ಕೊಲೆಗೈದು ರುಂಡದೊಂದಿಗೆ ಪರಾರಿಯಾದ ಹಂತಕರು

ಕಲಬುರಗಿ,ಸೆ.12- ಯುವಕನೊಬ್ಬನನ್ನು ಬರ್ಬರವಾಗಿ ಕೊಲೆಗೈದು ಆತನ ರುಂಡವನ್ನು ಚಂಡಾಡಿ ಮುಂಡವನ್ನು ಬಿಟ್ಟು ರುಂಡದೊಂದಿಗೆ ಪರಾರಿಯಾಗಿರುವ ಘಟನೆ ತಾಲೂಕಿನ ಆಲಗೂಡ ಬಳಿ ನಡೆದಿದೆ.

ಬರ್ಬರವಾಗಿ ಕೊಲೆಯಾದ ಯುವಕ ಭವಾನಿ ನಗರದ ಸಿದ್ದೋಜಿ ಭೀಮರಾವ ಭೋಸಲೆ (30) ಆಲಗೂಡ ಎಂದು ಗುರುತಿಸಲಾಗಿದೆ. ನಗರದ ಕೆಎಂಎಫ್ ಡೈರಿಯಲ್ಲಿ ಚಾಲಕನಾಗಿ ಸೇವೆಸಲ್ಲಿಸುತ್ತಿರುವ ಸಿದ್ದೋಜಿ, ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಕೊಲೆಗೆ ಹಣಕಾಸಿನ ವ್ಯವಹಾರವೇ ಕಾರಣ ಎನ್ನಲಾಗುತ್ತಿದೆ.

ಸಿದ್ದಾಜಿಯನ್ನು ಹಂತಕರು ಆಲಗೂಡ ಹತ್ತಿರದ ಹೊಲಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಇತನೊಂದಿಗೆ ಪಾರ್ಟಿಮಾಡಿ ಆತನ ಕತ್ತು ಕೊಯ್ದು ರುಂಡವನ್ನು ಹೊತ್ತುಕೊಂಡು ಹೋಗಿದ್ದಾರೆ.

ಆಲಗೂಡ ಗ್ರಾಮದವನೇ ಆದ ಸಿದ್ದೊಜಿಯ ಗೆಳೆಯ ನಾಗೇಶ ಕಲ್ಯಾಣಿ ಪೂಜಾರಿ ಎಂಬಾತ ತಾವು ಕೆಲಸ ಮಾಡುತ್ತಿದ್ದ ಮಾಲೀಕನ ಬಳಿಯಿಂದ 80 ಸಾವಿರ ರೂ.ಗಳನ್ನು ತೆಗೆದುಕೊಂಡು ಹೋಗಿದ್ದ ಈ ವಿಷಯ ತಿಳಿದ ಮಾಲೀಕ ಜಗನ್ನಾಥ ಹೊನ್ನಳ್ಳಿ ಎಂಬುವರು, ನಾಗೇಶ ಪೂಜಾರಿಯ ಮನೆ ಎಲ್ಲಿದೆ ಎಂದು ಸಿದ್ದೊಜಿಯಿಂದ ತಿಳಿದುಕೊಂಡ ವಿಷಯಕ್ಕೆ ಸಬಂಧಿಸಿದಂತೆ ಇವರಿಬ್ಬರ ನಡುವೆ ತಕರಾರು ಆಗಿತ್ತು ಎನ್ನಲಾಗಿದೆ.ಈ ಹಿನ್ನೆಲೆಯಲ್ಲಿ ಕೊಲೆಯಾಗಿದೆ ಎನ್ನಲಾಗುತ್ತಿದೆ.

ಕೊಲೆಯಾದ ಸಿದ್ದೋಜಿಯ ತಂದೆ ಭೀಮರಾವ ಭೋಸಲೆ ಅವರು, ತಮ್ಮ ಮಗ ಕಾಣೆಯಾದ ದೂರನ್ನು ಚೌಕ ಪೊಲೀಸ ಠಾಣೆಯಲ್ಲಿ ದಾಖಲಿಸಿದ್ದರು, ತದನಂತರ ಆಲಗೂಡ ಬಳಿ ಸಿದ್ದೋಜಿಯ ರುಂಡವಿಲ್ಲದ ಮುಂಡ ಪತ್ತೆಯಾಗಿದೆ. ಹಂತಕರ ಬಂಧನಕ್ಕಾಗಿ ಪೊಲೀಸರು ಜಾಲ ಬಿಸಿದ್ದಾರೆ..

Leave a Comment