ಕೊರೋನಾ ವೈರಸ್ ತಡೆಗೆ ರಿಲಾಯನ್ಸ್‌ನಿಂದ ವಿಶೇಷ ಸೌಲಭ್ಯಗಳ ಲಭ್ಯ

ಮುಂಬೈ, ಮಾ ೨೪- ಕೊರೋನಾ ವೈರಸ್ ವಿರುದ್ಧ ಸಮರ ಸಾರುವ ಮೂಲಕ ದೇಶದೆಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ಇದೀಗ ರಿಲಾಯನ್ಸ್ ಕೂಡ ಹೊಸ ಕೊರೋನಾ ವೈರಸ್ ಪರೀಕ್ಷಾ ಕೀಟ್‌ನ್ನು ಜನರಿಗಾಗಿ ಪರಿಚಯಸಲು ಮುಂದಾಗಿದೆ.

ದೇಶದೆಲ್ಲೆಡೆ ಸೊಂಕು ಉಲ್ಬಣಗೊಳ್ಳುತ್ತಿರುವ ಹಿನ್ನಲೆಯಲ್ಲಿ ರಿಲಾಯನ್ಸ್ ಸಂಸ್ಥೆ ನಾನಾ ರೀತಿಯಲ್ಲಿ ಜನರಿಗೆ ನೆರವಾಗಲು ಮುಂದೆ ಬಂದಿದೆ. ಬಹಳಷ್ಟು ಜನರಿಗೆ ಕೊರೋನಾ ವೈರಸ್ ಸೋಂಕು ತಗುಲಿದೆಯಾ ಇಲ್ಲವಾ ಎಂಬ ಗೊಂದಲ ಸಹಜವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಆರಂಭಿಕ ಹಂತದ ಈ ಗೊಂದಲ ನಿವಾರಿಸುವ ಪ್ರಯತ್ನವಾಗಿ ರಿಲಾಯನ್ಸ್ ಜಿಯೋ ಹೊಸ ಕೊರೋನಾ ವೈರಸ್ ಸಾಧನವನ್ನು ಜನರ ಮುಂದಿಟ್ಟಿದೆ. ಮೈಜಿಯೋ ಆಪ್‌ಲ್ಲಿ ಕೊರೋನಾವೈರಸ್ ಡಯೋಗ್ನಸಿಸ್ ಟೂಲ್ ಸೇವೆಯನ್ನು ಒದಗಿಸಲಾಗಿದೆ. ಮೊಬೈಲ್‌ಲ್ಲಷ್ಟೇ ಅಲ್ಲ ಜಿಯೋ ಡಾಟ್ ಕಾಮ್ ವೆಬ್ ಸೈಟ್‌ನಲ್ಲೂ ಈ ಸಾಧನ ಇದೆ.

