ಕೋಮಲ್ ಹೊಸ ಲುಕ್ ಪ್ರೇಕ್ಷಕರಿಗೆ ಕೊಡುತ್ತಾ ಕಿಕ್

ಕೋಮಲ್ ಇದುವರೆಗಿನ ಹಾಸ್ಯನಟನ ಇಮೇಜ್ ಕಳಚಿಕೊಂಡು ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಕೋಮಲ್ ಹೊಸ ರೂಪದಲ್ಲಿ ಬರುವುದಕ್ಕೂ ಕಾರಣವಿದೆ ಅದೇ ಕೆಂಪೇಗೌಡ ೨’ ಸಿನೆಮಾ. ಇದರಲ್ಲಿ ಕೋಮಲ್ ಟಫ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಪೊಲೀಸ್ ಅಧಿಕಾರಿ ಪಾತ್ರಕ್ಕಾಗಿ ಕೋಮಲ್ ಸಾಕಷ್ಟು ಸಿದ್ಧತೆಯನ್ನೂ ನಡೆಸಿದ್ದಾರೆ.ಬರೋಬರಿ ಒಂದೂವರೆ ವರ್ಷಗಳ ನಂತರ ಪಕ್ಕಾ ಮಾಸ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ಕೋಮಲ್ ಸುದೀಪ್ ಅಭಿನಯಿಸಿದ್ದ ಕೆಂಪೇಗೌಡ ಸಿನೆಮಾಕ್ಕೂ ಕೆಂಪೇಗೌಡ ೨’ ಗೂ ಯಾವುದೇ ಸಂಬಂಧವಿಲ್ಲ ಎನ್ನುವ ಸ್ಪಷ್ಟನೆ ನೀಡುತ್ತಾರೆ.

ಟಫ್ ಪೊಲೀಸ್ ಅಧಿಕಾರಿ ಪಾತ್ರವಾಗಿರುವುದರಿಂದ ಹಾಸ್ಯ ಇದೆಯಾ ಎನ್ನುವ ಪ್ರಶ್ನೆಗೆ ಕೋಮಲ್ ಹಾಸ್ಯ ಇದೆ. ಆದರೆ ಅದು ಬೇಕಂತಲೇ ಸೃಷ್ಟಿಸುವ ಹಾಸ್ಯ ಅಲ್ಲ. ಅದಾಗೇ ಸೃಷ್ಟಿಯಾಗುತ್ತದೆ.ಪೊಲೀಸ್ ಮನಸ್ಥಿತಿಯನ್ನು ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿರುವ ಸಿನಿಮಾ ಇದು. ಆ ಮನಸ್ಥಿತಿಯ ಮೂಲಕವೇ ಹಾಸ್ಯ ಉಕ್ಕುತ್ತದೆ. ನನ್ನ ಟ್ರೇಡ್‌ಮಾರ್ಕ್ ಇದ್ದೇ ಇರುತ್ತದೆ. ಆದರೆ ಇದು ಖಂಡಿತ ಹಾಸ್ಯ ಸಿನಿಮಾ ಅಲ್ಲ ಎನ್ನುವ ವಿವರಣೆ ಅವರದು.

