ಕೊಹ್ಲಿ ಪಡೆಗೆ ಶುಭಹಾರೈಸಿದ್ದ ಟ್ವಿಟ್‌ ಡೆಲಿಟ್‌ ಮಾಡಿದ ಹಸನ್‌ ಅಲಿ

ಲಂಡನ್‌, ಜೂ 21 -ಪಾಕಿಸ್ತಾನ ಐಸಿಸಿ ವಿಶ್ವಕಪ್‌ ಪಂದ್ಯದಲ್ಲಿ ಭಾರತದ ವಿರುದ್ಧ ಸೋಲು ಅನುಭವಿಸಿದ್ದ ಬಳಿಕ ಕೊಹ್ಲಿ ಪಡೆಗೆ ಶುಭಕೋರಿದ್ದ ಹಸನ್‌ ಅಲಿ ಅವರು ಇದೀಗ ಆ  ಟ್ವಿಟ್‌ ಅನ್ನು ಡೆಲಿಟ್‌ ಮಾಡಿದ್ದಾರೆ.

ಜೂನ್‌ 16 ರಂದು ಮ್ಯಾಂಚೆಸ್ಟರ್‌ನಲ್ಲಿ ನಡೆದಿದ್ದ ಭಾರತದ ವಿರುದ್ಧ ಪಾಕಿಸ್ತಾನ 89 ರನ್‌ಗಳಿಂದ ಸೋಲು ಅನುಭವಿಸಿತ್ತು. ಈ ಪಂದ್ಯದ ಸೋಲಿನ ಬಳಿಕ ನಾಯಕ ಸರ್ಫರಾಜ್‌ ಅಹಮದ್‌ ಹಾಗೂ ಬೌಲಿಂಗ್‌ನಲ್ಲಿ ದುಬಾರಿಯಾಗಿದ್ದ ಹಸನ್‌ ಅಲಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳ ಸುರಿಮಳೆಯೇ ಸುರಿದಿತ್ತು.

ಈ ಪಂದ್ಯದ ಬಳಿಕ ಭಾರತದ ಪತ್ರಕರ್ತೆಯೊಬ್ಬರು ಭಾರತ ತಂಡಕ್ಕೆ ಶುಭಹಾರೈಸಿದ್ದರು. ” ಶುಭಾಶಯಗಳು ಟೀಂ ಇಂಡಿಯಾ ಈ ಗೆಲುವನ್ನು ಸಂಭ್ರಮಿಸೋಣ. ನಿಮ್ಮ ವಿಶ್ವಕಪ್‌ ಗೆಲ್ಲುವ ಕನಸು ನನಸಾಗಲಿ. ಭಾರತೀಯಳಾಗಿ ಜನಿಸಿದ್ದ ಹೆಮ್ಮೆ ಪಡುತ್ತೇನೆ” ಎಂದು ಪರ್ತೆಕರ್ತೆ ಶುಭಹಾರೈಸಿದ್ದರು. ಈ ಟ್ವಿಟ್‌ಗೆ ಪಾಕಿಸ್ತಾನದ ವೇಗಿ ಹಸನ್‌ ಅಲಿ ಹಸನ್ ಅಲಿ ನೀವು ಅಂದುಕೊಂಡತೆ ಸಾಧಿಸಿದ್ದೀರಾ ನಿಮಗೆ ಶುಭವಾಗಲಿ ಎಂದು ಟ್ವಿಟ್‌ ಮಾಡಿದ್ದರು. ಇದೀಗ ಅವರು ತನ್ನ ಟ್ವಿಟ್‌ ಅನ್ನು ಟೆಲಿಟ್‌ ಮಾಡಿದ್ದಾರೆ.

ಈ ಪಂದ್ಯದ ಸೋಲಿನಿಂದ ಸರ್ಫರಾಜ್‌ ಅಹಮದ್‌ ಅವರನ್ನು ಮಾಜಿ ವೇಗಿ ಶೋಯೆಬ್‌ ಅಕ್ತರ್‌ ಕೂಡ ಟೀಕೆ ಮಾಡಿದ್ದರು. ನೀವು ಬುದ್ದಿ ಇಲ್ಲದ ನಾಯಕರು ಎಂದು ನಿಂಧಿಸಿದ್ದರು.

Leave a Comment