ಕೊರೊನಾ ಸಂಕಷ್ಟದಲ್ಲಿ ಆಟೋ ಚಾಲಕರಿಗೆ ವಿನೋದ್ ವಿಶೇಷ ನೆರವು

ಸಮಾಜಸೇವೆ ಮಾಡಬೇಕು ಎಂದು ಅದೆಷ್ಟೋ ಜನಕ್ಕೆ ಆಸೆ ಇರುತ್ತದೆ, ಆದರೆ ಎಲ್ಲಾವು ಅಂದಕೊಂಡಂತೆ ಆಗುವದಿಲ್ಲ,  ಆದರೆ ನಮ್ಮವರೆ ಆದ ಕನ್ನಡಿಗ
ಡಿಆರ್ ಡಿಓ ವಿಜ್ಞಾನಿ ವಿನೋದ್ ಕರ್ತವ್ಯ ಅವರು ಸಮಾಜ ಸೇವೆಗೆ ತಮ್ಮನ್ನ ತಾವು ಸಮರ್ಪಿಸಿಕೊಂಡಿಬಿಟ್ಟಿದ್ದಾರೆ…. ಹೌದು ಇವರು ಮಾಡುವ ಕೆಲಸವೆಲ್ಲಾ ನಿಜಕ್ಕೂ ಮೆಚ್ಚುವಂತಹದು.

ಕೊರೊನಾ ಸೋಂಕಿನಿಂದ ಇಡೀ ದೇಶವೇ ತತ್ತರಿಸಿ ಹೋಗಿದೆ, ಅಂತಹ ಸಮಯದಲ್ಲಿ ಕೊರೋನಾ ವಾರಿಯರ್ ಆಗಿ ಸೇವೆಗೆ ಇಳಿದ ವಿನೋದ್‌ ಅವರು ಒಂದಲ್ಲ ಒಂದು ರೀತಿ ಜನರಿಗೆ ನೆರವಾಗುತ್ತಿದ್ದಾರೆ. ಇತ್ತೀಚೆಗೆ ದೇಶದೆಲ್ಲೆಡೆ ಮಾಸ್ಕ್‌ ಧರಿಸುವುದು ಕಡ್ಡಾಯಗೊಳಿಸಿದ ಬಳಿಕ ಜನರಿಗಾಗಿ ವಿವಿಧ ಮಾಸ್ಕ್‌ಗಳು ಮಾರುಕಟ್ಟೆಗೆ ಬಂದವು, ಹೋದವು, ಆ ವೇಳೆ ಮಾತುಬಾರದವರಿಗೆ ಮಾತ್ರ ಯಾರೊಬ್ಬರು ತಲೆಕೆಡಿಸಿಕೊಂಡಿಲ್ಲ, ಆದರೆ ವಿನೋದ್‌ ಅವರು ತಮ್ಮ ಸ್ನೇಹಿತರ ಸಂಕಟ ನೋಡಿ ಕೋಡಲೇ ಮಾತು ಬಾರದ ಜನರಿಗಾಗಿಯೇ ಹೊಸ ರೀತಿಯ ಸ್ಮೈಲ್ ಮಾಸ್ಕ್ ನ್ನು ಅವಿಷ್ಕಾರಿಸಿ ಸೈಎನಿಸಿಕೊಂಡಿದ್ದಾರೆ.

ಮಾಸ್ಕ್ ಧರಿಸಿದ್ದರಿಂದ  ಮಾತು ಆಡುವುದನ್ನು ನೋಡಲಾಗದೇ  ಅವರು ಏನ್ ಹೇಳ್ತಿದ್ದಾರೆ ಎಂಬುದು ಅರ್ಥವಾಗದೇ ಪರದಾಡುತ್ತಿದ್ದರು, ಆಗ ನೆರವಿಗೆ ಬಂದ ಡಿಆರ್ಡಿಒ ವಿಜ್ಞಾನಿ ಹಾಗೂ ಬೆಂಗಳೂರಿನ ಸಂಪಂಗಿರಾಮನಗರ ನಿವಾಸಿ ವಿನೋದ್ ಕರ್ತವ್ಯ ಹೊಸ ಸ್ಮೈಲ್ ಮಾಸ್ಕ್ ನ್ನು ಸಿದ್ದಪಡಿಸಿ, ಹಲವರಿಗೆ ಉಚಿತವಾಗಿ ಹಂಚುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಕೊರೋನಾ ವಾರಿಯರ್ ಆಗಿ ಡಿಐಪಿಆರ್ ನಲ್ಲಿ ಕಳೆದ ಎರಡು ತಿಂಗಳಿಂದ ಕೆಲಸ ಮಾಡುತ್ತಿದ್ದಾಗ ಅವರ ಜೊತೆ ಕೆಲಸ ಮಾಡ್ತಿದ್ದ ಸಹೋದ್ಯೋಗಿಯೊಬ್ಬರಿಗೆ ಮಾತು ಬಾರದೇ ಮಾಸ್ಕ್‌ ಧರಸಿದಾಗ  ಆಗುತ್ತಿದ್ದ ಕಷ್ಟವನ್ನ ವಿನೋದ್ ಬಳಿ ಹೇಳಿಕೊಂಡಿದ್ದರು. ಆಗ ಕೂಡಲೇ ತಂದೆ ತಾಯಿ, ಪತ್ನಿಯ ಜೊತೆಗೂಡಿ ಈ ಮಾಸ್ಕ್‌ ನ್ನು ತಯಾರಿಸಿದ್ದರು.

