ಕೊರೊನಾ ಸಮರಕ್ಕೆ ಕೈಜೋಡಿಸಿದ ಕಿರುತೆರೆ ಕಲಾವಿದರು

ಈ ಮಾರಕ ಸೊಂಕು ಇಡೀ ವಿಶ್ವವನ್ನೇ ಕಾಡುತ್ತಿದೆ. ಜನರು ಇದರಿಂದ ಪರಸ್ಪರ ತುಂಬಾ ದೂರ ಉಳಿದ್ದಿದ್ದಾರೆ. ಇಂತಹಾ ಸಂದರ್ಭದಲ್ಲಿ ತಮ್ಮ ಪ್ರಾಣವನ್ನ ಲೆಕ್ಕಿಸದೆ ವೈದ್ಯಕೀಯ ಸಿಬ್ಬಂದಿ ಕೊರೋನಾ ವಿರುದ್ಧ ನೇರ ಹೋರಾಟಕ್ಕೆ ಇಳಿದಿದ್ದಾರೆ. ಇದೇ ನಿಟ್ಟಿನಲ್ಲಿ ಜೀ ವಾಹಿನಿನಯಲ್ಲೂ ಕೂಡ ‘#ವಿಇನ್‌ಕೊರೋನಾಔಟ್’ ಪ್ರಚಾರಕ್ಕೆ ಎಲ್ಲಾ ಕಿರುತೆರೆ ನಟ-ನಟಿಯರು ಕೈ ಜೋಡಿಸಿ ತಮ್ಮ ಪ್ರೀತಿಯ ಫ್ಯಾನ್ಸ್‌ಗಳಿಗೆ ಸಂದೇಶ ನೀಡಿದ್ದಾರೆ.

ಕೊರೋನಾ ವೈರಸ್ ವಿರುದ್ಧ ಉದ್ದೇಶಿಸಿ ಜೀ ಎಂಟರ್‌ಟೈನ್‌ಮೆಂಟ್ ನಿಮ್ಮ ಮೆಚ್ಚಿನ ತಾರೆಯರ ಜೊತೆ ಸೇರಿಕೊಂಡು ಒಂದು ಒಳ್ಳೆಯ ಮೆಸೇಜ್ ಕೊಡುವುದರ ಮೂಲಕ ಸಾರ್ವಜನಿಕ ಜಾಗೃತಿ ಮೂಡಿಸಲು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋಗಳು ಮತ್ತು ಸ್ನಾಪ್‌ಗಳನ್ನ ತೆಗೆದು ತಮ್ಮ ಪ್ರೀತಿಯ ಸಂದೇಶವನ್ನ ಹಂಚಿಕೊಂಡಿದ್ದಾರೆ.

s2
ಕೊರೊನಾ ತಡೆಗೆ ದೇಶದಾದ್ಯಾಂತ ಮುನ್ನೆಚ್ಚರಿಕೆ ಕ್ರಮಗಳನ್ನು ಭಾರತ ಸರ್ಕಾರ ಕೈಗೊಂಡಿದೆ. ಕೊರೋನಾದಿಂದ ಇಡೀ ದೇಶವೇ ಸಂಪೊರ್ಣ ಸ್ತಬ್ದವಾಗಿದೆ. ಇದೇ ಕಾಳಜಿಯಲ್ಲಿ ಜೀ ಎಂಟರ್‌ಟೈನ್‌ಮೆಂಟ್ ಮತ್ತು ಜೀಲ್ ಫ್ಯಾನ್ಸ್‌ಗಳಿಗೆ ತಮ್ಮ ಫ್ಯಾಮಿಲಿ, ಫ್ರೆಂಡ್ಸ್,ಮತ್ತು ಅಕ್ಕ-ಪಕ್ಕದವರಿಗೆ ಎಚ್ಚರಿಕೆಯಿಂದ ಇರಲು ನಿಮ್ಮ ಜೀ ಕುಟುಂಬದೊದಿಂಗೆ ಕೈ ಜೋಡಿಸಿ ತಮ್ಮಲ್ಲೆರ ಬಗ್ಗೆ ಕಾಳಜಿವಾಹಿಸಲು ಒಂದು ಪುಟ್ಟ ಸಂದೇಶವನ್ನು ಕೊಡಲು ಸಾಮಾಜಿಕ ಜಾಲತಾಣಗಳಲ್ಲಿ ಪ್ರಯತ್ನ ಮಾಡಿದೆ.

ಮನರಂಜನೆ ಜೊತೆ ಜೊತೆಗೆ ನಿಮ್ಮ ಕಾಳಜಿಯೂ ನಮ್ಮಗೆ ಮುಖ್ಯ ಕೊರೋನಾ ವಿರುದ್ಧ ನಿಮ್ಮ ಜೀ ಕನ್ನಡ ಪ್ರಪ್ರಥಮ ಬಾರಿಗೆ ಫೇಸ್‌ಬುಕ್‌ನಲ್ಲಿ”ಹೊರಗಡೆ ಹೋದರೆ ಕೊರೋನಾ ಮನೆಯಲ್ಲೇ ಸುರಕ್ಷಿತವಾಗಿ ಇರೋಣ”ಎನ್ನುವ ಜಾಗೃತಿ ಅಭಿಯಾನ ಶುರು ಮಾಡಿತ್ತು. ಈ ಹೋರಾಟಕ್ಕೆ ಜೀ ಕುಟುಂಬದ ತಾರೆಯರು ಹಾಗೂ ಸ್ಯಾಂಡಲ್‌ವುಡ್‌ನ ನಟ-ನಟಿಯರಿಂದ ಸಿಕ್ತಿದೆ ಭರ್ಜರಿ ಸಾಥ್. ನಿಮ್ಮ ಮೆಚ್ಚಿನ ಸ್ಟಾರ್ ನಟ-ನಟಿಯರು ಪ್ರೊಫೈಲ್ ಪಿಕ್ಚರ್ ಫ್ರೇಮ್ ಅನ್ನು ಬದಲಾಯಿಸುತ್ತಿದ್ದಾರೆ.ಇನ್ಯಾಕೆ ತಡ ನೀವೂ ಶುರುಮಾಡಿ.ಕೊರೋನಾ ವಿರುದ್ಧ ಒಗ್ಗಟ್ಟಾಗಿ ಹೋರಾಡೋಣ ನಮ್ಮ ದೇಶದಿಂದ ಹೊಡೆದೋಡಿಸೋಣ.

Leave a Comment