ಕೋಟಿ ರೂ ದಾಟಿದ ರಶ್ಮಿಕಾ ಸಂಭಾವನೆ

ಬೆಂಗಳೂರು, ಜು ೧೦- ಸದ್ಯ ದಕ್ಷಿಣ ಭಾರತ ಚಿತ್ರಗಳಲ್ಲಿ ಬುಸ್ಯಿಯಾಗಿರುವ ಕನ್ನಡಿತಿ ನಟಿ ರಶ್ಮಿಕಾ ಮಂದಣ್ಣ ಇದೀಗ ೧ ಕೋಟಿ ರೂ ಸಂಭಾವನೆ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ

ರಶ್ಮಿಕಾ ಕಾಮ್ರೆಡ್ ಸಿನಿಮಾಗಾಗಿ ರಶ್ಮಿಕಾ ೮೦ ಲಕ್ಷ ಸಂಭಾವನೆ ತೆಗೆದುಕೊಂಡಿದ್ದರು. ಈಗ ಪ್ರಿನ್ಸ್ ಜತೆ ಅಭಿನಯಿಸೋಕೆ ರಶ್ಮಿಕಾ ಬರೋಬ್ಬರಿ ಒಂದು ಕೋಟಿ ೧೦ ಲಕ್ಷ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಡಿಯರ್ ಕಾಮ್ರೆಡ್ ಬಿಡುಗಡೆಯಾದ ನಂತರ ಅಂದರೆ ಸಂಕ್ರಾಂತಿಗೆ ಮಹೇಶ್ ಜತೆಗಿನ ಸಿನಿಮಾ ಸಹ ಬರಲಿದೆ. ಟಾಲಿವುಡ್‌ನಲ್ಲಿ ಈಗ ಕನ್ನಡದ ಕುವರಿ ಹಾಗೂ ಕೊಡಗಿನ ಬೆಡಗಿ ರಶ್ಮಿಕಾ ಬಹು ಬೇಡಿಕೆಯ ನಟಿ. ಒಂದರ ಹಿಂದೆ ಒಂದರಂತೆ ಸ್ಟಾರ್ ನಟರೊಂದಿಗೆ ಸಿನಿಮಾಗಳಿಗೆ ಸಹಿ ಹಾಕುತ್ತಿರುವ ರಶ್ಮಿಕಾ ಮಂದಣ್ಣ ಈಗ ಸಂಭಾವನೆ ವಿಷಯದಲ್ಲೂ ಸಿಕ್ಕಾಪಟ್ಟೆ ಮುನ್ನಲೆಗೆ ಬಂದಿದ್ದಾರೆ.

ಹೌದು, ರಶ್ಮಿಕಾ  ಮಹೇಶ್ ಜತೆ ’ಸರಿಲೇರು ನೀಕೆವ್ವರು’ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾಗಾಗಿ ರಶ್ಮಿಕಾ ಕೋಟಿ ಕೋಟಿ ಸಂಭಾವನೆ ಪಡೆದಿದ್ದಾರಂತೆ. ಇನ್ನು ತಮಿಳಿನಲ್ಲಿ ವಿಜಯ್‌ಗೆ ನಾಯಕಿಯಾಗಿ ಅಭಿನಯಿಲಿರುವ ರಶ್ಮಿಕಾ ಈ ಸಿನಿಮಾಗಾಗಿ ೧.೫ ಕೋಟಿ ಹಣ ಪಡೆದಿದ್ದಾರೆ. ಈ ಚಿತ್ರವನ್ನು ಲೋಕೇಶ್ ಕನಕರಾಜ್ ತೆರೆ ಮೇಲೆ ತರಲಿದ್ದಾರೆ. ಕೇವಲ ಬೇರೆ ಭಾಷೆಯ ನಟಿಯರು ಮಾತ್ರ ಇಷ್ಟು ದೊಡ್ಡ ಮಟ್ಟದಲ್ಲಿ ಸಂಭಾವನೆ ಪಡೆಯುತ್ತಿದ್ದನ್ನು ನೋಡಿ, ಕೇಳಿದವರಿಗೆ ಕನ್ನಡತಿ ನಟಿ ರಶ್ಮಿಕಾ ಕೋಟಿ ಕೋಟಿ ಸಂಭಾವನೆ ಪಡೆಯುತ್ತಿರುವುದನ್ನು ಕಂಡು ಸಂತಸ ವ್ಯಕ್ತಪಡಿಸಿದ್ದಾರೆ.

 

Leave a Comment