ಕೊಹ್ಲಿ ಆಕರ್ಷಕ ಶತಕ ವಿಂಡೀಸ್ ವಿರುದ್ಧ ಭಾರತಕ್ಕೆ ೫೯ ರನ್ ಭರ್ಜರಿ ಗೆಲುವು

 

ಪೋರ್ಟ್‌ಆಫ್‌ಸ್ಪೇನ್, ಆ ೧೨- ನಾಯಕ ವಿರಾಟ್ ಕೊಹ್ಲಿ  ಭರ್ಜರಿ ಶಕತದ ನೆರವಿನಿಂದ  ವೆಸ್ಟ್ ಇಂಡೀಸ್ ವಿರುದ್ಧ ನಿನ್ನೆ ನಡೆದ  ಎರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ೫೯ ರನ್‌ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ ಭಾರತ ಏಕದಿನ ಸರಣೆಯಲ್ಲಿ ೧-೦ಯಿಂದ ಮುನ್ನಡೆ ಸಾಧಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ, ನಿಗದಿತ ೫೦ ಓವರ್‌ಗಳಲ್ಲಿ  ೭ ವಿಕೆಟ್ ಕಳೆದುಕೊಂಡು ೨೭೯ ರನ್‌ಗಳಿಸಿತು. ಆರಂಭದಲ್ಲೇ ಆಘಾತ ಅನುಭವಿಸಿದ ಭಾರತಕ್ಕೆ ಕೊಹ್ಲಿ ಬೆನ್ನೆಲುಬಾಗಿ ನಿಂತರು.

ವೆಸ್ಟ್ ಇಂಡೀಸ್ ಬೌಲಿಂಗ್ ದಾಳಿಯನ್ನು ಲೀಲಾ ಜಾಲವಾಗಿ ಎದುರಿಸಿ ೧೨೫ ಎಸೆತಗಳಲ್ಲಿ ೧೪ ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ ೧೨೦ ರ್ ಬಾರಿಸಿ ಏಕದಿನ ಕ್ರಿಕಟ್‌ನಲ್ಲಿ ೪೨ನೇ ಶತಕ ಸಿಡಿಸಿ ಕೀರ್ತಿಗೆ ಪಾತ್ರರಾದರು.. ಶ್ರೇಯಸ್ ಅಯ್ಯರ್ ೭೧ ರನ್‌ಗಳಿಸಿ ತಂಡಕ್ಕೆ ಆಸರೆಯಾದರು. ಉಳಿದಂತೆ ಇತರ ಆಟಗಾರರು ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾದರು.

ಭಾರತ ತಂಡ ನೀಡಿದ್ದ ೨೮೦ ರನ್‌ಗಳ  ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡ, ಭಾರತದ ಬೌಲಿಂಗ್ ದಾಳಿ ತತ್ತರಿಸಿತು. ೪೨ ಓವರ್‌ಗಳಲ್ಲಿ ೨೧೦ ರನ್‌ಗಳಿಗೆ ಆಲೌಟಾಯಿತು. ಮಳೆಯಿಂದಾಗಿ ಪಂದ್ಯಕ್ಕೆ ಸ್ವಲ್ಪ ಅಡಚಣೆ ಉಂಟಾದ ಹಿನ್ನೆಲೆಯಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ಡಕ್ವರ್ಥ್ ಲೂಯಿಸ್ ನಿಯಮದ ಅನ್ವಯ ೪೬ ಓವರ್‌ಗಳಲ್ಲಿ ೨೭೦ ರನ್ ಗುರಿ ನೀಡಲಾಗಿತ್ತು..

ವೆಸ್ಟ್ ಇಂಡೀಸ್ ಪರ ಎವಿನ್ ಲೂಯಿಸ್ ೬೫ ಮತ್ತು ನಿಕೋಲಸ್ ಪೂರನ್ (೪೮) ಮಾತ್ರ ಭಾರತೀಯ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಅದರೆ, ಉಳಿದ ಆಟಗಾರರು ಬಹು ಬೇಗನೆ ವಿಕೆಟ್ ಒಪ್ಪಿಸಿ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು.

ಭಾರತದ  ಪರ ಭವನೇಶ್ವರ್ ಕುಮಾರ್ ೪, ಮೊಹಮದ್‌ಶಮಿ ಮತ್ತು ಕುಲದೀಪ್ ಯಾದವ್ ತಲಾ ಎರಡು ವಿಕೆಟ್ ಪಡೆದರು.

ಪಂದ್ಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿರಾಟ್ ಕೊಹ್ಲಿ, ತಂಡದಲ್ಲಿ ಯಾವಾಗಾಲು ಶಿಖರ್ ಧವನ್ , ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಉತ್ತಮ ಆಟವಾಡಲಿಲ್ಲ.  ಆಗ ನಾನು ತಂಡದ ಜವಾಬ್ದಾರಿ  ತೆಗೆದುಕೊಂಡು ಶತಕ ಬಾರಿಸಿದೆ ಎಂದು ಹೇಳಿದರು.

ತಾವು ಟಾಸ್ ಗೆದ್ದದ್ದು ಅನುಕೂಲವಾಯಿತು. ಇಲ್ಲದಿದ್ದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಲು ಕಷ್ಟವಾಗುತ್ತಿತ್ತು ಎಂದು ಹೇಳಿದರು.

ಗೇಲ್ ಗೆ ೩೦೦ನೇ ಪಂದ್ಯ

೩೦೦ನೇ ಏಕದಿನ ಪಂದ್ಯವನ್ನಾಡುವ ಮೂಲಕ ಈ ಸಾಧನೆ ಮಾಡಿದ ಮೊದಲ ವೆಸ್ಟ್ ಇಂಡೀಸ್ ಆಟಗಾರನೆಂಬ ಹೆಗ್ಗಳಿಕೆಗೆ ಕ್ರಿಸ್ ಗೇಲ್ ಪಾತ್ರರಾಗಿದ್ದಾರೆ.  ಈ ಪಂದ್ಯದಲ್ಲಿ ೧೧ ರನ್ ಗಳಿಸಿದ ಗೇಲ್, ಒಟ್ಟು ಏಕದಿನ ಕ್ರಿಕೆಟ್‌ನಲ್ಲಿ ೧೦,೩೫೩ ರನ್ ಗಳಿಸುವ ಮೂಲಕ ವೆಸ್ಟ್ ಇಂಡೀಸ್ ಪರ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಲಾರಾ ದಾಖಲೆಯನ್ನು ಮುರಿದರು. ಲಾರಾ ಏಕದಿನ ಕ್ರಿಕೆಟ್?ನಲ್ಲಿ ೧೦,೩೪೮ ರನ್ ಗಳಿಸಿದ್ದಾರೆ.

Leave a Comment