‘ಕೆಂಪೇಗೌಡ’ ಸಿನಿಮಾ ನಿರ್ಮಾಪಕ ಶಂಕರೇಗೌಡ ಅವರಿಗೆ ‘ಕೆಂಪೇಗೌಡ ೨’ ಸಿನಿಮಾ ಮಾಡಬೇಕು ಎಂದು ತುಂಬಾ ಆಸೆ ಇದ್ದರಿಂದ ಬಹಳದಿನಗಳ ಹಿಂದೆಯೇ ಹೆಸರನ್ನೂ ರಿಜಿಸ್ಟರ್ ಮಾಡಿಟ್ಟುಕೊಂಡಿದ್ದರು.ಅದರಲ್ಲಿ ನಾಯಕನಾಗುವ ಅವಕಾಶ ದೊರೆತಿರುವುದು ನನ್ನ ಅದೃಷ್ಟ ಆದರೆ ಇದು ‘ಕೆಂಪೇಗೌಡ’ ಸಿನೆಮಾದ ಮುಂದುವರಿದ ಭಾಗವೂ ಅಲ್ಲ ‘ಸಿಂಗಂ ೨’ನ ರಿಮೇಕೂ ಅಲ್ಲ. ಸ್ವಂತ ಕಥೆಯಾಗಿದೆ ಹಾಗಾಗಿಯೇ ಚಿತ್ರಕ್ಕೆ ‘ಪಕ್ಕಾ ಒರಿಜಿನಲ್ ಎಂಬ ಅಡಿಬರಹವನ್ನು ಇಟ್ಟಿದ್ದೇವೆ ಎನ್ನುತ್ತಾರೆ ಕೋಮಲ್.

ಎಂದು ಕೆಂಪೇಗೌಡ ೨’ ಸಿನೆಮಾ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಹೊಸ ಲುಕ್‌ನೊಂದಿಗೆ ಕಾಣಿಸಿಕೊಂಡ ನಂತರ ಮಾದ್ಯಮಗಳ ಮುಂದೆ ಹಾಜರಾದ ಕೋಮಲ್,ಕೆಂಪೇಗೌಡ ೨’ ಚಿತ್ರದ ನಿರ್ದೇಶಕರು ಅಂತರರಾಷ್ಟ್ರೀಯ ಮಟ್ಟದ ಆಡ್ ಮೇಕರ್. ಹಾಗೆಯೇ ‘ಅವತಾರ್ಚಿತ್ರದ ಆನಿಮೇಷನ್ ತಂಡದಲ್ಲಿಯೂ ಕೆಲಸ ಮಾಡಿದವರು. ಅವರು ಕಥೆ ಹೇಳಿದಾಗ ಈ ಪಾತ್ರಕ್ಕೆ ನಾನು ಸೂಕ್ತ ಆಗುತ್ತೇನಾ ಇಲ್ವಾ ಎನ್ನುವುದರ ಬಗ್ಗೆ ನನಗೂ ಅನುಮಾನಗಳಿದ್ದವು.

ಅದಕ್ಕಾಗಿ ಸಿದ್ದತೆ ಮಾಡಿಕೊಂಡೆ ಹೊಸ ಗೆಟಪ್‌ನಲ್ಲಿ ಚಿತ್ರೀಕರಿಸಿಯೇ ನೋಡಬೇಕು ಅಂದುಕೊಂಡೆವು.ನನ್ನ ಸಿನೆಮಾ ಜೀವನದಲ್ಲಿ ಮೊದಲ ಬಾರಿಗೆ ಆಡಿಷನ್ ಮಾಡಿದ್ದು ಕೆಂಪೇಗೌಡ ೨’ಗಾಗಿ ಎನ್ನುವ ಕೋಮಲ್ ಆಡಿಷನ್ ನಂತರ ಬೇರೆಬೇರೆ ಕೋನಗಳಲ್ಲಿ ನನ್ನನ್ನು ಪರದೆಯ ಮೇಲೆ ನೋಡಿದ ಮೇಲೆ ನಿರ್ದೇಶಕರಿಗೆ ಖುಷಿಯಾಗಿ ಬರೀ ಟ್ರೇಲರ್‌ಗಾಗಿಯೇ ೧೨ ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ ಎನ್ನುತ್ತಾರೆ.

