ಕೋವಿಡ್-೧೯ ಗೆ ಫುಟ್ ಬಾಲ್ ತಾರೆ ಟಾಮ್ ಬಲಿ

ನ್ಯೂಯಾರ್ಕ್, ಏ ೭- ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಅಮೆರಿಕದ ಖ್ಯಾತ ಫುಟ್ ಬಾಲ್ ತಾರೆ ಟಾಮ್ ಡೆಂಮ್ಸೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಬುದ್ದಿಮಾಂದ್ಯ ಮತ್ತು ಅಲ್‌ಜೈಮರ್‌ನಿಂದ ಬಳಲುತ್ತಿದ್ದ ೭೩ರ ಹರೆಯದ ನ್ಯೂ ಓರ್ಲೆಯನ್ಸ್ ಸೈಂಟ್ಸ್ ಕಿಕರ್ ಖ್ಯಾತಿಯ ಡೆಂಮ್ಸೆ ಅವರಿಗೆ ಕೋವಿಡ್ ಸೋಂಕು ದೃಢಪಟ್ಟ ಬಳಿಕ ಹೋಮ್ ಕ್ಯಾರಂಟೈನ್ ನಲ್ಲಿದ್ದರೂ. ಚಿಕಿತ್ಸೆಗೆ ಅವರ ದೇಹ ಸ್ಪಂದಿಸದೇ ವಿಧಿವಶರಾಗಿದ್ದಾರೆ. ೧೯೭೦ರಿಂದ ೨೦೧೩ರವರೆಗೆ ಎನ್ ಎಫ್ ಎಲ್ ಇತಿಹಾಸದಲ್ಲಿ ಅತೀ ದೂರದಿಂದ ಫಿಲ್ಡ್ ಗೋಲ್ ಹೊಡೆದ ದಾಖಲೆ ಹೊಂದಿದ್ದ ಟಾಮ್ ಡೆಂಮ್ಸೆ ಅವರು ಕೋವಿಡ್-೧೯ ಸೋಂಕಿಗೆ ಬಲಿಯಾಗಿರುವುದಕ್ಕೆ ಕ್ರೀಡಾಪಟುಗಳು ಅತೀವ ಸಂತಾಪ ವ್ಯಕ್ತಪಡಿಸಿದ್ದಾರೆ.

೧೯೭೦ರ ನವೆಂಬರ್ ೮ರಂದು ನಡೆದ ಪಂದ್ಯದಲ್ಲಿ ೬೩ ಯಾರ್ಡ್ ದೂರದಿಂದ ಅದ್ಭುತವಾಗಿ ಫೀಲ್ಡ್ ಗೋಲ್ ಹೊಡೆದಿರುವುದು ಅವರ ಎನ್‌ಎಫ್‌ಎಲ್ ಬಾಳ್ವೆಯ ಅತ್ಯಂತ ಶ್ರೇಷ್ಠ ಕ್ಷಣವಾಗಿದೆ. ಈ ಗೋಲಿನಿಂದಾಗಿ ಡೆಂಮ್ಸೆ ಅವರ ತಂಡವು ಗೆಲುವನ್ನು ದಾಖಲಿಸಿತ್ತು.

ತನ್ನ ಬಲ ಪಾದ ಮತ್ತು ಬಲ ಕೈಯಲ್ಲಿ ಬೆರಳುಗಳಿಲ್ಲದೆ ಜನಿಸಿದ್ದ ಡೆಂಮ್ಸೆ ಅವರು ವಿಶೇಷವಾಗಿ ಮಾರ್ಪಡಿಸಿದ್ದ ಬೂಟ್ ನೊಂದಿಗೆ ಫುಟ್ ಬಾಲ್ ಕ್ರೀಡೆಯಲ್ಲಿ ಅಮೋಘ ಸಾಧನೆ ಮಾಡಲು ಹೊರಟರು. ಈ ವಿಶೇಷ ಬೂಟ್ ಅವರಿಗೆ ಗೋಲು ಹೊಡೆಯಲು ಒಳ್ಳೆಯ ಅವಕಾಶ ಕಲ್ಪಿಸಿದೆ ಎಂದು ಕೆಲವರು ಟೀಕೆ ಮಾಡಿದ್ದರು.

Leave a Comment