ಇದರಲ್ಲಿ ಕೆಲ ಪ್ರಶ್ನೋತ್ತರಗಳ ಮೂಲಕ ಜನರಲ್ಲಿ ಕೊರೋನಾ ವೈರಸ್ ಸೋಂಕಿನ ಲಕ್ಷಣ ಎಷ್ಟಿದೆ ಎಂಬುದನ್ನು ಈ ಸಾಧನದಿಂದ ಅಂದಾಜು ಮಾಡಬಹುದು. ಕಡಿಮೆ ಅಪಾಯ ಅಥವಾ ಹೆಚ್ಚು ಅಪಾಯದ ಹಂತದಲ್ಲಿದ್ದಾರಾ ಎಂಬುದನ್ನು ಗ್ರಹಿಸಿ ಅದರ ಆಧಾರದ ಮೇಲೆ ಆಪ್‌ನಲ್ಲಿ ಗ್ರಾಹಕರಿಗೆ ಮುಂದಿನ ಹೆಜ್ಜೆಯ ಸಲಹೆಗಳನ್ನು ಒದಗಿಸಲಾಗುತ್ತದೆ. ಮನೆಯಲ್ಲೇ ಐಸೋಲೇಶನ್‌ನಲ್ಲಿರಬೇಕೋ ಅಥವಾ ಆಸ್ಪತ್ರೆಗೆ ದಾಖಲಾಗಬೇಕೋ ಎಂಬುದನ್ನು ಸೋಂಕಿತರಿಗೆ ಮತ್ತು ಸೋಂಕು ಶಂಕಿತರಿಗೆ ತಿಳಿಸಲಾಗುತ್ತದೆ. ಸದ್ಯಕ್ಕೆ ಈ ಸಾಧನವು ಇಂಗ್ಲೀಷ್ ಭಾಷೆಯಲ್ಲೇ ಇದೆ. ಮುಂದಿನ ದಿನಗಳಲ್ಲಿ ಕನ್ನಡ ಸೇರಿದಂತೆ ಭಾರತದ ಹಲವು ಭಾಷೆಗಳಲ್ಲೂ ಇದನ್ನು ಅಳವಡಿಸಲು ಜಿಯೋ ನಿರ್ಧರಿಸಿದೆ. ಹಾಗೆಯೇ, ಈ ಸಾಧನವು ಕೇವಲ ಜಿಯೋ ಗ್ರಾಹಕರಿಗಷ್ಟೇ ಅಲ್ಲ, ಎಲ್ಲಾ ಟೆಲಿಕಾಂ ಗ್ರಾಹಕರಿಗೂ ಲಭ್ಯವಿರುತ್ತದೆ ಎಂದು ರಿಲಾಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಕಿರಣ್ ಥಾಮಸ್ ತಿಳಿಸಿದ್ದಾರೆ.

ಕೊರೋನಾ ಹೆಲ್ಪ್‌ಡೆಸ್ಕ್
ಕೋವಿಡ್ -19 ಕುರಿತ ಸಾರ್ವಜನಿಕರ ಎಲ್ಲಾ ಪ್ರಶ್ನೆಗಳನ್ನು ಪರಿಹರಿಸಲು ಕೇಂದ್ರ ಸರ್ಕಾರವು ’ಮೈಗೋವ್ ಕೊರೋನಾ ಹೆಲ್ಪ್‌ಡೆಸ್ಕ್’ ಎಂಬ ವಾಟ್ಸಾಪ್ ಚಾಟ್‌ಬಾಟ್ ಅನ್ನು ಆರಂಭಿಸಿದೆ. ಈ ಚಾಟ್ ಬಾಟ್ ಅನ್ನು ಜಿಯೋ ಹ್ಯಾಪ್ಟಿಕ್ ಟೆಕ್ನಾಲಜೀಸ್ ಅಭಿವೃದ್ಧಿಪಡಿಸಿದೆ ಮತ್ತು ಕಾರ್ಯಗತಗೊಳಿಸಿದೆ. +91 9013151515 ಸಂಖ್ಯೆಗೆ ವಾಟ್ಸಾಪ್ ಸಂದೇಶವನ್ನು ಕಳುಹಿಸುವ ಮೂಲಕ ಚಾಟ್‌ಬಾಟ್ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.

ಕೊರೊನಾ ಸೋಂಕಿತರಿಗಾಗಿ ಕೇವಲ ಎರಡು ವಾರಗಳ ಅಲ್ಪಾವಧಿಯಲ್ಲಿ, ಸರ್ ಎಚ್‌ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆ ಬಿಎಂಸಿ ಸಹಯೋಗದೊಂದಿಗೆ ೧೦೦ ಹಾಸಿಗೆಗಳ ಮೀಸಲಾದ ಕೇಂದ್ರವನ್ನು ಸೆವೆನ್ ಹಿಲ್ಸ್ ಹಾಸ್ಪೆಟಲ್‌ನ್ನು ಸ್ಥಾಪಿಸಿದೆ. ಇಲ್ಲಿ ರಿಲಯನ್ಸ್ ಫೌಂಡೇಶನ್‌ನಿಂದ ಸಂಪೂರ್ಣವಾಗಿ ಧನಸಹಾಯ ಪಡೆದಿದೆ.

Leave a Comment