ಕೊಲೆಗಾರನನ್ನು‌ ಹಿಡಿಯಲು‌ ನೆರವಾದ ರಜನಿ ಸ್ಟಿಕ್ಕರ್

ನೆಲ್ಲೂರು, ಜೂ 5- ಕೊಲೆ ಮಾಡಿ ಪರಾರಿಯಾಗಿದ್ದ ಕೊಲೆಗಾರನನ್ನು ಸೆರೆ ಹಿಡಿಯುವುದಕ್ಕೆ ಆಟೋದ ಹಿಂದೆ ಅಂಟಿಸಿದ್ದ ರಜನಿಕಾಂತ್ ಸ್ಟಿಕ್ಕರ್ ಸಹಾಯವಾಗಿರುವ ಘಟನೆ ನಡೆದಿದೆ.

ನೆಲ್ಲೂರಿನಲ್ಲಿ ಈ ಘಟನೆ ನಡೆದಿದ್ದು, ನೆಲ್ಲೂರಿನ 45 ವರ್ಷದ ಮಹಿಳೆ ನಿರ್ಮಲಾ‌ ಬಾಯಿ ಅವರ ಕೊಲೆ ಪ್ರಕರಣವನ್ನು ಬೇಧಿಸಲು ಆಟೋ ಹಿಂದೆ ಅಂಟಿಸಿದ್ದ ಸ್ಟಿಕ್ಕರ್ ಸಹಾಯಕ್ಕೆ‌ ಬಂದಿದೆ‌. ಕೊಲೆಯಾದ ಮಹಿಳೆಯ ಪ್ರಕರಣಕ್ಕೆ‌ ಸಂಬಂಧಿಸಿದಂತೆ ಆಟೋ ಜಾಡು ಹಿಡಿದು 22 ವರ್ಷದ ರಾಮಸ್ವಾಮಿ ಎನ್ನುವ ವ್ಯಕ್ತಿಯನ್ನು‌ ಬಂಧಿಸಿದ್ದಾರೆ.

ಮಹಿಳೆ ಖಾಸಗಿ ಶಾಲೆಯಲ್ಲಿ ಕ್ಲರ್ಕ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಮೂರು ವರ್ಷದ ಹಿಂದೆ ‌ಪತಿ ಮೃತಪಟ್ಟಿದ್ದರು. ಇನ್ನು ಇಬ್ಬರು ಮಕ್ಕಳು‌ ಬೇರೆ ಊರಿನಲ್ಲಿದ್ದರಿಂದ ಏಕಾಂಗಿಯಾಗಿದ್ದರು. ಈ ವೇಳೆ ರಾಮಸ್ವಾಮಿ ಮನೆಗೆ ಬಂದು 10 ಬಾರಿ‌ ಚಾಕುವಿನಿಂದ ಇರಿದು, ಬಳಿಕ ಗ್ಯಾಸ್ ವಾಲ್ವ್ ಆನ್ ಮಾಡಿ, ಬೆಂಕಿ ಹಚ್ಚಿದ್ದ.

ಪ್ರಕರಣದ ತನಿಖೆ ವೇಳೆ‌ ಕೊಲೆಯಾದ ಸಮಯದಲ್ಲಿ ರಜನಿಕಾಂತ್ ಫೋಟೋ‌ ಇರುವ ಆಟೋ ಮನೆ ಮುಂದೆ ಇರುವುದು ಸಿಸಿ‌ ಟಿವಿಯಲ್ಲಿ ಪತ್ತೆಯಾಗಿದ್ದು,‌ ಇದನ್ನು ಬಳಸಿಕೊಂಡು‌ ಆರೋಪಿಯನ್ನು‌ ಪತ್ತೆ ಹಚ್ಚಿದ್ದಾರೆ. ಇದೀಗ ಆರೋಪಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಚಿನ್ನ ಹಾಗೂ 20 ಸಾವಿರ ಹಣ‌ ಕದ್ದಿರುವುದಾಗಿ ಹೇಳಿದ್ದಾನೆ.

Leave a Comment