ಕೊರೋನಾ ಬಾರದಂತೆ ತಡೆಯಲು ಕಷಾಯ ಸೇವಿಸಿದ್ದ ಮಗ ಮೃತ್ಯು, ತಂದೆ ಗಂಭೀರ!

ಶಿರಸಿ, ಮೇ ೨೫- ಕೊರೊನಾ ಬಾರದಂತೆ ತಡೆಯಲು ಬೇರೊಂದನ್ನು ಅಗೆದು ಅದರ ಕಷಾಯ ಮಾಡಿ ಸೇವಿಸಿದ್ದ ಮಗ ಸಾವನ್ನಪ್ಪಿದರೆ ತಂದೆಯ ಸ್ಥಿತಿ ಗಂಭೀರವಾದ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿಯ ರಾಮನಬೈಲ್‌ನಲ್ಲಿ ನಡೆದಿದೆ.
ಮೃತರನ್ನು ಪ್ರಾನ್ಸಿಸ್ ರೇಗೊ(೪೨) ಎಂದು ಗುರುತಿಸಲಾಗಿದ್ದು ತಂದೆ ೭೦ ವರ್ಷದ ನೆಕ್ಲಾಂ ಅಂಥೋನಿ ತೀವ್ರವಾಗಿ ಅಸ್ವಸ್ಥರಾಗಿದ್ದಾರೆ.
ಕೊರೊನಾ ತಡೆಗಟ್ಟಲು ಗಿಡಮೂಲಿಕೆ ಕಷಾಯ ಮಾಡಿ ಕುಡಿಯಬೇಕು ಎಂದು ಯಾರೋ ಹೇಳಿದ ಕಾರಣಕ್ಕೆ ಇಬ್ಬರು ಗುಡ್ಡದಿಂದ ಬೇರು ತಂದು ಕಷಾಯ ಮಾಡಿ ಕುಡಿದಿದ್ದಾರೆ ಎನ್ನಲಾಗಿದೆ. ಕಷಾಯ ಮಾಡಿ ಕುಡಿದ ಬೇರನ್ನು ಸಂಗ್ರಹ ಮಾಡಲಾಗಿದ್ದು ಅದು ಯಾವ ಬೇರು ಎಂದು ಪತ್ತೆಹಚ್ಚಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

Share

Leave a Comment