ ಮಂಜುನಾಥ ಮತ್ತು ಪೊಲೀಸ್ ಪೇದೆ ಕೆ.ಜಾತಪ್ಪ ಅವರು ತಾರಾನಗರ ಗ್ರಾಮದಲ್ಲಿ ಮಾ.29ರಂದು ಬಿ/ಬಿ ಕರ್ತವ್ಯಕ್ಕೆ ನೇಮಿಸಿದ್ದರಿಂದ ಅವರಿಬ್ಬರು ಅಂದು ಬೆಳಗ್ಗೆ 6ರಿಂದ ಗ್ರಾಮದಲ್ಲಿ ಕರ್ತವ್ಯ ಮಾಡುತ್ತಿರುವ ಸಂದರ್ಭದಲ್ಲಿ ಬೆಳಿಗ್ಗೆ 11ರ ಸುಮಾರು ಗ್ರಾಮದಲ್ಲಿ ಗಸ್ತು ಮಾಡುತ್ತಿರುವಾಗ ಗ್ರಾಮದ ಬಸ್ ನಿಲ್ದಾಣದ

ಹತ್ತಿರ ಸುಮಾರು ಎಂಟೆತ್ತು ಜನರು ಮಾತನಾಡುತ್ತಾ ನಿಂತಿದ್ದರು; ಆ ಸಂದರ್ಭದಲ್ಲಿ ಪೊಲೀಸರಿಬ್ಬರು ಅವರ ಹತ್ತಿರ ಹೋಗಿ ಕೊರೋನಾ ವೈರಸ್ ಹರಡುವ ಸಂಭವ ಇರುವುದರಿಂದ ಸರ್ಕಾರವು 144 ಸಿ.ಆರ್.ಪಿ.ಸಿ. ಆದೇಶ ಜಾರಿಯಲ್ಲಿರುತ್ತದೆ ಆದ್ದರಿಂದ ತಾವುಗಳು ತಮ್ಮ ತಮ್ಮ ಮನೆಗಳಿಗೆ ಹೋಗಿ ಎಂದು ಮನವಿ ಮಾಡಿದ್ದಾರೆ.

ಜನರು ಮನೆಗಳಿಗೆ ಹೋಗದೇ ಅಲ್ಲೇ ಇದ್ದುದರಿಂದ ಪೊಲೀಸ್ ಪೇದೆ ಜಾತಪ್ಪ ತನ್ನ ಮೊಬೈಲ್ ನಿಂದ ವಿಡಿಯೋ ಮಾಡುತ್ತಿರುವಾಗ ಅಲ್ಲಿ ಸೇರಿದ್ದ ಜನರಲ್ಲಿ 3 ಜನರು ಅವನ ಹತ್ತಿರ ಬಂದು ಅದರಲ್ಲಿ ಒಬ್ಬ ವ್ಯಕ್ತಿಯು ಅವರನ್ನು ಮುಂದಕ್ಕೆ ಹೋಗದಂತೆ ತಡೆದು ನಿಲ್ಲಿಸಿ ದೂಕಾಡಿ ಅವನ ಕೈಯಲ್ಲಿದ್ದ ಮೊಬೈಲ್ ನ್ನು ಕಸಿದುಕೊಂಡು ನೆಲಕ್ಕೆ ಹೊಡೆದು ನುಚ್ಚು ನೂರು
ಮಾಡಿ, ಸಮವಸ್ತ್ರದಲ್ಲಿದ್ದ ಅವನ ಶರ್ಟಿನ ಬಲಭುಜದ ಪಟಿಯನ್ನು ಕೈಯಿಂದ ಹಿಡಿದು ಎಳೆದಾಡಿದ್ದರಿಂದ ಭಟನ್ ಕಿತ್ತಿ ಹೋಗಿದೆ. ಈ ಮೂಲಕ ಸರ್ಕಾರದ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ನಂತರ ಆ ಇಬ್ಬರು ವ್ಯಕ್ತಿಗಳು ಪೊಲೀಸರ ಹತ್ತಿರ ಬಂದು ಅವರನ್ನು ದೂಕಾಡಿ ಬಾಯಿಗೆ ಬಂದಂತೆ ಬೈದರು, ಜನರಲ್ಲಿದ್ದ ಇನ್ನೊಬ್ಬ ವ್ಯಕ್ತಿ ಅವರ ಹತ್ತಿರ ಬಂದು ನಿನ್ನೊಬ್ಬ ಸಾಮಾನ್ಯ ಪೊಲೀಸ್ ಕಾನ್ಸಟೇಬಲ್
ಆಗಿದ್ದು ನಮ್ಮನ್ನು ಏನು ಮಾಡಿಕೊಳ್ಳುವುದಕ್ಕೆ ಆಗುವುದಿಲ್ಲ , ನೀವೇನು ಬಂದು ಹೇಳೊದು ಅಂತ ಬಾಯಿಗೆ ಬಂದಂತೆ ಬೈದಿದ್ದಾರೆ.

