ಕೊರೊನಾ ಸಂತ್ರಸ್ತರಿಗೆ ಕೋನರಡ್ಡಿ ಸಹಾಯಹಸ್ತ

ನವಲಗುಂದ,ಏ7: ಕೊರೊನಾ ಸೋಂಕನ್ನು ಓಡಿಸಲು ಸರ್ಕಾರಕ್ಕಿಂತ ಹೆಚ್ಚಾಗಿ ಸಾರ್ವಜನಿಕರು ಒಗ್ಗಟ್ಟಾಗಿದ್ದುಕೊಂಡು ಮನೆಯಿಂದ ಹೊರಗಡೆ ಬರದಂತೆ ನಮಗೆ ನಾವೇ ನಿರ್ಬಂದ ಹೇರಿಕೊಂಡು ಸಾಮಾಜಿಕ ಅಂತ ಕಾಯ್ದುಕೊಳ್ಳುವುದು ಅತ್ಯವಶ್ಯವಾಗಿದೆ ಎಂದು ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಹೇಳಿದರು.
ಸೋಮವಾರ ಪಟ್ಟಣದ ವಿವಿಧ ವಾರ್ಡಗಳಲ್ಲಿ ಹಾಗೂ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಅವರು ಕೊರೊನಾ ಸೋಂಕಿನಿಂದ ಭಯಬೀತರಾದ ಜನರೊಂದಿಗೆ ಮಾತನಾಡಿ ಹಣ್ಣು ಹಂಪಲ, ಮಾಸ್ಕ್ ಹಾಗೂ ಊಟದ ವ್ಯವಸ್ಥೆ ಮಾಡಿ ಜನರಲ್ಲಿ ಧ್ಯರ್ಯ ತುಂಬಿದರು.
ತಾಲ್ಲೂಕಿನಲ್ಲಿ ಹನ್ನೊಂದು ಶಂಕೀತರನ್ನು ಪರೀಕ್ಷೆಗೆ ಒಳಪಡಿಸಿದ ನಂತರ ನೆಗೆಟಿವ್ ವರದಿ ಬಂದಿರುವುದರಿಂದ ಕ್ಷೇತ್ರದ ಜನತೆ ನಿಟ್ಟುಸಿರು ಬಿಡುವಂತಾಗಿದೆ. ಯಾರೂ ಭಯಬೀತರಾಗಬೇಡಿ ನಿಮ್ಮ ಜೊತೆ ನಾವಿದ್ದೇವೆ. ಕೊರೊನಾ ಸೋಂಕನ್ನು ಓಡಿಸಲು ಸಂಕಲ್ಪ ಮಾಡೋಣ. ಸರ್ಕಾರವು ಸಮಯಕ್ಕೆ ಅನುಗುಣವಾಗಿ ಸಹಾಯ ಸಹಕಾರ ನೀಡಬೇಕೆಂದು ಎನ್.ಎಚ್.ಕೋನರಡ್ಡಿ ಒತ್ತಾಯಿಸಿದರು.
ಜಿಲ್ಲಾ ಹಾಗೂ ತಾಲ್ಲೂಕಾ ಆಡಳಿತ ಕೊರೊನಾ ಸೋಂಕು ತಡೆಯಲು ಹಗಲಿರುಳು ಪ್ರಯತ್ನಿಸುತ್ತಿದ್ದಾರೆ. ಅವರೊಂದಿಗೆ ನಾವು ಬೆಂಬಲಿಸೋಣ ಎಂದು ಹೇಳಿ ಪೊಲೀಸ್, ಪುರಸಭೆ ಹಾಗೂ ಇನ್ನೀತರ ನೌಕರರಿಗೆ ಜೆ.ಡಿ.ಎಸ್. ಪಕ್ಷದ ಪುರಸಭೆ ಸದಸ್ಯರಿಂದ ಹಮ್ಮಿಕೊಂಡ  ಊಟವನ್ನು ಕೋನರಡ್ಡಿ ಉಣಬಡಿಸಿದರು.
ಪುರಸಭೆ ಸದಸ್ಯರಾದ ಪ್ರಕಾಶ ಶಿಗ್ಲಿ, ಜೀವನ ಪವಾರ, ಮಹಾಂತೇಶ ಭೋವಿ, ಮೋದಿನ ಶಿರೂರ, ಸುರೇಶ ಮೇಟಿ, ಬಾಬಾಜಾನ ಮಕಾನದಾರ, ಹನುಮಂತಪ್ಪ ವಾಲ್ಮೀಕಿ, ಹುಸೇನಬಿ ಧಾರವಾಡ, ಅಪ್ಪಣ್ಣ ಹಳ್ಳದ, ಮುಖಂಡರಾದ ಆನಂದ ಹವಳಕೋಡ, ಕರಿಯಪ್ಪ ಹರ್ಲಿ, ಚಂದ್ರಲೇಖಾ ಮಳಗಿ ಉಪಸ್ಥಿತರಿದ್ದರು.

Leave a Comment