ಕೊರೊನಾ ‌ಸೋಂಕಿನ ವ್ಯಕ್ತಿಯ ಪ್ರಯಾಣದ ವಿವರ

ಧಾರವಾಡ ಮೇ.31: ಮೇ.28 ರಂದು ಕೋವಿಡ್ 19 ದೃಢಪಟ್ಟಿರುವ ಜಿಲ್ಲೆಯ  ಪಿ – 2710 ಇವರ ಪ್ರಯಾಣ ವಿವರಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಜಿಲ್ಲಾಡಳಿತ ಪ್ರಕಟಿಸಿದೆ.
ಪಿ-2710( 65 ವರ್ಷ, ಪುರುಷ)  ಇವರು ಹುಬ್ಬಳ್ಳಿ ನಗರದ ಬೆಂಗೇರಿ ನಿವಾಸಿಯಾಗಿದ್ದಾರೆ.
ಇವರು ಫೆಬ್ರುವರಿ 2020 ರ ತಿಂಗಳಿನಲ್ಲಿ ಪತ್ನಿ ಹಾಗೂ ಮಗನೊಂದಿಗೆ ಮುಂಬೈಗೆ ಹೋಗಿದ್ದರು.
ಮೇ  25  ರಂದು ಅನಾರೋಗ್ಯದ ನಿಮಿತ್ಯ ಚಿಕಿತ್ಸೆಗಾಗಿ ಮುಂಬೈನ ರಾಜವಾಡಿ ಆಸ್ಪತ್ರೆಗೆ ದಾಖಲಾಗಿದ್ದರು.
ಮೇ 26 ರಂದು ಮುಂಬೈ ರಾಜವಾಡಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮಧ್ಯಾಹ್ನ 01:30  ಕ್ಕೆ ಖಾಸಗಿ ಅಂಬ್ಯೂಲೆನ್ಸ್ (  ಎಂ.ಹೆಚ್. – 04 – ಎಫ್ ಕೆ  – 1480 ) ಮೂಲಕ ಕುಟುಂಬದ 06 ಸದಸ್ಯರು ಹಾಗೂ ಇಬ್ಬರು ವಾಹನ ಚಾಲಕರೊಂದಿಗೆ ಮುಂಬೈಯಿಂದ ಹೊರಟು ನಿಪ್ಪಾಣಿ ಚೆಕ್ ಪೋಸ್ಟ್‌ ನಲ್ಲಿ ತಪಾಸಣೆ ( ಥರ್ಮಲ್ ಸ್ಕ್ರೀನಿಂಗ್ ) ಮಾಡಿಸಿಕೊಂಡು  ಮೇ 27  ರಂದು  ಬೆಳಿಗ್ಗೆ 07:30 ಕ್ಕೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿರುತ್ತಾರೆ.  ಅಂದೇ ಇವರ ಗಂಟಲು ದ್ರವ ಪರೀಕ್ಷೆಗೊಳಪಡಿಸಲಾಗಿರುತ್ತದೆ. ಇಬ್ಬರು ವಾಹನ ಚಾಲಕರು ವಾಪಸ್ ಮುಂಬಯಿಗೆ ಹಿಂದಿರುಗಿರುತ್ತಾರೆ .  ಮೇ  28  ರಂದು ಪಿ- 2710 ಇವರು ಕೋವಿಡ್ -19 ಸೋಂಕಿತರೆಂದು ದೃಢಪಟ್ಟಿರುತ್ತದೆ
ಈ ಎಲ್ಲ ಅಂಶಗಳ ಹಿನ್ನಲೆಯಲ್ಲಿ ಈ ವ್ಯಕ್ತಿಯನ್ನು  ಸಂಪರ್ಕಿಸಿದ ಸಾರ್ವಜನಿಕರಿಗೆ ಕೊರೊನಾ ಸೋಂಕು ತಗಲುವ ಸಾಧ್ಯತೆ ಇರುತ್ತದೆ.
ಆ ಎಲ್ಲ ವ್ಯಕ್ತಿಗಳು ಕೂಡಲೇ ಕೊರೊನಾ ಸಹಾಯವಾಣಿ 1077 ಗೆ ಕರೆಮಾಡಿ ತಮ್ಮ ವಿವರಗಳನ್ನು ನೀಡಬೇಕು ಹಾಗೂ ಕೂಡಲೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ಹಾಜರಾಗಿ ಪರೀಕ್ಷೆಗೆ ಒಳಪಡಬೇಕು  ಎಂದು  ಪ್ರಕಟಣೆ ತಿಳಿಸಿದೆ.

Share

Leave a Comment