ಕೊರೋನ ಭೀತಿ : ಪಿವಿಆರ್ ಚಿತ್ರಮಂದಿರಗಳು ಸ್ಥಗಿತ

ನವದೆಹಲಿ ,ಮಾ ೧೩- ಕೊರೋನ ಸೋಂಕು ಭೀತಿಯಿಂದ ದೇಶದ ಹಲವೆಡೆ ಪಿವಿಆರ್ ಚಿತ್ರಮಂದಿರಗಳು ಸ್ಥಗಿತಸಲಾಗುತ್ತಿದೆ.

ದೇಶವನ್ನು ಬಹುವಾಗಿ ಕಾಡುತ್ತಿರುವ ಕೊರೋರಾ ಪರಿಣಾಮದಿಂದ ರಾಜ್ಯ ಸರ್ಕಾರಗಳ ಮನವಿಯ ಮೇರೆಗೆ ದೆಹಲಿ ಜಮ್ಮು ಮತ್ತು ಕಾಶ್ಮೀರ, ಕೇರಳದಲ್ಲಿ ಪಿವಿಆರ್ ಚಿತ್ರ ಮಂದಿರಗಳನ್ನು ಮಾರ್ಚ್ ೩೧ರವರೆಗೆ ಮುಚ್ಚಲಾಗುತ್ತಿದೆ.

ಈ ಬಗ್ಗೆ ಪಿವಿಆರ್ ಮುಖ್ಯಸ್ಥರು ಅಧಿಕೃತವಾಗಿ ಟ್ವೀಟ್ ಮೂಲಕ ತಿಳಿಸಿದ್ದು, ಕೇರಳ, ದೆಹಲಿ, ಜಮ್ಮ ಮತ್ತು ಕಾಶ್ಮೀರ ಸರ್ಕಾರದ ಸಲಹೆಯ ಮೇರೆಗೆ ಪಿವಿಆರ್ ಸಿನಿಮಾ ಮಂದಿರಗಳನ್ನು ಇದೆ ೩೧ರವರೆಗೆ ಸ್ಥಗಿತಗೊಳಿಸುವುದಾಗಿ ಹೇಳಿದ್ದಾರೆ.

ಕೋವಿಡ್ ೧೯ ಭೀತಿ ಇರುವುದಿಂದ ಸರ್ಕಾರದ ಮನವಿಗೆ ನಾವು ಸ್ಪಂದಿಸುತ್ತೇವೆ ಎಂದು ಹೇಳಿದ್ದಾರೆ. ಪಿವಿಆರ್ ಸಿನಿಮಾಕ್ಕೆ ಬರುವ ಪ್ರೇಕ್ಷಕರ ಆರೋಗ್ಯ ಕಾಳಜಿ ಮತ್ತು ಸರ್ಕಾರದ ಕಾಳಜಿ ನಿರ್ಧಾರವನ್ನು ನಾವು ಗೌರವಿಸುವುದಾಗಿ ಪಿವಿಆರ್ ಚಿತ್ರಮಂದಿರಗಳ ಮಾಲೀಕರು ಹೇಳಿದ್ದಾರೆ. ಅಲ್ಲದೆ ಮುಂದಿನ ಏಪ್ರಿನ್ ೧ರಿಂದ ಸಿನಿಮಾಗಳನ್ನು ಪ್ರದರ್ಶನ ಮಾಡುವುದಾಗಿಯೂ ಸ್ಪಷ್ಟಪಡಿಸಿದ್ದಾರೆ.

ಇನ್ನು ಕೊರೋನಾ ಭೀತಿ ಹಿನ್ನಲೆಯಲ್ಲಿ ಜನರು ಈಗಾಗಲೇ ಚಿತ್ರಮಂದಿರಗಳತ್ತ ಸುಳಿಯುತ್ತಿಲ್ಲ, ಮಾಲ್, ಥಿಯೇಟರ್‌ಗಳು ಖಾಲಿ ಖಾಲಿಯಾಗಿದ್ದು, ಅನೇಕ ಚಿತ್ರಗಳ ಪ್ರದರ್ಶನಕ್ಕೆ ಭಾರಿ ಪೆಟ್ಟು ಬಿದ್ದಿದೆ ಎನ್ನಬಹುದು.

Leave a Comment