ಕೊರೊನಾ ವೈರಸ್‌ಗೆ ಔಷಧಿ ಇದೆ- ನಟಿ ರಾಖಿ ಸಾವಂತ್..!

 

ಮುಂಬೈ, ಫೆ ೪- ಬಾಲಿವುಡ್ ನಟಿ ರಾಖಿ ಸಾವಂತ್ ಹುಚ್ಚಾಟಕ್ಕೆ ಕೊನೆಯ ಇಲ್ಲದಂತಾಗಿದೆ. ಹೌದು ಕೊರೊನಾ ವೈರಸ್‌ಗೆ ಹೆದರಿ ಎಲ್ಲರು ಚೀನಾದಿಂದ ದೂರ ಉಳಿದರೇ, ರಾಖಿ ವೈರಸ್‌ಗೆ ಕಡಿವಾಣ ಹಾಕುತ್ತೇನೆ ಎಂದು ಹೇಳಿಕೊಂಡು ಔಷಧವನ್ನು ಚೀನಾಗೆ ತೆಗೆದುಕೊಂಡು ಹೋಗಿದ್ದಾರಂತೆ.

ಈ ವಿಚಾರವನ್ನು ಸ್ವತಃ ಅವರೇ ಜಾಲತಾಣದಲ್ಲ ಪ್ರಕಟಿಸಿದ್ದಾರೆ. ವಿವಾದಗಳಿಂದಲೇ ಹೆಚ್ಚು ಸದ್ದು ಮಾಡುತ್ತಿರುವ ರಾಖಿ ಈ ಬಾರಿ ಕೊರೊನಾ ವೈರಸ್‌ಗೆ ಮದ್ದು ತರಿಸಿದ್ದೇನೆ, ಅದನ್ನು ಸೋಂಕುಪೀಡಿತರಿಗೆ ನೀಡಿ ಗುಣ ಮಾಡುತ್ತೇನೆ ಎಂದು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಅಷ್ಟೆ ಅಲ್ಲ ಆ ಔಷಧಿಯೊಂದಿಗೆ ರಾಖಿ ಈಗ ಚೀನಾದತ್ತ ಪ್ರಯಾಣ ಬೆಳೆಸಿದ್ದಾರೆ. ನಾಸಾದಿಂದ ವಿಶೇಷವಾಗಿ ತರಿಸಲಾಗಿರುವ ಔಷಧವನ್ನು ಚೀನಾಗೆ ತೆಗೆದುಕೊಂಡು ಹೋಗುತ್ತೇನೆ ಎಂದು ಅವರು ವಿಮಾನದಲ್ಲಿ ಟೇಕ್‌ಆಫ್ ಆಗುವ ಮುನ್ನ ವಿಡಿಯೋ ಮಾಡಿದ್ದಾರೆ.

ತಮ್ಮ ವಿಡಿಯೋದಲ್ಲಿ ಮೋದಿಗೆ ಅವರಿಗೆ ಹೀಗೆ ಹೇಳಿದ್ದಾರೆ. ನಾನು ನಾಸಾದಿಂದ ಕೊರೊನಾ ವೈರಸ್ ಕೊಲ್ಲಲು ಔಷಧ ತರಿಸಿದ್ದೇನೆ. ಅದನ್ನು ತೆಗೆದುಕೊಂಡು ಚೀನಾಗೆ ಹೋಗುತ್ತಿದ್ದೇನೆ ಎಂದಿದ್ದಾರೆ. ಅದನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನು ವಿಡಿಯೋದಲ್ಲಿ ರಾಖಿ ಕೆಂಪು ಬಣ್ಣದ ಬಟ್ಟೆ ತೊಟ್ಟಿದ್ದು, ಕೊರಳಿನಲ್ಲಿ ಮಾಂಗಲ್ಯವಿದೆ.
ಕೊರೊನಾ ವೈರಸ್‌ನಿಂದಾಗಿ ಚೀನಾದಲ್ಲಿ ೪೦೦ ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಚೀನಾದಲ್ಲಿರುವ ಭಾರತೀಯರನ್ನು ಈಗಾಗಲೇ ಹಿಂದಕ್ಕೆ ಕರೆಸಿಕೊಳ್ಳಲಾಗಿದ್ದು, ಅವರನ್ನು ನಿಗಾ ಘಟಕದಲ್ಲಿ ಇಡಲಾಗಿದೆ. ಆದರೆ ರಾಖಿ ನಡೆ ಭಾರಿ ಅಚ್ಚರಿ ಮೂಡಿಸಿದೆ.

Leave a Comment