ಕೊಹ್ಲಿ ಫಿಟ್‌ನೆಸ್ ಕಸರತ್ತು ವೈರಲ್

ಆಕ್ಲೆಂಡ್, ಜ ೨೮- ಕಿವೀಸ್ ವಿರುದ್ಧದ ಟಿ೨೦ ಪಂದ್ಯದಲ್ಲಿ ಭರ್ಜರಿ ಗೆಲುವು ಕಂಡ ಬಳಿಕ ಟೀಂ ಇಂಡಿಯಾದ ಆಟಗಾರರು ಇನ್ನಷ್ಟು ಫಿಟ್ ಆಗಿರಲು ಭಾರಿ ಕಸರತ್ತು ನಡೆಸಿದ್ದು, ನಾಯಕ ವಿರಾಟ್ ಕೊಹ್ಲಿಯ ಫಿಟ್‌ನೆಸ್‌ಗಾಗಿ ಮಾಡಿದ ಕಸರತ್ತು ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ಮೈದಾನದಲ್ಲಿ ಎದುರಾಳಿ ಬೌಲರ್‌ಗಳಿಗೆ ಬೆವರಿಳಿಸುವ ಕೊಹ್ಲಿ ಜಿಮ್‌ನಲ್ಲೂ ರನ್ ಮಳೆ ಹರಿಸಲು ಸಕತ್ ತಯಾರಿ ಮಾಡುತ್ತಾರೆ ಎಂಬುದು ಈ ವಿಡಿಯೋ ನೋಡಿದ ಮಂದಿ ಹೇಳುತ್ತಿದ್ದಾರೆ.
ಈಗಾಗಲೇ ದಾಖಲೆ ಮೇಲೆ ದಾಖಲೆ ಉಡೀಸ್ ಮಾಡುತ್ತಿರುವ ಕೊಹ್ಲಿ ಮೈದಾನದಲ್ಲಿ ಬ್ಯಾಟ್ ಹಿಡಿದು ನಿಂತರೇ ಅವರಿಗೆ ಕಡಿವಾಣ ಹಾಕುವುದ ಕಷ್ಟ ಸಾಧ್ಯ, ಅದಕ್ಕಾಗಿ ಕೊಹ್ಲಿ ಜಿಮ್‌ನಲ್ಲಿ ಸಾಕಷ್ಟು ಸಮಯ ಕಳೆಯುತ್ತಾರೆ.
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫೀಲ್ಡ್‌ನಲ್ಲಿನ ಅಬ್ಬರಕ್ಕೆ ಇದೇ ವರ್ಕೌಟ್ ಕಾರಣ. ವಿರಾಟ್ ಕೊಹ್ಲಿ ಜಿಮ್‌ನಲ್ಲಿ ವರ್ಕೌಟ್ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ. ವಿಡಿಯೋದಲ್ಲಿ ವಿರಾಟ್ ಕೊಹ್ಲಿ ಲಾಂಗ್ ಜಂಪಿಂಗ್ ಸೇರಿದಂತೆ ವಿವಿಧ ರೀತಿಯ ವರ್ಕೌಟ್ ಮಾಡಿದ್ದಾರೆ. ಅಲ್ಲದೆ, ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಆಯ್ಕೆಯಾಗಿರಬಾರದು. ಅದು ನಾವು ಉತ್ತಮವಾಗೋದಕ್ಕೆ ಅವಶ್ಯಕವಾಗಿರಬೇಕು ಎಂದು ಶೀರ್ಷಿಕೆ ಕೂಡ ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ಕೊಹ್ಲಿ ಅವರ ಅದ್ಭುತ ವರ್ಕಔಟ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

Leave a Comment