ಕೊರೋನಾ: ಚಿತ್ರರಂಗದ ಸಂಕಷ್ಟ ಪೀಡಿತರಿಗೆ ಸರ್ಕಾರದಿಂದ ಸದ್ಯದಲ್ಲೇ ನೆರವು

ಬೆಂಗಳೂರು, ಏ 16 -ಮಾರಕ ಕೊರೋನಾ ವೈರಾಣು ಹಾವಳಿ ಹಾಗೂ ಲಾಕ್ ಡೌನ್ ಪರಿಣಾಮ ಸಂಕಷ್ಟದಲ್ಲಿರುವ ಕನ್ನಡ ಚಲನಚಿತ್ರ ರಂಗದ ಕಾರ್ಮಿಕರು, ಕಲಾವಿದರು, ತಂತ್ರಜ್ಞರಿಗೆ ಸರ್ಕಾರ ಸದ್ಯದಲ್ಲೇ ನೆರವು ನೀಡಲಿದೆ.

ನಟಿ ಹಾಗೂ ಬಿಜೆಪಿ ನಾಯಕಿ ತಾರಾ ಅನುರಾಧ ಈ ವಿಷಯ ತಿಳಿಸಿದ್ದು, ಕನ್ನಡ ಚಲನಚಿತ್ರ ಅಕಾಡೆಮಿಯಿಂದ ನಮ್ಮ ಚಿತ್ರರಂಗದಲ್ಲಿ ಯಾರ್ಯಾರಿಗೆ ಸಹಾಯ ನೀಡಬೇಕು ಎಂಬ ಫಲಾನುಭವಿಗಳ ಪಟ್ಟಿ ಸಿದ್ಧವಾಗುತ್ತಿದ್ದು, ಶೀಘ್ರದಲ್ಲೇ ನೆರವು ತಲುಪಲಿದೆ ಎಂದಿದ್ದಾರೆ.

ಲಾಕ್ ಡೌನ್ ಸಂದರ್ಭದಲ್ಲಿ ಚಿತ್ರರಂಗ ಎದುರಿಸುತ್ತಿರು ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆಯುವ ಸಲುವಾಗಿ ಇತ್ತೀಚೆಗಷ್ಟೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ವರದಿ ನೀಡಲಾಗಿತ್ತು.  ಇದಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿಯವರು ರಿಲಯನ್ಸ್ ಸಂಸ್ಥೆಯಿ ಸಹಕಾರದೊಡನೆ ಚಿತ್ರರಂಗಕ್ಕೆ ನರವಿನ ಹಸ್ತ ಚಾಚಲು ಸಮ್ಮತಿಸಿದ್ದಾರೆ ಎಂದು ತಾರಾ ಅನುರಾದ ಹೇಳಿಕೆಯಲ್ಲಿ ವಿವರಿಸಿದ್ದಾರೆ.

ಕೋವಿಡ್ 19 ದಾಳಿ ಹಾಗೂ ಇದನ್ನು ತಡೆಯಲು ಜಾರಿಯಲ್ಲಿರುವ ಲಾಕ್ ಡೌನ್ ನಿಂದಾಗಿ ಇತರ ಕ್ಷೇತ್ರಗಳಂತೆ    ಕನ್ನಡ ಚಲನಚಿತ್ರರಂಗವೂ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವುದನ್ನು ಸರಕಾರದ ಗಮನಕ್ಕೆ ತರಲು ಇತ್ತೀಚೆಗೆ ಮುಖ್ಯಮಂತ್ರಿ  ಬಿ.ಎಸ್.ಯಡಿಯೂರಪ್ಪನವರಿಗೆ ಒಂದು ವರದಿಯನ್ನು ನೀಡಿದ್ದು., ಆ ವರದಿಯಲ್ಲಿ ವಾಸ್ತವ ಸ್ಥಿತಿ ಗತಿಗಳ ವಿವರಗಳನ್ನು ನೀಡಿದ್ದೇನು. ಮಾನ್ಯ ಮುಖ್ಯಮಂತ್ರಿಗಳು ನಮ್ಮ ಚಿತ್ರರಂಗದ ಮನವಿಯನ್ನು ಸ್ವೀಕಾರ ಮಾಡಿ  ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ರಿಲೆಯನ್ಸ್ ಸಂಸ್ಥೆಯಿಂದ ಸಹಕಾರ ಪಡೆದು ನಮ್ಮ ಚಿತ್ರರಂಗಕ್ಕೆ ದೊಡ್ಡ ಸಹಾಯ ಹಸ್ತ ಚಾಚಿರುವುದಕ್ಕೆ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಇದಕ್ಕೆ ಸಹಕರಿಸಿದ  ವಿಜಯೇಂದ್ರ ಯಡಿಯೂರಪ್ಪರವರಿಗೆ,  ರುದ್ರೇಶ್ ಅವರಿಗೆ ಕೂಡ ಈ ಮೂಲಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

 

Leave a Comment