ಕೊಲೆ ಪ್ರಕರಣ: ಸಿಬಿಐ ತನಿಖೆಗೆ ಗುತ್ತೇದಾರ ಆಗ್ರಹ

ಕಲಬುರಗಿ ಸ 6: ಅಳಂದ ತಾಲೂಕು ಬಿಜೆಪಿ ಯುವ ಕಾರ್ಯಕರ್ತ ರಾಹುಲ್ ಬೀಳಗಿ ಕೊಲೆ ಪ್ರಕರಣವನ್ನು  ಸಿಬಿಐ ತನಿಖೆಗೆ ವಹಿಸುವಂತೆ ಅಳಂದ ಕ್ಷೇತ್ರದ ಶಾಸಕ ಸುಭಾಷ ಗುತ್ತೇದಾರ ಮತ್ತು ಬಿಜೆಪಿ ಹಿರಿಯ ಮುಖಂಡ ಅಫಜಲಪುರ ಮಾಜಿಶಾಸಕ ಮಾಲೀಕಯ್ಯ ಗುತ್ತೇದಾರ  ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ರಾಜಕೀಯ ದುರುದ್ದೇಶದಿಂದ ಭೂಸನೂರ ಗ್ರಾಮದ ಈ ದಲಿತ ಯುವಕನ ಕೊಲೆ ನಡೆದಿದೆ.ಕೊಲೆ ಆರೋಪಿಗಳು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿದ್ದು,ಘಟನೆ ನಂತರ ಪರಾರಿಯಾಗಿದ್ದಾರೆ.ತಮ್ಮ ಕುಟುಂಬಕ್ಕೆ ಜೀವ ಭಯವಿದೆ ಎಂದು ರಾಹುಲ್ ತಂದೆ ಪೊಲೀಸ ಠಾಣೆಗೆ ಲಿಖಿತವಾಗಿ ತಿಳಿಸಿದ್ದಾರೆ.ಆದರೆ ಪೊಲೀಸರು ನಿರ್ಲಕ್ಷ ತಾಳಿದ್ದಾರೆ ಎಂದು ದೂರಿದರು.

ಅಳಂದ ಪುರಸಭೆ ಪ್ರವೇಶಿಸಿದ ಕಾಂಗ್ರೆಸ್ ಪಕ್ಷದ ಬಹುತೇಕ ಸದಸ್ಯರು ಅಪರಾಧ ಹಿನ್ನೆಲೆಯುಳ್ಳವರಾಗಿದ್ದಾರೆ.ಫಿರ್ದೋಷ್ ಎಂಬ ಸದಸ್ಯ ಹಿಂದು ಮುಸ್ಲಿಂ ಜನಗಳ ನಡುವೆ ಜಾತಿ ವೈಷಮ್ಯ ಬೆಳೆಸುವದರಲ್ಲಿನಿರತನಾಗಿದ್ದು ಈತನ ವಿರುದ್ಧ ಠಾಣೆಯಲ್ಲಿ 20 ಕ್ಕೂ ಹೆಚ್ಚು ಪ್ರಕರಣಗಳಿವೆ. ಮಾಜಿ ಶಾಸಕ ಬಿಆರ್ ಪಾಟೀಲರ  ಕುತಂತ್ರದಿಂದ ತಾಲೂಕಿನಲ್ಲಿ ಕ್ರಿಮಿನಲ್ ಚಟುವಟಿಕೆಗೆ ಉತ್ತೇಜನ ಸಿಗುತ್ತಿದೆ ಎಂದು ಆರೋಪಿಸಿದ ಅವರು,ವಾರದೊಳಗೆ ಆರೋಪಿಗಳನ್ನು ಬಂಧಿಸದಿದ್ದರೆ ಹೋರಾಟ ತೀವ್ರಗೊಳಿಸಲಾಗುವದು ಎಂದರು

ಅಭಿವೃದ್ಧಿ ಕಾರ್ಯ ನಿಂತಿಲ್ಲ:

ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳು ನಿಂತು ಹೋಗಿವೆ ಎಂಬ ಮಾಜಿ ಶಾಸಕ ಬಿಆರ್ ಪಾಟೀಲ ಆರೋಪಕ್ಕೆ ಪ್ರತ್ಯುತ್ತರಿಸಿದ ಶಾಸಕ ಸುಭಾಷ ಗುತ್ತೇದಾರ, ತಾಲೂಕಿನಲ್ಲಿ ಯಾವ ಅಭಿವೃದ್ಧಿ ಯೋಜನೆ ನಿಂತಿಲ್ಲ .ಬಿಲ್ ಪಾವತಿಯಾಗದಿದ್ದಕ್ಕೆ ಮಿನಿವಿಧಾನಸೌಧ ನಿರ್ಮಾಣಕಾರ್ಯ ನಿಂತಿದೆ. ಕಾಮಗಾರಿಯಲ್ಲಿ  ಪರ್ಸಂಟೇಜ್ ಪಡೆದವರು ಮತ್ತೊಬ್ಬರ ಮೇಲೆ ಸುಳ್ಳು ಆರೋಪ ಹೊರಿಸಬಾರದು ಎಂದರು…

Leave a Comment