ಕೊರೊನಾ ಹೋಂ ಕ್ವಾರಂಟೈನ್ ವ್ಯಕ್ತಿಯಿಂದ ಕಿರಿಕ್.

 

ವಿಜಯಪುರ,ಮಾ.31-ಕೊರೊನಾ ಸೋಂಕು ಶಂಕೆಯ ಹಿನ್ನೆಲೆಯಲ್ಲಿ ಹೋಂ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಯೊಬ್ಬ ಕೈ‌ ಮೇಲೆ ಸೀಲ್ (ಹಚ್ಚೆ) ಹಾಕಿಸಿಕೊಳ್ಳಲು ಕಿರಿಕ್ ಮಾಡಿದ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲ್ಲೂಕಿನ ವಂದಾಲ್ ಗ್ರಾಮದಲ್ಲಿ ನಡೆದಿದೆ.

ಗುಜರಾತ್ ನಿಂದ ಬಂದಿದ್ದ ಈ ವ್ಯಕ್ತಿಗೆ ಮನೆಯಲ್ಲಿ ನಿಗಾದಲ್ಲಿ ಇರುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದರು. ಮನೆಯ ನಿಗಾದಲ್ಲಿ ಇಟ್ಟಿರುವ ಕುರಿತು ಕೈ ಮೇಲೆ ಮುದ್ರೆ ಹಾಕಲು ಅಧಿಕಾರಿಗಳು ಮುಂದಾದಾಗ ತಹಶೀಲ್ದಾರ್ ಸೇರಿದಂತೆ ಇತರೆ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ್ದಾನೆ. ಮನೆಯಲ್ಲಿಯೇ ಇರುತ್ತೇನೆ ಸೀಲ್ ಹಾಕಬೇಡಿ ಎಂದು ನಿಡಗುಂದಿ ತಹಶೀಲ್ದಾರ ಪ್ರಭು ವಾಲಿ ಅವರಿಗೆ ಆವಾಜ್ ಹಾಕಿದ್ದಾನೆ. ನಂತರ ಅಧಿಕಾರಿಗಳು ವ್ಯಕ್ತಿಗೆ ತಿಳುವಳಿಕೆ ಹೇಳಿ ಕೈಮೇಲೆ ಮುದ್ರೆ ಹಾಕಿದ್ದಾರೆ. ” ನಾನು ಇಲ್ಲಿಗೆ ಬಂದು ಈಗಾಗಲೇ ಹತ್ತು ದಿನ ಕಳೆದಿವೆ. ಇನ್ನೂ ನಾಲ್ಕುದಿನ ಹೋಂ ಕ್ವಾರಂಟೇನ್ ನಲ್ಲಿರುತ್ತೇನೆ. ನಾಲ್ಕು ದಿನ ಬಿಟ್ಟು ಬಂದು ಕೈಮೇಲೆ ಹಾಕಿರುವ ಮುದ್ರೆ ಅಳಿಸಿ ಹಾಕಿ” ಎಂದು ಅಧಿಕಾರಿಗಳಿಗೆ ಆವಾಜ್ ಹಾಕಿದ್ದಾನೆ. ನೀವು ಹಾಕಿದ ಮುದ್ರೆ ಅಳಸಿ ಹೋಗದೆ ಇದ್ದರೆ ನಾನು ಹೇಗೆ ತಿರುಗಾಡಬೇಕು ಎಂದು ಅಳಲು ತೋಡಿಕೊಂಡಿದ್ದಾನೆ. ಸಾಕಷ್ಟು ಕಸರತ್ತಿನ ಬಳಿಕ ಅಧಿಕಾರಿಗಳು ವ್ಯಕ್ತಿ ಮತ್ತು ಆತನ ಮಗನ ಕೈ ಮೇಲೆ ಮುದ್ರೆ ಹಾಕಿ ಹೋಂ ಕ್ವಾರಂಟೈನ್ ನಲ್ಲಿರುವಂತೆ ಸೂಚಿಸಿದ್ದಾರೆ..

Leave a Comment