ಕೊಹ್ಲಿ ನಾಯಕತ್ವದ ತಂಡ ಎದುರಿಸುವುದು ಕಠಿಣ: ಡುಪ್ಲೆಸಿಸ್

ರಾಂಚಿ, ಅ ೨೨ – ಟೀಂ ಇಂಡಿಯಾದ ಆಟಗಾರರು ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಮೂರು ವಿಭಾಗಗಳಲ್ಲಿ ನಮ್ಮ ಮೇಲೆ ಪಾರಮ್ಯ ಮೆರೆದಿದ್ದು, ಕೊಹ್ಲಿ ನಾಯಕತ್ವದಲ್ಲಿ ತಂಡವನ್ನು ಎದುರಿಸುವುದು ಕಠಿಣವಾಗಿದೆ ಎಂದು ದಕ್ಷಿಣ ಆಫ್ರಿಕಾ ನಾಯಕ ಫಾಫ್ ಡುಪ್ಲೆಸಿಸ್ ಹೇಳಿದರು.

ಸರಣಿ ಸೋತ ಬಳಿಕ ಮಾತನಾಡಿದ ಡುಪ್ಲೆಸಿಸ್, ಪ್ರಸಕ್ತ ಸರಣಿ ನಮ್ಮ ಪಾಲಿಗೆ ಕಠಿಣವಾಗಿತ್ತು. ಮತ್ತೊಮ್ಮೆ ಬಲಿಷ್ಟ ಬ್ಯಾಟಿಂಗ್ ಪಡೆಯೊಂದಿಗೆ ಭಾರತಕ್ಕೆ ಪ್ರವಾಸ ಮಾಡುತ್ತೇವೆ ಎಂದು ಭರವಸೆ ನೀಡಿದರು.

ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡವನ್ನು ಎದುರಿಸುವುದು ನಿಜಕ್ಕೂ ಕಷ್ಟ. ಸರಣಿಯುದ್ದಕ್ಕೂ ಬ್ಯಾಟಿಂಗ್, ಬೌಲಿಂಗ್ ಹಾಗೂ ಫಿಲ್ಡಿಂಗ್ ಮೂರು ವಿಭಾಗಗಳಲ್ಲಿ ನಮ್ಮ ಮೇಲೆ ದಾಳಿ ನಡೆಸಿತ್ತು. ವಿಶೇಷವಾಗಿ ಭಾರತದ ವೇಗಿಗಳನ್ನು ಎದುರಿಸುವುದು ಕಠಿಣವಾಗಿತ್ತು. ಭಾರತದ ವೇಗಿಗಳಿಗೆ ನಮ್ಮ ತಂಡದ ವೇಗಿಗಳನ್ನು ಹೊಂದಾಣಿಕೆ ಮಾಡಲು ಸಾಧ್ಯವಿಲ್ಲ ಎಂದರು.

ಸರಣಿ ಆರಂಭಕ್ಕೂ ಮುನ್ನ ಭಾರತದ ಸ್ಪಿನ್ ಬಗ್ಗೆ ಚರ್ಚೆ ನಡೆಸಲಾಗಿತ್ತು. ಇದೇ ಸಂಗತಿ ಮನಸಿನಲ್ಲಿಟ್ಟುಕೊಂಡು ಭಾರತಕ್ಕೆ ಬಂದಿದ್ದೆವು. ಏಕೆಂದರೆ, ೨೦೧೫ರ ಬಳಿಕ ಇಲ್ಲಿನ ಪಿಚ್‌ಗಳಿಗೆ ಪೂರಕವಾಗಿ ಸಿದ್ಧಪಡಿಸಲಾಗಿದೆ ಎಂದು ಹೇಳಿಕೊಂಡರು.

Leave a Comment