ಕೊರೊನೊ ವೈರಸ್ ನಿಯಂತ್ರಣ ಹಿನ್ನೆಲೆ ಪ್ರವಾಸಿಗರ ನಿಷಿದ್ಧ ಹಂಪಿ ಬಣ ಬಣ

ಎನ್.ವೀರಭದ್ರಗೌಡ
ಬಳ್ಳಾರಿ ಮಾ 16: ಯಾವಾಗಲೂ ಪ್ರವಾಸಿಗರಿಂದ ಕೂಡಿರುವ ಹಂಪಿ ಸ್ಮಾರಕಗಳನ್ನು ನೋಡಿರಬಹುದು. ಆದರೆ ಪ್ರವಾಸಿಗಳೇ ಇಲ್ಲದೆ ಬಣಗುಡುತ್ತಿರುವ ಹಂಪಿ ಹೇಗಿದೆಂಬುದನ್ನು ಈಗ ನೋಡಬಹುದು. ಕೇವಲ ಪ್ರಾಚ್ಯವಸ್ತು ಇಲಾಖೆ ನೌಕರರು ಮತ್ತು ಭದ್ರತಾ ಸಿಬ್ಬಂದಿ ಬಿಟ್ಟರೆ ಎಲ್ಲಡೆಯೂ ಮೌನ. ಆದರೆ ಇದಕ್ಕೆ ಜೀವಂತ ಸ್ಮಾರಕಗಳಾದ ವಿರೂಪಾಕ್ಷ ದೇವಸ್ಥಾನ, ಉದ್ದಾನ ವೀರಭದ್ರ ದೇವಸ್ಥಾನಗಳು ಹೊರತಾಗಿವೆ.

ಕೊರೊನೊ ವೈರಸ್ ನಿಯಂತ್ರಣ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ವಿಶ್ವ ಪರಂಪರೆಯ ತಾಣ ಹಂಪಿಗೆ ಪ್ರವಾಸಿಗರು ಬರುವುದನ್ನು ನಿನ್ನೆಯಿಂದ ಒಂದು ವಾರಗಳ ಕಾಲ ನಿರ್ಭಂದ ವಿಧಿಸಿದೆ. ಇಲ್ಲಿ ಸೆಕ್ಷನ್ 144 ಜಾರಿ ಮಾಡಿದೆ. ಇದರಿಂದಾಘಿ ಹಂಪಿಗೆ ಬರುವ ರಸ್ತೆಗಳೆಲ್ಲವೂ ಸಹ ಬಿಕೋ ಎನ್ನುತ್ತಿವೆ.
ಐತಿಹಾಸಿಕ ಹಂಪಿಗೆ ವಿವಿಧ ದೇಶಗಳಿಂದ ವಿದೇಶಿ ಪ್ರವಾಸಿಗರು ಮತ್ತು ವಿವಿಧ ರಾಜ್ಯಗಳಿಂದಲೂ ದಿನ ನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಿರುವ ಹಿನ್ನಲೆಯಲ್ಲಿ. ಹೆಚ್ಚಿನ ಜನರು ಗುಂಪಾಗಿ ಸೇರುವ ಸಾಧ್ಯತೆಯಿಂದಲೂ ಕೊರೊನೊ ಸೋಂಕು ಹರಡುವ ಶಂಕೆ ಇರುವುದರಿಂದಾಗಿ ಹಂಪಿ ವೀಕ್ಷಣೆಗೆ ಪ್ರವಾಸಿಗರನ್ನು ನಿಷೇಧ ಮಾಡಲಾಗಿದೆ.

ಕಮಲಾಪುರದ ಕಡೆಯಿಂದ ಹಂಪಿಗೆ ಪ್ರವೇಶ ಹೊರಟರೆ ರಾಣಿ ಸ್ನಾನಗೃಹದಿಂದ ಕೆಳ ಮನೆ ಶಿವಾಲಯದ ದೇವಸ್ಥಾನದವರೆಗೆ ಮಹನಾವಮಿ ದಿಬ್ಬದ ಮಾರ್ಗವನ್ನು ಬಂದ ಮಾಡಲಾಗಿದೆ. ಈ ಪ್ರದೇಶದ ಕಮಲ ಮಹಲ, ಗಜಶಾಲೆ ಹಜಾರ ರಾಮ, ಅರಮನೆ ಆವರಣ, ಮಹಾನವಮಿ ದಿಬ್ಬ ಮೊದಲಾದವುಗಳ ವೀಕ್ಷಣೆ ಸಂಪೂರ್ಣ ಬಂದ್ ಆಗಿದೆ.

