ಕೊಳ್ಳೇಗಾಲದಲ್ಲಿ ಬಂದ್‍ಗೆ ಬೆಂಬಲ

ಕೊಳ್ಳೇಗಾಲ ಸೆ.10. ಕಾಂಗ್ರೆಸ್ ಪಕ್ಷದ ವತಿಯಿಂದ ಇಂದು ಭಾರತ ಬಂದ್‍ಗೆ ನೀಡಿದ್ದ ಕರೆಗೆ ಕೊಳ್ಳೇಗಾಲದಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ.
ಇಂದು ಬೆಳಿಗ್ಗೆಯಿಂದಲೇ ಕೊಳ್ಳೇಗಾಲ ಪಟ್ಟಣದಲ್ಲಿ ಅಂಗಡಿ ಮುಗ್ಗಂಟುಗಳು, ಹೋಟೆಲ್‍ಗಳು ತೆರೆಯದೆ ಬಂದ್‍ಗೆ ಬೆಂಬಲ ವ್ಯಕ್ತಪಡಿಸಿವೆ. ಪಟ್ಟಣದಲ್ಲಿ ಬಸ್ಸುಗಳು ಸಂಚಾರ ಸ್ಥಗಿತಗೊಂಡಿರುವುದರಿಂದ ಸಾರ್ವಜನಿಕರು ಆಟೋಗಳಲ್ಲಿ ತೆರಳುತ್ತಿರುವ ದೃಶ್ಯ ಸರ್ವೇ ಸಾಮಾನ್ಯವಾಗಿತ್ತು. ಪಟ್ಟಣದಲ್ಲಿನ ಸರ್ಕಾರಿ ಕಛೇರಿಗಳಲ್ಲಿ ಸಿಬ್ಬಂದಿ ವರ್ಗದವರ ಹಾಜರಾತಿಯಲ್ಲಿಯೂ ವ್ಯತ್ಯಯ ಕಂಡು ಬಂದಿತು. ಆದರೆ ಔಷಧಿ ಅಂಗಡಿಗಳು ಮಾತ್ರ ತಮ್ಮ ದೈನಂದಿನ ವ್ಯವಹಾರ ನಡೆಸಿದವು.
ಎ.ಆರ್. ಕೃಷ್ಣಮುರ್ತಿಯವರ ನೇತೃತ್ವದಲ್ಲಿ ಕಾಂಗ್ರೆಸ್‍ನ ಕಾರ್ಯಕರ್ತರು ಪಟ್ಟಣಾದ್ಯಂತ ಬೈಕ್‍ರ್ಯಾಲಿ ನಡೆಸಿ ತೆರೆದಿದ್ದ ಅಂಗಡಿ – ಮುಗ್ಗಂಟುಗಳನ್ನು ಮುಚ್ಚಿಸಿದರು.
ಕೊಳ್ಳೇಗಾಲ ಟೌನ್ ಪೊಲೀಸರು ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಿ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.

Leave a Comment