ನಂತರ ಅಲ್ಲೇ ಇದ್ದ ಜನರನ್ನು ವಿಚಾರಿಸಲು ಮೊಬೈಲ್ ಕಸಿದುಕೊಂಡು ನೆಲಕ್ಕೆ ಹೊಡೆದು ನುಚ್ಚುನೂರು ಮಾಡಿದ್ದಾರೆ. ಸಮವಸ್ತ್ರದಲ್ಲಿದ್ದ ಪೊಲೀಸ ಪೇದೆ ಜಾತಪ್ಪ ಅವರ ಶರ್ಟಿನ ಬಲಭುಜದ ಪಟ್ಟಿಯನ್ನು ಕೈಯಿಂದ ಹಿಡಿದು ಎಳೆದಾಡಿದ್ದರಿಂದ ಭಟನ್ ಕಿತ್ತು ಹೋಗಿದೆ.
ಸ್ಥಳದಲ್ಲಿ ಆ ವ್ಯಕ್ತಿಗಳು ಯಾರೆಂದು ವಿಚಾರಿಸಲಾಗಿ ನಿಂಗಪ್ಪ, ಅಲ್ತಾಫ್, ಗಣೇಶ್ ಎಂದು ತಿಳಿಸಿದ್ದಾರೆ ಎಂದು ಪೊಲೀಸರಿಬ್ಬರು ನೀಡಿದ ದೂರಿನಲ್ಲಿ ದಾಖಲಾಗಿದೆ.
ನಂತರ ಇನ್ನೊಬ್ಬ ಗ್ರಾಪಂ ಸದಸ್ಯ ಮಂಜುನಾಥ ಎನ್ನುವವರು ಆಗಮಿಸಿ ನಿನ್ನೊಬ್ಬ ಸಾಮಾನ್ಯ ಪೊಲೀಸ್ ಕಾನ್ಸಟೇಬಲ್ ಆಗಿದ್ದು ನಮ್ಮನ್ನು ಏನು
ಮಾಡಿಕೊಳ್ಳುವುದಕ್ಕೆ ಆಗುವುದಿಲ್ಲ , ನೀವೇನು ಬಂದು ಹೇಳೊದು ಅಂತಾ ಬಾಯಿಗೆ ಬಂದಂತೆ ಬೈದಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ.

ಈ ಮಾಹಿತಿ ತಿಳಿಯುತ್ತಲೇ ಸಂಡೂರು ಪೊಲೀಸ್ ಠಾಣೆಯ ಪಿಎಸ್ಐ ಹಾಗೂ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದಾರೆ. ಅವರು ಬರುತ್ತಲೇ ಜನ ಅಲ್ಲಿಂದ ಕಾಲ್ಕಿತ್ತಿದ್ದಾರೆ.

Leave a Comment