ಇನ್ನು ವಿಜಯನ ವಿಠ್ಠಲ ದೇವಸ್ಥಾನಕ್ಕೆ ತಳಾವಾರ ಘಟ್ಟದ ಪ್ರದೇಶದಿಂದ ತೆರಳುವುದಾದರೆ. ಬ್ಯಾಟರಿ ಚಾಲಿತಯಂತ್ರಗಳ ಪ್ರದೇಶದಲ್ಲಿಯೇ ಪ್ರವಾಸಿಗರನ್ನು ಬಿಡುತ್ತಿಲ್ಲ. ನಡೆದುಕೊಂಡು ಸೀತಿ ಸೆರುಗು ಪ್ರದೇಶದಿಂದ ಕೆಲ ಪ್ರವಾಸಿಗರು ಬರುತ್ತಿದ್ದಾರೆ. ಆದರೆ ಕಲ್ಲಿನ ರಥ, ಸಂಗೀತ ಕಂಬಗಳ ವೀಕ್ಷಣೆಗೆ ಸ್ಮಾರಕಕ್ಕೆ ಬೀಗ ಜಡಿದಿದೆ. ಹೊರ ಪ್ರದೇಶದಲ್ಲಿರುವ ತುಲಾಭಾರ ಪುರಂದ ಮುಂಟಪ ಇಂತಹ ಪ್ರದೇಶಗಳನ್ನು ಮಾತ್ರ ವೀಕ್ಷಿಸಬಹದುದು.

ಕಮಲಾಪುರದಿಂದ ನೇರವಾಗಿ ಹಂಪಿಗೆ ಬಂದರೆ ಉಗ್ರನರಸಿಂಹ, ಬಡವಿ ಲಿಂಗ ಕೃಷ್ಣ ದೇವಸ್ಥಾನ ಸಾಸುವೆ ಕಾಲುಗಣೇಶ ಮೊದಲಾದವುಗಳನ್ನು ದೂರದಿಂದಲೇ ವೀಕ್ಷಿಸಬಹುದು, ಇನ್ನು ಕಡ್ಡಿ ರಾಂಪುರ ಕಡೆಯಿಂದ ಬಂದರೆ ಸಾಸುವೆ ಕಾಳು ಗಣಪನ ಬಳಿ ಪೊಲೀಸರು ತಪಾಸಣೆ ನಡೆಸುತ್ತಾರೆ ಸ್ಥಳೀಯ ಜನರಿಗೆ ಇಲ್ಲಿ ಪ್ರವೇಶಕ್ಕೆ ನಿರ್ಭಂದವಿಲ್ಲ ಆದರೆ, ಹೊರಗಿನಿಂದಬರುವ ಪ್ರವಾಸಿಗರಿಗೆ ಸ್ಮಾರಕಗಳ ಪ್ರವೇಶ ಇಲ್ಲ ಬೇಕಾದರೆ ದೇವಸ್ಥಾನಕ್ಕೆ ಮಾತ್ರ ಹೋಗಬಹುದು ಎಂದು ತಿಳಿಸುತ್ತಾರೆ.
ವಿರೂಪಾಕ್ಷ ದೇವಸ್ಥಾನಕ್ಕೆ ಭಕ್ತರು ಬಂದು ಹೋಗುವುದಕ್ಕೆ ಅವಕಾಶ ನೀಡಿದೆ. ದೇವಸ್ಥಾನದಲ್ಲಿ ಪೂಜೆ ಎಂದಿನಂತೆ ನಡೆಯುತ್ತದೆ. ಆದರೆ ಪ್ರಸಾದ ವ್ಯವಸ್ಥೆ ಇಲ್ಲ. ಆದರೆ ಇಲ್ಲಿ ಪ್ರಸಾದ ವಿತರಣೆ ನಿಲ್ಲಿಸಿದೆ. ಪೂಜಾ ಕೈಂಕರ್ಯಗಳು ಮಾತ್ರ ನಡೆಯುತ್ತವೆ. ಇಂತಹ ಸ್ಥಿತಿ ಇದೇ ಮೊದಲ ಬಾರಿಗೆ ಇಲ್ಲಿ ಆಗಿದೆ ಎನ್ನುತ್ತಾರೆ ಸ್ಥಳೀಯ ಜನತೆ

