ಕೋವಿಡ್ 19 – ಆಸೀಸ್ ಪ್ರಧಾನಿ ಜತೆ ಮೋದಿ ಸಮಾಲೋಚನೆ

ನವದೆಹಲಿ, ಏ 6 – ಜಾಗತಿಕವಾಗಿ ತಲ್ಲಣ ಮೂಡಿಸಿರುವ ಕೋವಿಡ್ 19 ನಿಯಂತ್ರಣ ಕ್ರಮಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಂದು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಅವರೊಂದಿಗೆ ದೂರವಾಣಿ ಮೂಲಕ ಸಮಾಲೋಚನೆ ನಡೆಸಿದರು.
ಜಗತ್ತಿನಲ್ಲಿ ಕೋರೋನಾ ಸ್ಥಿತಿಗತಿ, ತಮ್ಮ ರಾಷ್ಟ್ರಗಳಲ್ಲಿ ಸೋಂಕು ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ಉಭಯ ನಾಯುಕರು ಪರಸ್ಪರ ಸಮಾಲೋಚಿಸಿದರು.
ಕೊರೋನಾ ವೈರಸ್ ಗೆ ಮದ್ದುಕಂಡು ಹಿಡಿಯುವ ಕುರಿತು ಜಂಟಿ ಪ್ರಯತ್ನ ನಡೆಸಲು ಸಮ್ಮತಿಸಿದ್ದು, ಸೋಂಕು ನಿಯಂತ್ರಣಕ್ಕೆ ಸೂಕ್ತ ವಿಧಾನನಗಳನ್ನು ಅನುಸರಿಸುವ ಕುರಿತು ಮಾಹಿತಿ ವಿನಿಯಮ ಮಾಡಿಕೊಂಡರು.
ಆಸ್ಟ್ರೇಲಿಯಾಗೆ ಎಲ್ಲಾ ರೀತಿಯಲ್ಲೂ ನೆರವು ನೀಡಲು ಸಿದ್ಧ. ಭಾರತದಲ್ಲಿರುವ ಆಸ್ಟ್ರೇಲಿಯಾ ಪ್ರಜೆಗಳಿಗೂ ಅಗತ್ಯ ಚಿಕಿತ್ಸೆ ಒದಗಿಸಲು ಸಜ್ಜಾಗಿರುವುದಾಗಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಮೋರಿಸನ್ ಅವರು ಸಹ, ತಮ್ಮ ದೇಶದಲ್ಲಿರುವ ಭಾರತೀಯ ಪ್ರಜೆಗಳು,ವಿದ್ಯಾರ್ಥಿಗಳ ಹಿತ ರಕ್ಷಣೆಗೆ ಒತ್ತು ನೀಡುವುದಾಗಿ ವಾಗ್ದಾನ ಕೊಟ್ಟಿದ್ದಾರೆ. ಉಭಯ ನಾಯಕರು ಪರಸ್ಪರ ದ್ವಿಪಕ್ಷೀಯ ಬಾಂಧವ್ಯ ಬಲರ್ವಧನೆಗೆ ಸಮ್ಮತಿ ಸೂಚಿಸಿದ್ದಾರೆ.

Leave a Comment