ಕೋವಿಡ್-19 ಆನ್ ಲೈನ್ ಸಮಾಲೋಚನೆಗೆ ಸಚಿವರಿಂದ ಚಾಲನೆ

ಧಾರವಾಡ,ಏ7-ಕೋವಿಡ್-19 ಕೊರೊನಾ ವೈರಸ್‍ನಿಂದ  ಅನೇಕರು ಗೊಂದಲ,ಮಾನಸಿಕ ತೋಳಲಾಟ,ಸಮಸ್ಯೆಗಳಿಗೆ ಒಳಗಾಗುತ್ತಿದ್ದು ಅವರ ನೆರವಿಗಾಗಿ  ಜಿಲ್ಲಾಡಳಿತವು ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ ಸಹಯೋಗದಲ್ಲಿ ಆರಂಭಿಸಿರುವ ಆನ್‍ಲೈನ್ ಸಮಾಲೋಚನಾ ಸೌಲಭ್ಯಕ್ಕೆ ಬೃಹತ್,ಮಧ್ಯಮ ಕೈಗಾರಿಕೆ ಹಾಗೂ  ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್   ಚಾಲನೆ ನೀಡಿದರು .
ಡಿಮಾನ್ಸ್ ಸಂಸ್ಥೆ ಆವರಣದಲ್ಲಿ ಕೋವಿಡ್‍ಗೆ ಸಂಬಂಧಿಸಿದ ಮಾನಸಿಕ ಸಮಸ್ಯೆಗಳ ಪರಿಹಾರಗಳ  ಕುರಿತು ದೂರವಾಣಿ ಹಾಗೂ ವಿಡಿಯೋ ಕರೆ ಸೌಲಭ್ಯ ಹೊಂದಿರುವ ಆನ್‍ಲೈನ್ ಸಮಾಲೋಚನೆ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದ ಅವರು, ಜಿಲ್ಲೆಯಲ್ಲಿ ಲಾಕ್ ಡೌನ್, ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಜನರಿಗೆ ಕೊರೊನಾ ಕುರಿತ ತಮ್ಮ ಸಂಶಯ, ಗೊಂದಲ,ಪರಿಹಾರಗಳನ್ನು ಪಡೆಯಲು ಆಸ್ಪತ್ರೆಗಳಿಗೆ ಭೇಟಿ ನೀಡಲು ಅನುಕೂಲವಾಗುತ್ತಿಲ್ಲ ಮತ್ತು ಐಸೊಲೇಶನ್ ವಾರ್ಡಗಳಲ್ಲಿ, ಕ್ವಾರಂಟೈನ್‍ಗಳಲ್ಲಿ ಇರುವವರಿಗೆ ಹೊರಗಡೆ ಬರಲು ಸಾಧ್ಯವಿಲ್ಲ.  ಅಂತವರು ಕೊರೊನಾ ವೈರಸ್ ಕುರಿತ ಅನೇಕ ತಪ್ಪು ಮಾಹಿತಿ, ಸಂದೇಶಗಳಿಂದ ಭಯಗೊಂಡಿರುತ್ತಾರೆ. ಅವರು ತಮ್ಮ ಸ್ಥಳದಿಂದಲೇ ಕರೆ ಮಾಡಿ ಸಂಶಯಗಳಿಗೆ ಮಾನಸಿಕ ತಜ್ಞ ವೈದ್ಯರಿಂದ ಪರಿಹಾರ, ತಿಳುವಳಿಕೆ ಪಡೆಯಬಹುದು ಎಂದು ಅವರು ಹೇಳಿದರು.
ಕೋವಿಡ್ ಕುರಿತು ಮಾನಸಿಕ ಸಮಸ್ಯೆಗಳಿಗೆ ಸಂಬಂಧಿಸಿದ ಈ ಆನ್‍ಲೈನ್  ಸಮಾಲೋಚನೆ ಕೇಂದ್ರ ರಾಜ್ಯದಲ್ಲಿಯೇ  ಪ್ರಥಮವಾಗಿದ್ದು,ರಾಜ್ಯದ ಯಾವುದೇ ಮೂಲೆಯಿಂದ ಜನ ಕರೆ ಮಾಡಿದರೂ ಕೂಡ  ಇಲ್ಲಿನ ತಜ್ಞವೈದ್ಯರು ಸೂಕ್ತ ಪರಿಹಾರವನ್ನು ದೂರವಾಣಿ ಅಥವಾ ವಿಡಿಯೋ ಕರೆ ಮೂಲಕ ಪರಿಹಾರ,ಸಲಹೆ ನೀಡಲಿದ್ದಾರೆ. ಈ ಸೌಲಭ್ಯ ದಿನದ 24 ಗಂಟೆ ಸಾರ್ವಜನಿಕರಿಗೆ ಲಭ್ಯವಿರುತ್ತದೆ ಎಂದು ಸಚಿವರು ತಿಳಿಸಿದರು.
