ಕೊಹಿನೂರು ವಜ್ರ ಆದೇಶಕ್ಕೆ ಸುಪ್ರೀಂ ಮೌನ

ನವದೆಹಲಿ, ಏ. ೨೧- ಬ್ರಿಟನ್‌ನಲ್ಲಿರುವ ಕೊಹಿನೂರ್ ವಜ್ರವನ್ನು ಭಾರತಕ್ಕೆ ವಾಪಸ್ ತರುವ ಬಗ್ಗೆಯಾಗಲಿ ಅಥವಾ ಅಲ್ಲಿ ಹರಾಜನ್ನು ತಡೆಯುವ ಬಗ್ಗೆಯಾಗಲಿ ಆದೇಶ ನೀಡಲು ಸಾಧ್ಯವಿಲ್ಲ ಎಂದು ಇಂದು ಸುಪ್ರೀಂ ಕೋರ್ಟ್ ಹೇಳಿದೆ.

ಅನ್ಯ ದೇಶದಲ್ಲಿರುವ ಆಸ್ತಿಗಳ ಕುರಿತಂತೆ ಆದೇಶ ನೀಡಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಾಮೂರ್ತಿ ನೇತೃತ್ವದ ಸುಪ್ರೀಂ ನ್ಯಾಯಪೀಠ ಹೇಳಿದೆ. ಹಾಗೆಯೇ ಅಮೆರಿಕಾದಲ್ಲಿ ಬ್ರಿಟನ್‌ನಲ್ಲಿರುವ ಆಸ್ತಿಗಳ ಕುರಿತಂತೆ ಸಲ್ಲಿಕೆಯಾಗುವ ರಿಟ್ ಅರ್ಜಿಗಳ ಪರಿಪಾಠವನ್ನು ಟೀಕಿಸಿರುವ ನ್ಯಾಯಪೀಠ. ಹೀಗೆ ಅರ್ಜಿ ಸಲ್ಲಿಸುವುದರ ಬಗ್ಗೆ ತಮಗೆ ಆಶ್ಚರ್ಯವಾಗುತ್ತಿದೆ ಎಂದೂ ಹೇಳಿದೆ.

ಬ್ರಿಟನ್ ಕೊಹಿನೂರ್ ವಜ್ರವನ್ನು ಹರಾಜು ಮಾಡುವುದನ್ನು ತಡೆಯಬೇಕು ಮತ್ತು ಅದನ್ನು ಭಾರತಕ್ಕೆ ವಾಪಸ್ಸು ತರುವ ಬಗ್ಗೆ ಆದೇಶ ನೀಡಬೇಕು ಎಂದು ಸರ್ಕಾರೇತರ ಸಂಸ್ಥೆಯೊಂದು ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಿತ್ತು.

Leave a Comment