ಪ್ರವೇಶಕ್ಕೆ ಟಿಕೆಟ್ ಇರುವ ವಿಜಯ ವಿಠ್ಠಲ, ಕಮಲ ಮಹಲ್ ಮತ್ತು ಕಮಲಾಪುರ್ ವಸ್ತು ಸಂಗ್ರಹಾಲಯದಲ್ಲಿ ಟಿಕೆಟ್ ನೀಡುವುದನ್ನು ನಿಲ್ಲಿಸಲಾಗಿದೆ. ಇವಲ್ಲದೆ ಇನ್ನು ಹಂಪಿಯಲ್ಲಿ ವಿವಿಧ ಸ್ಮಾರಕಗಳು ಇದ್ದು ಅವುಗಳ ಬಳಿ ತೆರಳದಂತೆ ಗೇಟ್ ಹಾಕಲಾಗಿದೆ. ಹೊರಗಿನಿಂದಲೇ ಬಂದ ಕೆಲ ಪ್ರವಾಸಗರು ನೋಡಿಕೊಂಡು ಹೋಗುತ್ತಿದ್ದಾರೆ.

ಈ ಬಗ್ಗೆ ತಿಳಿಯದೆ ದೆಹಲಿಯಿಂದ ಬಂದ ನೀತು, ಮಾನ್ವಿತ, ಬಿಹಾರದ ಹಿಮಂತ್ರಿ ಮೊದಲಾದ ಪ್ರವಾಸಗರು ಹಂಪಿಗೆ ಬಂದು ತಾವು ಸ್ಮಾರಕಗಳನ್ನು ನೋಡದೇ ಹಿಂದಿರುಗಬೇಕಾದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ಇಲ್ಲಿ ಹಲವಾರು ವರ್ಷಗಳಿಂದ ವ್ಯಾಪಾರ ಮಾಡಿಕೊಂಡಿದ್ದ ಬಸವರಾಜ್ ಪ್ರವಾಸಿಗರೇ ಬರುತ್ತಿಲ್ಲ ಅದಕ್ಕಾಗಿ ನಾವು ಅಂಗಡಿ ಬಂದ್ ಮಾಡಿರುವುದಾಗಿ ನಮ್ಮ ಆರ್ಥಿಕ ಪರಿಸ್ಥಿತಿಗೆ ಇದರಿಂದ ಧಕ್ಕೆ ಎನ್ನುತ್ತಾರೆ.

ಒಂದಡೆ 38 ಡಿಗ್ರಿಗೂ ಹೆಚ್ಚಿನ ತಾಪಮಾನ, ಇದರಿಂದ ಸುಡುತ್ತಿರುವ ಹಂಪಿಯ ಹೆಬ್ಬಂಡೆಗಳ ಬಿಸಿ, ಪ್ರವಾಸಿಗರಿಲ್ಲದೆ ಬಣಗುಡುತ್ತಿರುವ ಹಂಪಿಯ ಮತ್ತು ರತ್ನ ಮಾರಾಟ ಮಾಡಿ ವೈಭವವನ್ನು ಕಂದಿದ್ದ ಬೀದಿಗಳು ಬಿಕೋ ಎನ್ನುತ್ತಿರುವುದು ನೋವು ತರುವ ಸಂಗತಿಯಾಗಿದೆ.
ಹಂಪಿಯಲ್ಲಿದ್ದ ಬಹುತೇಕ ವಿದೇಶಿಗರನ್ನು ಹೊರಗೆ ಕಳುಹಿಸಿದೆ. ಹೊಟೇಲ್‍ಗಳನ್ನು ಮುಚ್ಚಿಸಿದೆ. ಸ್ಥಳೀಯ ಒಂದಡೆರೆಡು ಬೀದಿ ಬದಿಯ ಹೊಟೇಲ್ ಮತ್ತು ಬಾಳೆ ಹಣ್ಣು ಪೂಜಾ ಸಾಮಾಗ್ರಿ ಮಾರುವವರು ಬಿಟ್ಟರೆ ಉಳಿದಂತೆ ವ್ಯಾಪಾರ ವಹಿವಾಟು ಸ್ಥಗತಿಗೊಂಡಿದೆ.

Leave a Comment