ಕೋರ್ಟ್ ನಲ್ಲೇ ಕುಸಿದುಬಿದ್ದ ನ್ಯಾ.ಭಾನುಮತಿ

ನವದೆಹಲಿ.ಫೆ.14. ನಿರ್ಭಯಾ ಗ್ಯಾಂಗ್ ರೇಪ್ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಿ ವಿನಯ್ ಶರ್ಮಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿ ಭಾನುಮತಿ ಅವರು ಕೋರ್ಟ್ ಹಾಲ್ ನಲ್ಲೇ ಕುಸಿದು ಬಿದ್ದ ಘಟನೆ ನಡೆದಿದೆ.

ಇಂದು ಅರ್ಜಿಯ ವಿಚಾರಣೆ ನಡೆಯುತ್ತಿದ್ದ ವೇಳೆ, ನ್ಯಾಯಮೂರ್ತಿ ಭಾನುಮತಿ ಅನಾರೋಗ್ಯದ ಹಿನ್ನೆಲೆಯಲ್ಲಿ ಕುಸಿದು ಬಿದ್ದರು. ಕೂಡಲೇ ಅವರನ್ನು ವ್ಹೀಲ್ ಚೇರ್ ನಲ್ಲಿ ಚೇಂಬರ್ ಗೆ ಕರೆದೊಯ್ಯಲಾಯಿತು. ಸುಪ್ರೀಂಕೋರ್ಟ್ ನ ವೈದ್ಯರ ತಂಡ ಕೂಡಲೇ ಅವರಿಗೆ ಸೂಕ್ತ ಚಿಕಿತ್ಸೆ ನೀಡಿದರು. ಸ್ವಲ್ಪ ಸಮಯದಲ್ಲೇ ಚೇತರಿಸಿಕೊಂಡ ಜಸ್ಟೀಸ್ ಭಾನುಮತಿ ತಮ್ಮ ಚೇಂಬರ್ ನಲ್ಲೇ ದೋಷಿ ವಿನಯ್ ಶರ್ಮಾ ಅರ್ಜಿಯನ್ನು ವಜಾಗೊಳಿಸಿ ತೀರ್ಪು ಪ್ರಕಟಿಸಿದ್ದಾರೆ…

Leave a Comment