ಕೊರೊನಾ ಸೋಂಕಿನಿಂದ ಮತ್ತೆ ಮೂವರು ಗುಣಮುಖ

 

ಕಲಬುರಗಿ,ಮೇ.22-ಕಳೆದೆರಡು ದಿನಗಳಿಂದ ಕೊರೊನಾ ಸೋಂಕಿನ ಹೊಸ ಪ್ರಕರಣಗಳು ಪತ್ತೆಯಾಗದೇ ಇರುವುದು ಮತ್ತು ಸೋಂಕಿನಿಂದ ಗುಣಮುಖರಾಗಿ ಮೂವರು ಆಸ್ಪತ್ರೆಯಿಂದ ಬಿಡುಗಡೆಯಾಗಿರುವುದು ಜಿಲ್ಲೆಯ ಜನತೆಯಲ್ಲಿ ಸ್ವಲ್ಪ ನಿರಾಳತೆ ಮೂಡಿಸಿದೆ.

ಕೊರೊನಾ ಸೋಂಕು ಪೀಡಿತರಾಗಿದ್ದ ನಗರದ ಕರೀಂನಗರ ಡಬರಾಬಾದ ಕ್ರಾಸ್ ನ 35 ವರ್ಷದ ಪುರುಷ  (ಪಿ-697), ಇಸ್ಲಾಮಾಬಾದ ಕಾಲೋನಿಯ 36 ವರ್ಷದ ಮಹಿಳೆ (ಪಿ-698) ಮತ್ತು ಇದೇ ಕಾಲೋನಿ 41 ವರ್ಷದ ಪುರುಷ  (ಪಿ-699) ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಇದುವರೆಗೆ ಕೊರೋನಾ ಪೀಡಿತ 134 ಜನರಲ್ಲಿ 58 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದಂತಾಗಿದ್ದು, ಉಳಿದಂತೆ 7 ಜನ ಸಾವನ್ನಪ್ಪಿದ್ದಾರೆ. 69 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

Leave a Comment