ಕೊಹ್ಲಿ ವಿಕೆಟ್ ಹೇಗೆ ಪಡೆಯಬೇಕೆಂದು ಕನಸು- ಆಂಡರ್ಸನ್

ಬರ್ಮಿಂಗ್‌ಹ್ಯಾಮ್, ಆ ೪- ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಹೇಗೆ ಪಡೆಯಬೇಕೆಂದು ಮಲಗುವಾಗ ಕನಸು ಕಾಣುತ್ತೇವೆ ಎಂದು ಇಂಗ್ಲೆಂಡ್‌ನ ಬೌಲರ್ ಜೇಮ್ಸ್ ಆಂಡರ್ಸನ್ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.

ಇಂಗ್ಲೆಂಡ್ ಮತ್ತು ಭಾರತ ನಡುವಿನ ಮೊದಲ ಟೆಸ್ಟ್ ರೋಚಕ ಘಟ್ಟ ತಲುಪಿದೆ. ಎರಡು ತಂಡಕ್ಕೂ ಗೆಲ್ಲುವ ಅವಕಾಶವಿದ್ದು, ಯಾರಿಗೆ ವಿಜಯಲಕ್ಷ್ಮಿ ಒಲಿಯುತ್ತಾಳೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇಂದು ಅಂತ್ಯ ಕಾಣಲಿರುವ ಈ ಪಂದ್ಯದಲ್ಲಿ ಭಾರತಕ್ಕೆ ಕೊಹ್ಲಿ ಆಧಾರವಾದರೆ, ಆಂಗ್ಲರಿಗೆ ತವರಿನ ಬಲವಿದೆ. ಈ ಮಧ್ಯೆ ಇಂಗ್ಲೆಂಡ್‌ನ ಟಾಪ್ ಬೌಲರ್ ಜೇಮ್ಸ್ ಆಂಡರ್ಸನ್ ಕೊಹ್ಲಿಯನ್ನು ಔಟ್ ಮಾಡಿದರೆ ಗೆಲುವು ನಮ್ಮದಾಗಲಿದೆ ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಜೇಮ್ಸ್ ನಾವೆಲ್ಲರು ಕೊಹ್ಲಿಯನ್ನು ಹೇಗೆ ಔಟ್ ಮಾಡಬೇಕೆಂದು ಕನಸು ಕಾಣಬೇಕಿದೆ ಎಂದಿದ್ದಾರೆ. ಕೊಹ್ಲಿ ಮೊದಲ ಇನಿಂಗ್ಸ್‌ನಲ್ಲೂ ಎಲ್ಲಾ ಬ್ಯಾಟ್ಸ್‌ಮ್ಯಾನ್‌ಗಳು ವಿಫಲರಾದರೂ ಅವರೊಬ್ಬರೆ ಏಕಾಂಗಿ ಹೋರಾಟ ನಡೆಸಿ ೧೪೯ ರನ್‌ಗಳಿಸಿದರಲ್ಲದೆ ತಂಡದ ಹಿನ್ನಡೆಯನ್ನು ಕಡಿಮೆ ಮಾಡಿದ್ದರು.

ಇದೀಗ ನಾವು ನೀಡಿರುವ ಗುರಿ ಕಡಿಮೆಯಿದೆ. ಈಗಾಗಲೆ ಬೇಗ ೫ ವಿಕೆಟ್ ಪಡೆದಿದ್ದೇವೆ. ಉಳಿದ ೫ ವಿಕೆಟ್‌ಗಳನ್ನು ಬೇಗ ಪಡೆಯಬೇಕಿದೆ, ಇಲ್ಲವಾದರೆ ಕೊಹ್ಲಿ ಉತ್ತಮ ರನ್ಗಳಿಸಿ ನಮ್ಮ ಗೆಲುವನ್ನು ಕಸಿದುಕೊಳ್ಳಲಿದ್ದಾರೆ ಎಂದಿದ್ದಾರೆ. ನಾಳಿನ ಇನಿಂಗ್ಸ್‌ನಲ್ಲಿ ಮೊದಲ ೧೫-೨೦ ಓವರ್ಗಳು ಪ್ರಮುವಾಗಿದ್ದು ಅಷ್ಟರಲ್ಲಿ ವಿಕೆಟ್ ಪಡೆಯುವುದು ನಮ್ಮ ಗುರಿಯಾಗಿದೆ. ಈ ಪಂದ್ಯ ಗೆಲ್ಲುವುದು ಇಬ್ಬರಿಗೂ ಸುಲಭವಲ್ಲ, ಗೆಲುವು ಯಾರ ಪಾಲಾದರೂ ಅಚ್ಚರಿಯಿಲ್ಲ ಎಂದಿದ್ದಾರೆ.

Leave a Comment