ಕೋವಿಡ್ ಕಾಯಿಲೆ ಶೂನ್ಯ ಜಿಲ್ಲೆಯಾಗಿಸಿದ ಜಿಲ್ಲಾಡಳಿತ-ಸಚಿವರ ಹರ್ಷ; ಉತ್ತರ ಕರ್ನಾಟಕದ ಭಾಗದಲ್ಲಿ ಕಲಬುರ್ಗಿ ಹೊರತುಪಡಿಸಿ ಧಾರವಾಡ ಜಿಲ್ಲೆಯಲ್ಲಿ  ಮಾತ್ರ ಆರಂಭದಲ್ಲಿ ಕೊರೋನಾ ವೈರಸ್ ಬಾಧಿತ ರೋಗಿಯನ್ನು ಹೊಂದಿತ್ತು. ವಿದೇಶದಿಂದ ಆಗಮಿಸಿದ್ದ ಧಾರವಾಡ ನಿವಾಸಿಯೊಬ್ಬರಿಗೆ ಈ ರೋಗ ತಗುಲಿತ್ತು. ಜಿಲ್ಲಾಡಳಿತ ಸೂಕ್ತ ಮಾರ್ಗದರ್ಶನ ಹಾಗೂ ಸಮನ್ವತೆಯಿಂದ ಆರೋಗ್ಯ ಇಲಾಖೆ,ಕಿಮ್ಸ್ ವೈದ್ಯರ ತಂಡ ಮುಂಜಾಗ್ರತೆ ವಹಿಸಿ,ಸೂಕ್ತ ಚಿಕಿತ್ಸೆ ನೀಡಿದ್ದರಿಂದ ಕೊರೊನಾ ಪೀಡಿತ ವ್ಯಕ್ತಿ ಗುಣಮುಖನಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾನೆ. ಇದರಿಂದಾಗಿ ಧಾರವಾಡ ಜಿಲ್ಲೆ ಬಹುತೇಕವಾಗಿ ಕೊರೊನಾ ವೈರಸ್ ಶೂನ್ಯ ಜಿಲ್ಲೆಯಾಗಿದೆ.ಇದಕ್ಕಾಗಿ ಶ್ರಮಿಸುತ್ತಿರುವ ಜಿಲ್ಲಾಡಳಿತ, ವೈದ್ಯರ ತಂಡಗಳಿಗೆ ಅಭಿನಂದಿಸುತ್ತೇನೆ ಎಂದು ಜಿಲ್ಲಾಧಿಕಾರಿಗಳನ್ನು ಉದ್ದೇಶಿಸಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಆನ್‍ಲೈನ್ ಸಮಾಲೋಚನೆ : ಕೋವಿಡ್-19 ಕೊರೊನಾ ವೈರಸ್ ಕುರಿತು ಯಾವುದೇ ಗೊಂದಲ,ಮಾನಸಿಕ ಸಮಸ್ಯೆಗಳಿದ್ದರೆ ದೂರವಾಣಿ ಅಥವಾ ವಿಡಿಯೋ ಕರೆಯನ್ನು 0836-2748400 ಅಥವಾ 9113258734 ಗೆ ಕರೆ ಮಾಡಿ ಸಾರ್ವಜನಿಕರು ಪರಿಹರಿಸಿಕೊಳ್ಳಬಹುದು. ಈ ಸೌಲಭ್ಯ ದಿನದ 24 ಗಂಟೆ ಲಭ್ಯವಿದೆ.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ¸ದಸ್ಯ ಬಸವರಾಜ ಹೊರಟ್ಟಿ, ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ,ಶಂಕರ ಪಾಟೀಲ್ ಮುನೇನಕೊಪ್ಪ, ಜಿಲ್ಲಾ ಪಂಚಾಯತ ಅದ್ಯಕ್ಷರಾದ ವಿಜಯಲಕ್ಷ್ಮಿ ಪಾಟೀಲ್, ಜಿಲ್ಲಾಧಿಕಾರಿ ದೀಪಾ ಚೋಳನ್, ಜಿ.ಪಂ ಸಿಇಓ ಡಾ.ಬಿ.ಸಿ.ಸತೀಶ, ಡಿಮಾನ್ಸ್ ಸಂಸ್ಥೆ ನಿರ್ದೇಶಕ ಡಾ. ಮಹೇ

Leave a Comment