ಸಿನೆಮಾಗಳಲ್ಲಿ ಸಾಮಾನ್ಯವಾಗಿ ಪೊಲೀಸರು ಅಂದರೆ ಗನ್ ಹಿಡ್ಕೊಂಡು ಓಡಾಡುತ್ತಾ ಇರುವವರು ಎಂಬ ಇಮೇಜ್ ಇದೆ. ಆದರೆ ವಾಸ್ತವದಲ್ಲಿ ಹಾಗಿರುವುದಿಲ್ಲ. ಈ ಸಿನಿಮಾದಲ್ಲಿನ ನನ್ನ ಪಾತ್ರ ವಾಸ್ತವದ ಪೊಲೀಸರಿಗೆ ತುಂಬಾ ಹತ್ತಿರದಲ್ಲಿದೆ. ಪೊಲೀಸರಿಗೂ ಸಂಸಾರ,ಹೆಂಡತಿ,ಮಕ್ಕಳು, ಸ್ನೇಹಿತರು ಇರುತ್ತಾರೆ  ಒಂದು ಜಾಲಿ ಲೈಫ್ ಇರುತ್ತೆ. ಅವರದ್ದೇ ಆದ ಹವ್ಯಾಸಗಳಿರುತ್ತವೆ ಅವುಗಳ ಹೊರತಾಗಿಯೇ ಅಪರಾಧಿಗಳಿಗೆ ಸಿಂಹಸ್ವಪ್ನವಾಗಿರುತ್ತಾರೆ ಅದನ್ನೇ ಕೆಂಪೇಗೌಡ ೨’ ಚಿತ್ರ ಹೇಳಲಿದೆ.

ಕೆಂಪೇಗೌಡ ೨’  ಡಿಜಿಟಲ್ ಇಂಡಿಯಾ ಪರಿಕಲ್ಪನೆಗೆ ತೊಂದರೆ ತರುವ ಅಪರಾಧಿಗಳನ್ನು ಮಟ್ಟಹಾಕುವ ಕಥೆಯನ್ನು ಹೊಂದಿದೆ ಸಾಮಾನ್ಯ ಅಪರಾಧಿಗಳನ್ನು ನಿಭಾಯಿಸುವ ಪೊಲೀಸ್ ಅಧಿಕಾರಿ ವೈಟ್ ಕಾಲರ್ ಅಪರಾಧಿಗಳನ್ನು ಹೇಗೆ ಬಲಿಹಾಕುತ್ತಾನೆ ಎನ್ನುವುದನ್ನು ತುಂಬ ಜಾಣ್ಮೆಯಿಂದ ಸಿನೆಮಾ ಹೇಳಲಿದೆ.

ಕೆಂಪೇಗೌಡ೨ ಚಿತ್ರದ ಕತೆ ಮೇಲೆ ನನಗೆ ನಂಬಿಕೆ ಇದೆ. ಕತೆ ಚಿತ್ರಕಥೆ ಚೆನ್ನಾಗಿದ್ದಾಗ ಯಾವ ಹೆಸರಿಟ್ಟರೂ ಅದು ಎಲ್ಲ ಪ್ರಭಾವಳಿಗಳನ್ನೂ ಮೀರಿ ಗೆಲ್ಲುತ್ತದೆ ಎಂಬ ವಿಶ್ವಾಸ ಇದೆ. ‘ಬಿಲ್ಲಾ ಸಿನಿಮಾವನ್ನು ರಜನಿಕಾಂತ್ ಮಾಡಿದರು, ಹಾಗೆಯೇ ಅಜಿತ್ ಸಹ ಮಾಡಿದರು. ಎರಡನ್ನೂ ಜನರು ಒಪ್ಪಿಕೊಂಡರು ಎಂದು  ಕೆಂಪೇಗೌಡ’ ಅಂದ ತಕ್ಷಣ ನೆನಪಾಗುವುದು ಸುದೀಪ್ ಅದರಂದ ತಪ್ಪಿಸಿಕೊಳ್ಳುವುದು ಹೇಗೆ ಎನ್ನುವ ಪ್ರಶ್ನೆಗೆ ಈ ರೀತಿಯ ವಿಶ್ಲೇಷಣೆ ಮಾಡಿದರು.

