ಕೊರೋನಾ ಎಫೆಕ್ಟ್ : ನಾಳೆ ಸ್ಯಾಂಡಲ್ ವುಡ್ ಸಿಂಡ್ರೆಲಾ ಹುಟ್ಟು ಹಬ್ಬ ಆಚರಿಸಿಕೊಳ್ಳಲ್ವಂತೆ!

ಬೆಂಗಳೂರು, ಮಾ 6 -ಮಾರಣಾಂತಿಕ ಕೊರೋನಾ ವೈರಸ್ ಜಗತ್ತಿನ ಹಲವು ದೇಶಗಳಲ್ಲಿ ಭೀತಿ ಹುಟ್ಟಿಸಿದೆ ಸೋಂಕು ಹರಡದಂತೆ ತಡೆಗಟ್ಟೋದಿಕ್ಕೆ ಸರ್ಕಾರಗಳು ಶ್ರಮಿಸುತ್ತಿವೆ ಇದು ಸೆಲೆಬ್ರಿಟಿಗಳ ಸೆಲೆಬ್ರೇಷನ್ ಮೇಲೂ ಪರಿಣಾಮ ಬೀರುತ್ತಿದೆ

ಹ್ಯಾಗೆ ಅಂತೀರಾ? ನಾಳೆ ರಾಕಿಂಗ್ ಸ್ಟಾರ್ ಯಶ್ ಮನದನ್ನೆ, ಸ್ಯಾಂಡಲ್ ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಹುಟ್ದಬ್ಬ ಆದ್ರೆ ಹುಟ್ದಬ್ಬ ಆಚರಿಸಲ್ಲ ಅಂತ ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಹೇಳಿಕೆಯಲ್ಲಿ ಯಶ್ ತಿಳಿಸಿದ್ದಾರೆ

“ಕೊರೋನಾ ವೈರಸ್ ಸೋಂಕು ಹರಡುವ ಹಿನ್ನೆಲೆಯಲ್ಲಿ ಹೆಚ್ಚು ಜನರು ಒಂದೆಡೆ ಸೇರಕೂಡದು ಅಂತ ಸರ್ಕಾರ ಸಲಹೆ ನೀಡಿದೆ ಅದೂ ಅಲ್ದೆ ಎರಡು ಪುಟ್ಟ ಮಕ್ಕಳನ್ನು ನೋಡಿಕೊಳ್ಳಬೇಕಾದ ಜವಾಬ್ದಾರಿ ಆಕೆಗಿದೆ. ಹೀಗಾಗಿ ಈ ವರ್ಷ ಅಬಿಮಾನಿಗಳ ಜತೆ ಜನ್ಮದಿನ ಆಚರಿಸೋದಿಲ್ಲ” ಅಂತ ಹೇಳಿದ್ದಾರೆ.

ಅಭಿಮಾನಿಗಳ್ಯಾರೂ ಶನಿವಾರ ನಮ್ಮ ಮನೆಯ ಹತ್ತಿರ ಬರೋದು ಬೇಡ ಯಾಕೇಂದ್ರೆ ನಾಳೆ ರಾಧಿಕಾ ಪಂಡಿತ್ ಸಿಂಪಲ್ ಆಗಿ ಆಚರಿಸಿಕೊಳ್ತಾರೆ ಅಂತ ಯಶ್ ಸ್ಪಷ್ಟಪಡಿಸಿದ್ದಾರೆ.

Leave a Comment