ಕೊರೋನಾ ನಿಯಂತ್ರಣಕ್ಕೆ ಶೀಘ್ರ ಲಸಿಕೆ : ಹರ್ಷವರ್ಧನ್

ನವದೆಹಲಿ , ಮೇ 25 – ದೇಶಾದ್ಯಂತ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು ಇದೀಗ ಕೊರೋನಾಗೆ ನಾಲ್ಕು ಲಸಿಕೆ ದೇಶದಲ್ಲಿ ಶೀಘ್ರವೇ ಕ್ಲಿನಿಕಲ್ ಟ್ರಯಲ್ ಹಂತಕ್ಕೆ ತಲುಪಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ.

ಕೊರೋನಾ ತಡೆಗಾಗಿ ಸಿದ್ಧಪಡಿಸಲಾಗಿರುವ 14 ಲಸಿಕೆಗಳ ಪೈಕಿ 4 ಲಸಿಕೆಗಳು ಶೀಘ್ರವೇ ಕ್ಲಿನಿಕಲ್ ಟ್ರಯಲ್ ಹಂತಕ್ಕೆ ಹೋಗಲಿವೆ ಎಂದು ಸಚಿವರು ಹೇಳಿದ್ದಾರೆ.

ವಿಶ್ವಾದ್ಯಂತ ಕೋವಿಡ್-19 ತಡೆಗೆ 100 ಕ್ಕೂ ಹೆಚ್ಚಿನ ಲಸಿಕೆಗಳು ವಿವಿಧ ಹಂತಗಳ ಪ್ರಯೋಗಗಳಲ್ಲಿವೆ. ವಿಶ್ವ ಆರೋಗ್ಯ ಸಂಸ್ಥೆ ಈ ಪ್ರಯತ್ನಗಳಿಗೆ ಬೆಂಬಲ ನೀಡಿ ಸಹಕರಿಸುತ್ತಿದೆ ಎಂದು ಸಚಿವರೂ ಹೇಳಿದ್ದಾರೆ

Share

Leave a Comment