ಒಬ್ಬೊಬ್ಬರದು ಒಂದೊಂದು ರೀತಿಯ ಮ್ಯಾನರಿಸಂ ಇರುತ್ತದೆ. ಆದರೆ ಇದು ಪೂರ್ತಿ ಬೇರೆಯದೇ ಆದ ಸಿನಿಮಾ ಆಗಿದ್ದರಿಂದ ಅಂಥ ತೊಂದರೆಯೇನೂ ಬರುವುದಿಲ್ಲ. ಇನ್‌ಫ್ಯಾಕ್ಟ್ ಮುಂದೆ ಯಾರಾದ್ರೂ ಈ ಕಥೆಯ ಸೀಕ್ವೆಲ್ ಮಾಡಿದರೆ ಆಗ ಅವರಿಗೆ ನನ್ನ ಪಾತ್ರದ ಪ್ರಭಾವಳಿಯಿಂದ ಬಿಡಿಸಿಕೊಳ್ಳುವುದು ಕಷ್ಟ ಆಗಬಹುದಷ್ಟೆ ಎಂದು ವಿವರಿಸಿದರು ಕೋಮಲ್.

ಕಳೆದ ಒಂದೂವರೆ ವರ್ಷದಲ್ಲಿ  ಸಾಕಷ್ಟು ಸಿನೆಮಾಗಳಲ್ಲಿ ನಟಿಸಲು ನನಗೆ ಅವಕಾಶಗಳು ಬಂದಿದ್ದು ನಿಜ,ಆದರೆ ನಾನು ಅವುಗಳನ್ನು ಒಪ್ಪಿಕೊಳ್ಳಲಿಲ್ಲ. ನನ್ನೊಳಗಿನ ಕಲಾವಿದನ್ನು ಪೂರ್ತಿಯಾಗಿ ಬಳಸಿಕೊಳ್ಳುವ ಅವಕಾಶಕ್ಕಾಗಿ ಕಾಯುತ್ತಿದ್ದ ನನಗೆ ಕೆಂಪೇಗೌಡ ೨’ ಚಿತ್ರದಲ್ಲಿ ಅಂತಹ ಅವಕಾಶ ಬಂತು ಚಿತ್ರಕ್ಕಾಗಿ ನನ್ನ ಮ್ಯಾನರಿಸಂ, ಲುಕ್ ಎಲ್ಲವೂ ಬದಲಾಗಿದೆ. ಇನ್‌ಫ್ಯಾಕ್ಟ್ ಟೀಸರ್‌ಗಾಗಿ ಚಿತ್ರೀಕರಿಸುತ್ತಿದ್ದಾಗ ಮೊದಲ ದೃಶ್ಯದಲ್ಲಿ ಕ್ಯಾಮೆರಾಮೆನ್ ಶಾಟ್ ಕಟ್ ಮಾಡಿ ಓಡಿ ಬಂದು ತಬ್ಬಿಕೊಂಡರು. ‘ನಾನು ಇದುವರೆಗೆ ಕೋಮಲ್ ಅವರನ್ನು ಬೇರೆಯದೇ ಇಮೇಜ್‌ನಲ್ಲಿ ನೋಡಿದ್ದೆ. ಆದರೆ ಈ ಫ್ರೇಂನಲ್ಲಿ ಕೋಮಲ್ ಹೇಗೆ ಕಾಣಿಸ್ತಿದಾರೆ  ನನಗೆ ಹಳೆಯ ಕೋಮಲ್ ನೆನಪಾಗಲೇ ಇಲ್ಲ.

