ಕೋವಿಡ್ ಟೆಸ್ಟ್ ಲ್ಯಾಬ್: ಇಂದಿನಿಂದ ಕಾರ್ಯಾರಂಭ

ರಾಯಚೂರು.ಮೇ.31-ನಗರದ ರಿಮ್ಸ್ ವೈದ್ಯಕೀಯ ಕಾಲೇಜುನಲ್ಲಿ ಕೋವಿಡ್ – 19 ಪರೀಕ್ಷೆಯ ಪ್ರಯೋಗಾಲಯ ಕೇಂದ್ರವನ್ನು ಇಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ ಉದ್ಘಾಟಿಸಿದರು.
1 ಕೋಟಿ ರೂ. ವೆಚ್ಚದಲ್ಲಿ ಕೋವಿಡ್ ಲ್ಯಾಬ್ ಸ್ಥಾಪಿಸಲಾಗಿದ್ದು, ಇಂದಿನಿಂದ ಕಾರ್ಯಾರಂಭ ಮಾಡಲಿದೆ. ಪ್ರತಿನಿತ್ಯ ಒಂದು ಶಿಫ್ಟ್‌ಗೆ 96 ಮಾದರಿ ಪರೀಕ್ಷೆ ಮಾಡಬಹುದಾಗಿದೆ. ಪೂಲಿಂಗ್ ಮಾಡಿದರೆ 800ರವರೆಗೂ ಪರೀಕ್ಷೆ ಮಾಡಬಹುದಾಗಿದೆ ಎಂದು ತಿಳಿಸಿದರು.
ಈಗಾಗಲೇ ಹೊರರಾಜ್ಯದಿಂದ ಬಂದವರ ಮಾದರಿ ಬೆಂಗಳೂರಿಗೆ ಹಾಗೂ ಬಳ್ಳಾರಿ ಜಿಲ್ಲೆಗೆ ಕಳುಹಿಸಕೊಡಲಾಗುತಿತ್ತು. ಇಂದಿನಿಂದ ಜಿಲ್ಲೆಯಲ್ಲಿಯೇ ಕೊವೀಡ್ ಪರೀಕ್ಷೆ ಆರಂಭವಾಗುವುದರಿಂದ ಕೊರೊನಾ ಪ್ರಕರಣ ಮಾಹಿತಿ ಪಡೆಯಲು ಅನುಕೂಲವಾಗಲಿದೆ.
ಪಾಸಿಟಿವ್ ಫಲಿತಾಂಶವನ್ನು ಆರ್‌ಟಿಪಿಸಿಆರ್ ಪರೀಕ್ಷೆ ಮೂಲಕ ಪತ್ತೆ ಹಚ್ಚಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಎಸ್ಪಿ ಡಾ.ಸಿ.ಬಿ. ವೇದಮೂರ್ತಿ, ರಿಮ್ಸ್ ನಿದೇರ್ಶಕ ಬಸವರಾಜ ಪೀರಾಪುರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Share

Leave a Comment