ಕೊರೋನಾ ಎಫೆಕ್ಟ್‌- ಚಿತ್ರಮಂದಿರ ಖಾಲಿ ಖಾಲಿ

ಬೆಂಗಳೂರು, ಮಾ ೧೦- ಕೊರೋನಾ ಭೀತಿ ಎಫೆಕ್ಸ್‌ ಸ್ಯಾಂಡಲ್‌ವುಡ್‌ಗೂ ಕಾಲಿಟ್ಟಿದ್ದು, ಕೊರೋನಾ ಭಯದಿಂದ ಜನರು ಚಿತ್ರಮಂದಿರಕ್ಕೆ ಬರಲು ಎದುರುತ್ತಿದ್ದಾರೆ.

ಈ ನಡುವೆ ಮಾಲ್‌ ಹಾಗೂ ಅನೇಕ ಚಿತ್ರಮಂದಿರದಲ್ಲಿ ಹಲವು ಚಿತ್ರಗಳು ಬಿಡುಗಡೆಯಾಗಿದ್ದು,  ಪ್ರೇಕ್ಷಕರಿಲ್ಲದೇ ಚಿತ್ರಮಂದಿರ ಖಾಲಿ ಖಾಲಿಯಾಗಿವೆ.

ಕೊರೋನಾ ಭೀತಿಯಿಂದ ಸಿನಿಮಾ ಮಂದಿರಗಳಿಗೆ ಜನತೆ ಬರಲು ಹಿಂದೇಟು ಹಾಕುತ್ತಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿರುವ ಸಿನಿಮಾ ಥೇಯಟರ್‌ಗಳಿಗೆ ಸಿನಿಮಾ ನೋಡೋಕ್ಕೆ ಬರುವ ಮಂದಿಯಲ್ಲಿ ಶೇಕಡ 10-20 ಮಂದಿ ಕಡಿಮೆ ಯಾಗಿದೆ ಎನ್ನಲಾಗಿದೆ.

ಇನ್ನೂ ಸಿನಿಮಾ ಮಂದಿರಕ್ಕೆ ಬರುತ್ತಿರುವ ಕೆಲವು ಮಂದಿಯಲ್ಲಿ ಮುಖಕ್ಕೆ ಮಾಸ್ಕ್‌ ಹಾಕಿಕೊಂಡಿ ಕೊಂಡು ಸಿನಿಮಾವನ್ನು ವೀಕ್ಷಣೆ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಇನ್ನು ಕೋಟ್ಯಾಂತರ ರೂ ಬಂಡವಾಳ ಹಾಕಿ ಸಿನಿಮಾ ಬಿಡುಗಡೆ ಮಾಡಿರುವ ನಿರ್ಮಾಪಕರು ಇದರಿಂದ ಭಯಗೊಂಡಿದ್ದು, ಮುಂದೇನು ಅಂಥ ಯೋಚನೆ ಮಾಡುತ್ತಿದ್ದಾರೆ.  ಒಟ್ಟಿನಲ್ಲಿ ಸ್ಯಾಂಡಲ್‌ವುಡ್‌ಗೂ ‘ಕೊರೋನಾ ಎಫೆಕ್ಟ್‌ ತಟ್ಟಿದೆ.

Leave a Comment