ಬದಲಾಗಿ ಒಬ್ಬ ಕಠಿಣ ಪೊಲೀಸ್ ಅಧಿಕಾರಿ ಕಾಣಿಸಿದ ಎಂದಾಗ ನನ್ನ ಖಷಿಗೆ ಪಾರವೇ ಇಲ್ಲ. ಅಷ್ಟರಮಟ್ಟಿಗೆ ನನ್ನ ಲುಕ್ ಬದಲಾಗಿದೆ. ಅವರಿಗೆ ಸಿಕ್ಕ ಆ ಥ್ರಿಲ್ ಪ್ರೇಕ್ಷಕರಿಗೂ ಖಂಡಿತ ಸಿಗುತ್ತದೆ ಎಂಬ ನಂಬಿಕೆ ನನ್ನದು. ಈ ಚಿತ್ರದ ಟೀಸರ್‌ನಲ್ಲಿ ನನ್ನನ್ನೇ ನಾನು ನೋಡಿಕೊಂಡಾಗ ನನ್ನ ಇಷ್ಟು ವರ್ಷದ ನೋವು ನೀಗುತ್ತದೆ ಎಂಬ ನಂಬಿಕೆ ಹುಟ್ಟಿಕೊಂಡಿದೆ. ೨೨ ವರ್ಷಗಳಿಂದ ಸಿನಿಮಾರಂಗದಲ್ಲಿದ್ದೇನೆ ಯಾವತ್ತೂ ಮೇಕಪ್ ಇಲ್ಲದೇ ಅಭಿನಯ ಮಾಡಿರಲಿಲ್ಲ. ಆದರೆ ಈ ಸಿನಿಮಾದಲ್ಲಿ ಕೃತಕವಾಗಿ ಕಾಣಿಸಬಾರದು ಎನ್ನುವ ಕಾರಣಕ್ಕಾಗಿ ಮೇಕಪ್ ಇಲ್ಲದೆಯೇ ಅಭಿನಯಿಸಿದ್ದೇನೆ ಎಂದರು ಕೋಮಲ್  ಸಿನಿಮಾ ಅಂದ ಮೇಲೆ ಸೋಲು ಗೆಲುವು ಸಹಜ, ಎಷ್ಟೋ ಸಿನಿಮಾಗಳು ಗೆದ್ದಿರುತ್ತವೆ. ಅದಕ್ಕೆ ನಾನೊಬ್ಬನೇ ಹೊಣೆಗಾರನಾಗಿವುದಿಲ್ಲವೋ ಹಾಗೆಯೇ ಸೋಲಿಗೂ ನಾನೊಬ್ಬನೇ ಕಾರಣನಾಗಿರುವುದಿಲ್ಲ.

ಗೆದ್ದಾಗ ಹಿಗ್ಗಿದೇ ಸೋತಾಗ ಕುಗ್ಗದೆ ಸಿನೆಮಾ ರಂಗದಲ್ಲಿ ಮುಂದುವರೆದಿದ್ದೇನೆ ಅಭಿನಯ ಬಿಟ್ಟರೆ ಬೇರೆ ವೃತ್ತಿ ನನಗೆ ಗೊತ್ತಿಲ್ಲ. ಒಳ್ಳೆಯ ಸಿನಿಮಾವನ್ನು ಜನರು ಗೆಲ್ಲಿಸುತ್ತಾರೆ ಎಂಬ ನಂಬಿಕೆಯಂತೂ ಇದೆ.

ಹೊಸದೊಂದು ಬದಲಾವಣೆ ಕೊಡಬೇಕು ಎಂದಾಗ ನಾನು ಮೊದಲು ಬದಲಾಗಬೇಕು. ನಾನೇ ಬದಲಾಗದೆ ಹೊಸದನ್ನು ಬಯಸಿದರೆ ಸಿಗಲ್ಲ. ಹಾಗಾಗಿ ಈ ಚಿತ್ರಕ್ಕಾಗಿ ನಾನು ಬದಲಾಗಿದ್ದೇನೆ. ಈ ಚಿತ್ರದಲ್ಲಿ ನನ್ನ ನಟನೆ, ಲುಕ್ ಎಲ್ಲವೂ ಪೂರ್ತಿ ಭಿನ್ನವಾಗಿರುತ್ತದೆ ಎನ್ನುತ್ತಾರೆ ಕೋಮಲ್.                                                        _ ಪ್ರಕಾಶ್

Leave a Comment