a2
ಇದೀಗ ಆಟೋ ಚಾಲಕರಿಗೆ ವಿಶೇಷವಾಗಿ ನೆರವಾಗುವ ಮೂಲಕ ಮತ್ತೊಂದು ಸೇವೆಗೆ ಮುಂದಾಗಿದ್ದಾರೆ.  ಕಳೆದೆರೆಡು ೨ ತಿಂಗಳಿನಿಂದ ಆಟೋ ಓಡಿಸದೇ ಕಂಗಲಾಗಿದ್ದ ಆಟೋ, ಟಾಕ್ಸಿ ಚಾಲಕರಿಗೆ ಸರಕಾರದ ವತಿಯಿಂದ ೫೦೦೦ ರೂ ಪರಿಹಾರ ಧನವನ್ನು ಘೋಷಿಸಿತ್ತು, ಆದರೆ ಕೆಲವರಿಗೆ ಅದಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು ಎಂದು ಇನ್ನು ಗೊಂದಲದಲ್ಲಿದ್ದಾರೆ. ಇದನ್ನು ಅರಿತ ವಿನೋದ್‌ ಕೂಡಲೇ ತನ್ನ ಚಾಲಕರ  ಮಿತ್ರರಿಗೆ, ಪರಿಹಾರ ಧನ ಪಡೆಯಲು ಉಚಿತ ವಾಗಿ ಆನ್‌ಲೈನ್ ನಲ್ಲಿ ನೊಂದಣಿ ಮಾಡಲು ಮುಂದಾಗಿದ್ದಾರೆ. ನಗರದಲ್ಲಿ ಪ್ರತಿ ದಿನ ಸಂಜೆ 4.30 ರಿಂದ 6.00 ರ ತನಕ ವಿನೋದ್‌ ಅವರು ಈ ಕೆಲಸ ಮಾಡಲು ಶುರು ಮಾಡಿದ್ದಾರೆ.  ಇದ್ದರಿಂದ ಅನೇಕ ಅವಿದ್ಯಾವಂತ ಆಟೋ ಚಾಲಕರು ಅರ್ಜಿ ಸಲ್ಲಿಸಲು ಅನುಕೂಲವಾಗಲಿದೆ ಎಂಬುದು ಅವರ ಉದ್ದೇಶವಾಗಿದೆ.

ಇದಕ್ಕಾಗಿ ವಿನೋದ್‌ ಅವರು ಪ್ರತಿದಿನ ಸಂಜೆ  ಕೈನಲ್ಲಿ ಲಾಪ್‌ ಟಾಪ್‌ ಹಿಡಿದು ಮೈಸೂರ್‌ ಬ್ಯಾಂಕ್‌  ವೃತ್ತದ ಬಳಿ ಹಾಜರಾಗಲಿದ್ದಾರೆ. ಚಾಲಕರಿಂದ ಯಾವುದೇ ಶುಲ್ಕ ಪಡೆಯದೇ ಅರ್ಜಿ ಸಲ್ಲಿಸಿ ಕೊಡುತ್ತಾರೆ. ನೀವು ಇವರನ್ನು ಸಂಪರ್ಕಿಸಲು 9611733032ಗೆ ಕರೆ ಮಾಡಬಹುದು.

ಈ ಮೊದಲು ಹಲವು ಸರಕಾರಿ ಶಾಲೆಗಳಲ್ಲಿ ಉಚಿತವಾಗಿ ಇಂಗ್ಲೀಷ್‌ ಹಾಗೂ ಮನೋವಿಕಾಸ ಪಾಠ ಮಾಡುವ ಮೂಲಕ ಗಮನ ಸೆಳೆದಿದ್ದ ವಿನೋದ್‌ ಕರ್ತವ್ಯ ಅವರು ಕೊರೊನಾ ಸಂಕಷ್ಟದಲ್ಲೂ ಜನರ ಸಂಕಷ್ಟಕ್ಕೆ ಮಿಡಿದಿದ್ದಾರೆ. ಇವರ ಈ ಕೆಲಸಕ್ಕೆ ಸ್ವಾಮಿ ವಿವೇಕಾನಂದರೇ ಸ್ಪೂರ್ತಿದಾಯಕ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ದಿನದ ೨೪ ಗಂಟೆಯೂ ಸಮಾಜ ಸೇವೆಗೆ ಬದ್ದ ಎನ್ನುವ ಇವರು ಜೀವನದಲ್ಲಿ ಉತ್ತಮ ಕೆಲಸ ಮಾಡಲು ಸಾಕಷ್ಟು ದಾರಿ ಹಾಗೂ ಸಮಯವಿದೆ, ಅದನ್ನು ಇಂತಹ ಒಳ್ಳೆಯ ಕೆಲಸಕ್ಕೆ ಬಳಸಿಕೊಳ್ಳುವುದರಿಂದ ಮನತೃಪ್ತಿಸಿಗಲಿದೆ ಎನ್ನುತ್ತಾರೆ ವಿನೋದ್

Share

Leave a Comment